Asianet Suvarna News Asianet Suvarna News

ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಮಹತ್ವ: ಬಜೆಟ್ ಬಳಿಕ ನಿರ್ಮಲಾ ಸುದ್ದಿಗೋಷ್ಠಿ!

ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ನಿಡಲಾಗಿದೆ ಎಂದಿದ್ದಾರೆ. ರೈತರೇ ನಮ್ಮ ಪ್ರಾಥಮಿಕ ಆದ್ಯತೆ ಹೀಗಾಗಿ ಈ ಬಜೆಟ್‌ನಲ್ಲಿ ರೈತರು ಹಾಗೂ ಕೃಷಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ರೈತರ ಜೀವನ ಸುಧಾರಣೆಯೇ ನಮ್ಮ ಉದ್ದೇಶವಾಗಿದೆ. ಇದರೊಂದಿಗೆ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಬಲಶಾಲಿಯಾಗಲಿದೆ ಎಂದಿದ್ದಾರೆ.

ನವದೆಹಲಿ(ಜ.01): ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ನಿಡಲಾಗಿದೆ ಎಂದಿದ್ದಾರೆ. ರೈತರೇ ನಮ್ಮ ಪ್ರಾಥಮಿಕ ಆದ್ಯತೆ ಹೀಗಾಗಿ ಈ ಬಜೆಟ್‌ನಲ್ಲಿ ರೈತರು ಹಾಗೂ ಕೃಷಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ರೈತರ ಜೀವನ ಸುಧಾರಣೆಯೇ ನಮ್ಮ ಉದ್ದೇಶವಾಗಿದೆ. ಇದರೊಂದಿಗೆ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಬಲಶಾಲಿಯಾಗಲಿದೆ ಎಂದಿದ್ದಾರೆ.

ಕಳೆದ ವರ್ಷದಲ್ಲಿ ನಮಗೆದುರಾದ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮಹತ್ವ ನೀಡಲಾಗಿದೆ. ಇದರಲ್ಲಿ ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ, 15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇನ್ನುಳಿದಂತೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿಯಲ್ಲಿ ಏನೇನು ಉಲ್ಲೇಖಿಸಿದ್ರು ನೀವೇ ನೊಡಿ