YES’ಬ್ಯಾಂಕ್ ಆಯ್ತು ‘NO’ಬ್ಯಾಂಕ್: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು
ಯೆಸ್ ಬ್ಯಾಂಕ್‌ನಲ್ಲಿರುವ ನಿಮ್ಮ ಹಣ ಸುರಕ್ಷಿತವಾಗಿದೆ ಗ್ರಾಹಕರ್ಯಾರೂ ಕೂಡ ಆತಂಕಗೊಳ್ಳಬೇಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಯ ನೀಡಿದ್ದಾರೆ.
ನವದೆಹಲಿ, (ಮಾ.06): ಕೇವಲ 10 ವರ್ಷಗಳಲ್ಲೇ ಫೀನಿಕ್ಸ್ ನಂತೆ ಎದ್ದು, ಹಲವು ಖಾಸಗಿ ಬ್ಯಾಂಕ್ ಗಳಿಗೆ ಸೆಡ್ಡು ಹೊಡೆಯುವ ಮಟ್ಟದಲ್ಲಿ ಬೆಳೆದು ನಿಂತಿದ್ದ ಬ್ಯಾಂಕ್. ಆದರೆ, ಎಷ್ಟು ವೇಗದಲ್ಲಿ ಅದು ಬೆಳೆಯಿತೋ.. ಅದೇ ವೇಗದಲ್ಲೇ ಅಧಃಪತನ ಕಂಡಿದೆ.
ಯೆಸ್ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಿದ ಆರ್‌ಬಿಐ; ವಿತ್ ಡ್ರಾಗೆ ನಿರ್ಬಂಧ
ಇನ್ನೇನು ಸಂಪೂರ್ಣ ನೆಲಕ್ಕಚ್ಚಿತು ಎನ್ನುವಷ್ಟರಲ್ಲಿ, ಮಧ್ಯ ಪ್ರವೇಶಿಸಿರುವ ಆರ್ ಬಿಐ, ಗ್ರಾಹಕರ ಹಿತ ಕಾಯುವ ಭರವಸೆ ನೀಡಿದೆ. ಇನ್ನು ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯಿಸಿದ್ದು,