Asianet Suvarna News Asianet Suvarna News

ಕೋವಿಡ್ ಬಳಿಕ ಚೇತರಿಕೆ ಹಾದಿಯಲ್ಲಿ ಭಾರತದ ಉದ್ಯೋಗವಕಾಶ, ನೌಕರಿ.ಕಾಂ ಸ್ಥಾಪಕ ಸಂಜೀವ್ ಬಿಖ್‌ಚಂದಾನಿ ಜೊತೆ ಸಂವಾದ

  • ಏಷ್ಯಾನೆಟ್ ನ್ಯೂಸ್ ಸಂವಾದ್ ವಿಶೇಷ ಕಾರ್ಯಕ್ರಮ
  • ನೌಕರಿ.ಕಾಮ್ ಸಂಸ್ಥಾಪಕ ಸಂಜೀವ್ ಜೊತೆ ಸಂದರ್ಶನ
  • ಭಾರತದಲ್ಲಿ ವಿಫುಲ ಉದ್ಯೋಗವಕಾಶ ಸೃಷ್ಟಿ
     

ಹೊಸತನಗಳ ಹರಿಹಾಕಾರನಾಗಿ ಗುರಿತಿಸಿಕೊಂಡಿರುವ ಏಷ್ಯಾನೆಟ್ ನ್ಯೂಸ್ ಇದೀಗ ಸಂವಾದ್ ಅನ್ನೋ ವಿಶೇಷ ಸರಣಿ ಸಂದರ್ಶನ ಕಾರ್ಯಕ್ರಮ ಪರಚಯಿಸುತ್ತಿದೆ. ಸಮಾಜದಲ್ಲಿ ಸಾಧನೆ ಮಾಡಿರುವ, ಹಲವರಿಗೆ ಪ್ರೇರಣೆ ಹಾಗೂ ಸ್ಪೂರ್ತಿಯಾಗಿರುವ ಸಾಧಕರ ಸಂದರ್ಶನ ಕಾರ್ಯಕ್ರಮವೇ ಸಂವಾದ್. ಮೊದಲ ಸಂಚಿಕೆಯಲ್ಲಿ ದೇಶದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ, ಯುವ ಸಮೂಹದಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಉದ್ಯೋಗದ ವೇದಿಕೆ ಕಲ್ಪಿಸುತ್ತಿರುವ ನೌಕರಿ.ಕಾಂ ಸಂಸ್ಥಾಪಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಜೀವ್ ಬಿಖ್‌ಚಂದಾನಿ ಅವರ ಸಂದರ್ಶನ ಇಲ್ಲಿದೆ.

ಅಗ್ನಿಪಥ ನೇಮಕಾತಿ, ಸರ್ಕಾರಿ ನೇಮಕಾತಿ ಕುರಿತು ಸಂಜೀವ್ ಮಾತನಾಡಿದ್ದಾರೆ. ಕೊರೋನಾ ಬಳಿಕ ಭಾರತದಲ್ಲಿ ವಿಪುಲವಾದ ಉದ್ಯೋಗವಕಾಶ ಸೃಷ್ಟಿಯಾಗಿದೆ ಎಂದು ಸಂಜೀವ್ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಯುವಕರಲ್ಲಿ ಪ್ರತಿಭೆ ಇದ್ದರೆ, ಕಠಿಣ ಪರಿಶ್ರಮಕ್ಕೆ ತಯಾರಿದ್ದರೆ ಅವರಿಗಿರುವಷ್ಟು ಅವಕಾಶಗಳು ಇನ್ಯಾರಿಗೂ ಇಲ್ಲ ಎಂದಿದ್ದಾರೆ.

ಸದ್ಯದ ಪರಿಸ್ಥಿತಿ, ಮಾರುಕಟ್ಟೆಗೆ ತಕ್ಕಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಶಿಕ್ಷಣದಲ್ಲಿ ಕೆಲ ಬದಲಾವಣೆಗಳನ್ನೂ ತಂದಿದೆ. ಆದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಈ ವಿಚಾರದಲ್ಲಿ ಕೊಂಚ ಹಿಂದಿತ್ತು. ಆದರೆ ಈಗ ಹಾಗಿಲ್ಲ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಜೊತೆಗೆ ಉದ್ಯೋಗ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳೂ ಖಾಸಗಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಜೊತೆಗೆ ಪೈಪೋಟಿ ನೀಡಲು ಶಕ್ತರಾಗಿದ್ದಾರೆ ಎಂದು ಸಂಜೀವ್ ಹೇಳಿದ್ದಾರೆ.

Video Top Stories