ಆಸ್ಪತ್ರೆಯಲ್ಲಿ ದರ್ಶನ್ ಹೈಡ್ರಾಮಾ! ಮಧ್ಯಂತರ ಜಾಮೀನು ವಿಸ್ತರಣೆಯಾಗುತ್ತಿದ್ದಂತೆ ಕಳ್ಳಾಟ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದ ನಟ ದರ್ಶನ್ ಈಗ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ. ಆದರೆ ಈ ಮಧ್ಯಂತರ ಜಾಮೀನು ವಿಸ್ತರಣೆಯಾಗುತ್ತಿದ್ದಂತೆ ದರ್ಶನ್ ಹೊಸ ಆಟ ಶುರು ಮಾಡಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದ ನಟ ದರ್ಶನ್ ಈಗ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ. ಆದರೆ ಈ ಮಧ್ಯಂತರ ಜಾಮೀನು ವಿಸ್ತರಣೆಯಾಗುತ್ತಿದ್ದಂತೆ ದರ್ಶನ್ ಹೊಸ ಆಟ ಶುರು ಮಾಡಿದ್ದಾರೆ. ನಿನ್ನೆ ದರ್ಶನ್‌ಗೆ ಬೆನ್ನು ನೋವಿನ ಕಾರಣಕ್ಕೆ ಆಪರೇಷನ್ ನಡೆಯಬೇಕಿತ್ತು. ಸರ್ಜರಿ ಕಾರಣ ನೀಡಿ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ಈಗ ಬಿಪಿ ಜಾಸ್ತಿಯಾಗಿದೆ ಎಂಬ ನೆಪ ಹೇಳಿ ಆಪರೇಷನ್ ಮುಂದೂಡಿಕೆಯಾಗಿದೆ. ಸರ್ಜರಿ ಆಗದೇ ಇದ್ದರೆ ಲಕ್ವಾ ಹೊಡಿಯುತ್ತೆ ಎಂದು ವೈದ್ಯರ ವರದಿ ಆಧರಿಸಿ ದರ್ಶನ್ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಿತ್ತು. ಆದರೆ ಈಗ ಬಿಪಿಯ ಕಾರಣ ನೀಡಿ ಆಪರೇಷನ್ ಮತ್ತೆ ಮುಂದುವರಿಕೆಯಾಗಿದೆ.