28 ಪುಟ ನೋಟ್ ಬರೆದಿಟ್ಟು ಓಲಾ ಎಂಜಿನೀಯರ್ ಆತ್ಮ*ತ್ಯೆ, CEO ಭವಿಷ್ ಅಗರ್ವಾಲ್ ವಿರುದ್ಧ ದೂರು

28 ಪುಟ ನೋಟ್ ಬರೆದಿಟ್ಟು ಓಲಾ ಎಂಜಿನೀಯರ್ ಆತ್ಮ*ತ್ಯೆ, CEO ಭವಿಷ್ ಅಗರ್ವಾಲ್ ವಿರುದ್ಧ ದೂರು ದಾಖಲಾಗಿದೆ. ಕಚೇರಿ, ಕೆಲಸದ ವೇಳೆ ಕಿರುಕುಳದ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು,ಇದೇ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ.20) ಓಲಾ ಕಂಪನಿಯಲ್ಲಿ ಎಂಜಿನೀಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ 38 ವರ್ಷದ ಕೆ ಅರವಿಂದ್ ಕೆಲಸದ ಕಿರುಕುಳಕ್ಕೆ ಬೇಸತ್ತು ಬದುಕು ಅಂತ್ಯಗೊಳಿಸಿದ್ದಾನೆ. ಬರೋಬ್ಬರಿ 28 ಪುಟಗಳ ಡೆತ್ ನೋಟ್ ಬರೆದಿಟ್ಟು ಉದ್ಯೋಗಿ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಇದೀಗ ಓಲಾ ಸಿಇಒ ಭವಿಷ್ ಅಗರ್ವಾಲ್ ಸೇರಿದಂತೆ ಕೆಲ ಪ್ರಮುಖರ ವಿರುದ್ದ ದೂರು ದಾಖಲಾಗಿದೆ. ಉದ್ಯೋಗಿ ಮೃತಪಟ್ಟ 2 ದಿನದಲ್ಲಿ ಆತನ ಖಾತೆಗೆ 15 ಲಕ್ಷ ರೂಪಾಯಿ ಕಂಪನಿ ಕಡೆಯಿಂದ ಜಮೆ ಆಗಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Related Video