ಮರ ಕಡಿಯಲು ಬಿಟ್ಟಿಲ್ಲ ಎಂದು ವಿಷದ ಇಂಜೆಕ್ಷನ್ ಕೊಟ್ಟ ಡಾಕ್ಟರ್ ದಂಪತಿ?

ಮರ ಕಡಿಯಲು ಬಿಡಲಿಲ್ಲ ಎಂದು‌‌ ದಂಪತಿ ಮರಕ್ಕೆ ವಿಷ ಇಟ್ಟ ಆರೋಪ ಕೇಳಿಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಇಲ್ಲಿನ ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದಿಂದ ಬಿಬಿಎಂಪಿ‌ ಅರಣ್ಯ ಘಟಕಕ್ಕೆ ದೂರು ನೀಡಲಾಗಿದೆ.ನರೇಂದ್ರ - ಮಾಲಿನಿ ದಂಪತಿ ಕಟ್ಟಡ ನಿರ್ಮಿಸುತ್ತಿದ್ದು, ‌ಅಲ್ಲೇ ಇರುವ 5 ಮರಗಳನ್ನು ಕತ್ತರಿಸಲು ಮುಂದಾಗಿದ್ದರು. ಸ್ಥಳೀಯರು ಅದರ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದ್ದರು. 

Share this Video
  • FB
  • Linkdin
  • Whatsapp

ಬೆಂಗಳೂರು (ನ.06): ಮರ ಕಡಿಯಲು ಬಿಡಲಿಲ್ಲ ಎಂದು‌‌ ದಂಪತಿ ಮರಕ್ಕೆ ವಿಷ ಇಟ್ಟ ಆರೋಪ ಕೇಳಿಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಇಲ್ಲಿನ ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದಿಂದ ಬಿಬಿಎಂಪಿ‌ ಅರಣ್ಯ ಘಟಕಕ್ಕೆ ದೂರು ನೀಡಲಾಗಿದೆ.

ನರೇಂದ್ರ - ಮಾಲಿನಿ ದಂಪತಿ ಕಟ್ಟಡ ನಿರ್ಮಿಸುತ್ತಿದ್ದು, ‌ಅಲ್ಲೇ ಇರುವ 5 ಮರಗಳನ್ನು ಕತ್ತರಿಸಲು ಮುಂದಾಗಿದ್ದರು. ಸ್ಥಳೀಯರು ಅದರ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದ್ದರು. 

ಈಗ, ಮರ ಕಡಿಯುವ ಬದಲು ವಾಮಮಾರ್ಗವನ್ನು ದಂಪತಿ ತುಳಿದಿದ್ದು, ಮರಗಳು ತನ್ನಿಂತಾನೆ ಒಣಗಿ ಹೋಗುವಂತೆ ಕೆಮಿಕಲ್ ಇಂಜೆಕ್ಟ್ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

Related Video