Asianet Suvarna News Asianet Suvarna News

ಬೆಂಗಳೂರು: ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ್ರೆ ಕಾದಿದೆ ಬಿಗ್‌ ಶಾಕ್!

ಉದ್ಯಾನನಗರಿಯ ವಾಹನ ಸವಾರಿಗೆ ಶಾಕ್‌ ಕಾದಿದೆ. ವಾಹನ ಚಾಲನೆ ವೇಳೆ  ಎಚ್ಚರಿಕೆ ವಹಿಸಬೇಕಿದೆ.. ಇನ್ನು ಮೇಲೆ ಪೊಲೀಸರ ಕಣ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದ್ರೆ ದಂಡ ಫಿಕ್ಸ್ ಆಗಿದೆ.

ಬೆಂಗಳೂರು: ಉದ್ಯಾನನಗರಿಯ ವಾಹನ ಸವಾರಿಗೆ ಶಾಕ್‌ ಕಾದಿದೆ. ವಾಹನ ಚಾಲನೆ ವೇಳೆ  ಎಚ್ಚರಿಕೆ ವಹಿಸಬೇಕಿದೆ.. ಇನ್ನು ಮೇಲೆ ಪೊಲೀಸರ ಕಣ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದ್ರೆ ದಂಡ ಫಿಕ್ಸ್ ಆಗಿದೆ. ಸಂಚಾರ ಡಿಜಿಪಿ ಅಲೋಕ್ ಮೋಹನ್ ಅವರು ಹೊಸ ನಿಯಮವೊಂದು ಘೋಷಣೆ ಮಾಡಿದ್ದು, ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ.  ನಿಯಮ ಉಲ್ಲಂಘಿಸಿದ ವಾಹನವನ್ನು ತಡೆಯುವ ಹಾಗಿಲ್ಲ, ಆದರೆ ದಂಡ ಮಾತ್ರ ಹಾಕಲಾಗುತ್ತದೆ.  ಸಂಚಾರ ಪೊಲೀಸರು ಎಲ್ಲಾ ಸಮಯದಲ್ಲಿ ಕ್ಯಾಮರಾ ಧರಿಸಿರಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ.