ಬೆಂಗಳೂರು ಜನರಿಗೆ ಮತ್ತೊಂದು ಶಾಕ್ : ಶೀಘ್ರದಲ್ಲೇ ಕಾವೇರಿ ನೀರಿನ ದರ ಏರಿಕೆ

ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಜಲಮಂಡಳಿಯು ದರ ಪರಿಷ್ಕರಣೆಗೆ ಮನವಿ ಮಾಡಿದ್ದು, ಸಚಿವ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

First Published Dec 4, 2024, 3:22 PM IST | Last Updated Dec 4, 2024, 3:23 PM IST

ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆ ಬಿಸಿ ಕಾದಿದೆ. ನಗರದಲ್ಲಿ ಶೀಘ್ರದಲ್ಲೇ ಲ್ಲಿ ನೀರಿನ ದರ ಏರಿಕೆ ಆಗುವ ಸಾಧ್ಯತೆ ಇದ್ದು, ನೀರಿನ ದರ ಪರಿಷ್ಕರಣೆ ಮಾಡುವಂತೆ ಕೋರಿ ಜಲಮಂಡಳಿ ಜಿಲ್ಲೆಯ 28 ಶಾಸಕರಿಗೆ ಪತ್ರ ಬರೆದಿದ್ದು, ದರ ಏರಿಕೆಗೆ ಸಹಕರಿಸುವಂತೆ ಮನವಿ ಮಾಡಿದೆ. ಈ ದರ ಏರಿಕೆ ಕುರಿತಾಗಿ ಸಚಿವ ಡಿಕೆಶಿ ನೇತೃತ್ವದಲ್ಲಿ ನಡೆಯುವ ಸಭೆಗೆ ಶಾಸಕರಿಗ ಆಹ್ವಾನ ನೀಡಲಾಗಿದೆ. ಕಳೆದ 10 ವರ್ಷದಿಂದ ಕಾವೇರಿ ನೀರಿನ ದರ ಏರಿಕೆ ಆಗಿಲ್ಲ. ಪ್ರಸ್ತುತ ಜಲಮಂಡಳಿಗೆ 170 ಕೋಟಿ ವೆಚ್ಚ ಆಗುತ್ತಿದ್ದು, ಬರುವ ಆದಾಯ ಕೇವಲ 129 ಕೋಟಿ ಇದರಿಂದ ಒಟ್ಟು 81 ಕೋಟಿ ಹೊರ ಆಗುತ್ತಿದೆ ಹೀಗಾಗಿ ಕಾವೇರಿ ನೀರಿನ ದರ ಏರಿಕೆ ಅನಿವಾರ್ಯ ಎಂದು ಜಲಮಂಡಳಿ ತನ್ನ ಮನವಿಯಲ್ಲಿ ತಿಳಿಸಿದ್ದು, ನೀರಿನ ದರ ಏರಿಕೆ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. 
 

Video Top Stories