ಅವಳು ಹೋರಾಟಗಾರ್ತಿ, ಆತ ಯೋಧ! ದೇಶ ಕಾಯೋ ಯೋಧ ಹೀಗ್ಯಾಕೆ ಮಾಡಿದ?

ನೀನೇ ಬೇಕು ನೀನೇ ಬೇಕು ಅಂತ ಪೀಡಿಸಿ ಪ್ರಮೋದಾಳನ್ನ ಮದುವೆಯಾದ ಅಕ್ಷಯ. ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗೋಕೆ ಮಾತ್ರ ತಯಾರಿರಲ್ಲಿಲ್ಲ. ಕಾರಣಗಳನ್ನ ಕೊಟ್ಟುಕೊಂಡು ಆಕೆಯ ಬಾಯಿಯನ್ನ ಮುಚ್ಚಿಸುತ್ತಾ ಬಂದಿದ್ದ.

First Published Dec 3, 2024, 3:09 PM IST | Last Updated Dec 3, 2024, 3:09 PM IST

ಬೆಳಗಾವಿ: ಆಕೆ ಆ ಭಾಗದ ಹೋರಾಟಗಾರ್ತಿ. ಎಲ್ಲೇ ಅನ್ಯಾಯ ನಡೆಯುತ್ತಿದ್ರೂ ಅಲ್ಲಿ ಆಕೆ ಹಾಜರಾಗಿಬಿಡ್ತಿದ್ದಳು. ಯಾರಿಗೋ ಆದ ಅನ್ಯಾಯಕ್ಕೆ ಈಕೆ ನಡುರಸ್ತೆಯಲ್ಲಿ ಕೂತು ನ್ಯಾಯ ಕೇಳ್ತಿದ್ದಳು. ಇಂಥಹ ಹೋರಾಟಗಾರ್ತಿಯೇ ಇವತ್ತು ತನಗೆ ಅನ್ಯಾಯ ಆಗಿದೆ ಅಂತ ಕಂಡೋರ ಮನೆಯ ಮಂದೆ ಹೋಗಿ ಕೂತಿದ್ದಾಳೆ.

ನನಗೆ ನ್ಯಾಯ ಬೇಕು ಅಂತ ಕಣ್ಣೀರು ಹಾಕುತ್ತಿದ್ದಾಳೆ.. ಇನ್ನೂ ಆಕೆ ಯಾರಿಂದ ಗೊತ್ತಾ ನ್ಯಾಯ ಕೇಳ್ತಿರೋದು. ಒಬ್ಬ ಸೈನಿಕನಿಂದ. ಅಷ್ಟಕ್ಕೂ ಆ ಹೋರಾಟಗಾರ್ತಿಗೆ ಆದ ಮೋಸವಾದ್ರೂ ಏನು? ಈಕೆ ನ್ಯಾಯ ಬೇಕು ಅಂತ ಕೇಳ್ತಿರೋ ಆ ಸಿಪಾಯಿ ಯಾರು? ಒಬ್ಬ ಹೋರಾಟಗಾರ್ತಿಯ ಕರುಣಾಜನಕ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.