ಸ್ಮಶಾನದಲ್ಲಿ ಬೆಂಬಲಿಗನ ಕಾರಿಗೆ ಚಾಲನೆ; ಮೌಢ್ಯತೆ ವಿರುದ್ಧ ಸತೀಶ್ ಜಾರಕಿಹೊಳಿ ಹೋರಾಟ!

ಸ್ಮಶಾನದ ಕುರಿತು ಜನರಲ್ಲಿರುವ ತಪ್ಪು ನಂಬಿಕೆಯನ್ನು ಹೋಗಲಾಡಿಸಲು  ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದೀಗ ತಮ್ಮ ಬೆಂಬಲಿಗನ ಹೊಸ ನಿಸಾನ್ ಮ್ಯಾಗ್ನೈಟ್ ಕಾರಿಗೆ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಚಾಲನೆ ನೀಡಿದ್ದಾರೆ.

First Published Feb 20, 2021, 6:42 PM IST | Last Updated Feb 20, 2021, 6:42 PM IST

ಬೆಳಗಾವಿ(ಫೆ.20): ಸ್ಮಶಾನದ ಕುರಿತು ಜನರಲ್ಲಿರುವ ತಪ್ಪು ನಂಬಿಕೆಯನ್ನು ಹೋಗಲಾಡಿಸಲು  ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದೀಗ ತಮ್ಮ ಬೆಂಬಲಿಗನ ಹೊಸ ನಿಸಾನ್ ಮ್ಯಾಗ್ನೈಟ್ ಕಾರಿಗೆ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಚಾಲನೆ ನೀಡಿದ್ದಾರೆ.

ಜಾರಕಿಹೊಳಿ ಬೆಂಬಲಿಗನಾಗಿರುವ  ಸಂಕೇಶ್ವರದ ವಿಕ್ರಂ ಕರಣಿಂಗ್‌ರ ಸತೀಶ್ ಜಾರಕಿಹೊಳಿಯಿಂದ ಪ್ರೇರಣೆಗೊಂಡಿದ್ದಾರೆ. ಈ ಹಿಂದೆ ಜಾರಕಿಹೊಳಿ ತಮ್ಮ ಹೊಸ ಕಾರನ್ನು ಇದೇ ಸ್ಮಶಾನದಲ್ಲಿ ಚಾಲನೆ ನೀಡಿದ್ದರು. ಹೀಗಾಗಿ ತನ್ನ ಕಾರಿಗೂ ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಚಾಲನೆ ನೀಡಲು ಮನವಿ ಮಾಡಿದ್ದರು. 

Video Top Stories