Asianet Suvarna News Asianet Suvarna News

ಸಂಸತ್ತಿನಲ್ಲಿ ಪ್ರಧಾನಿ ಮುಂದೆ ಭಾಷಣ ಮಾಡಲಿರುವ ಬಾಗಲಕೋಟೆ ವಿದ್ಯಾರ್ಥಿ

ಬಾಗಲಕೋಟೆ ನಗರದ ಕಾಲೇಜು​ ವಿದ್ಯಾರ್ಥಿ ಪರೇಶ್​ ರಾಷ್ಟ್ರೀಯ ಯುವ ಸಂಸತ್​ ಉತ್ಸವದಲ್ಲಿ ಭಾಗಿಯಾಗಲು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಬಾಗಲಕೋಟೆ: ನಗರದ ಕಾಲೇಜು​ ವಿದ್ಯಾರ್ಥಿ ಪರೇಶ್​ ರಾಷ್ಟ್ರೀಯ ಯುವ ಸಂಸತ್​ ಉತ್ಸವದಲ್ಲಿ ಭಾಗಿಯಾಗಲು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಹೀಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಪರೇಶ್​ ಆಗಿದ್ದು, ಪರೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ, ಆತನ ಪಾಲಕರು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಜನವರಿ 23ರಂದು ದೆಹಲಿಯ ಸಂಸತ್​​ನಲ್ಲಿ ನಡೆಯುವ ಭಾಷಣಕ್ಕೆ ತಯಾರಾಗಿರೋ ವಿದ್ಯಾರ್ಥಿ ಪರೇಶ್ ಜೊತೆ ನಮ್ಮ ಬಾಗಲಕೋಟೆ ಪ್ರತಿನಿಧಿ ಮಲ್ಲಿಕಾರ್ಜುನ ಹೊಸಮನಿ ಚಿಟ್​ ಚಾಟ್​ ನಡೆಸಿದ್ದಾರೆ ನೋಡೋಣ ಬನ್ನಿ...