ನಿಮ್ಮ ವಾಹನ 15-20 ವರ್ಷಕ್ಕಿಂತ ಹಳೆಯದಾಗಿದ್ರೆ ಗುಜರಿಗೆ ಹಾಕ್ರಿ! ಏನ್ರಿ ಇದು ಪಾಲಿಸಿ.?
ನಿಮ್ಮ ವಾಹನಗಳು 20 ಕ್ಕಿಂತ ಹಳೆಯದಾ..? ಹಾಗಾದರೆ ಗುಜರಿಗೆ ಹಾಕಬೇಕಾಗುತ್ತದೆ! ಇಂತದ್ದೊಂದು ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.
ಬೆಂಗಳೂರು (ಫೆ. 03): ನಿಮ್ಮ ವಾಹನಗಳು 20 ಕ್ಕಿಂತ ಹಳೆಯದಾ..? ಹಾಗಾದರೆ ಗುಜರಿಗೆ ಹಾಕಬೇಕಾಗುತ್ತದೆ! ಇಂತದ್ದೊಂದು ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.
ರಸ್ತೆಗಿಳಿದ 20 ವರ್ಷದ ನಂತರ ಕಾರು, ಬೈಕ್‌ನಂತಹ ಖಾಸಗಿ ವಾಹನಗಳ ತಪಾಸಣೆ ನಡೆಯಬೇಕು. ಹಾಗೂ 15 ವರ್ಷದ ನಂತರ ಲಾರಿ, ಬಸ್ಸಿನಂತಹ ವಾಣಿಜ್ಯಿಕ ವಾಹನಗಳ ಪರೀಕ್ಷೆ ನಡೆಯಬೇಕು. ಪರೀಕ್ಷೆ ಸಂದರ್ಭದಲ್ಲಿ ವಾಹನವು ತನ್ನ ಕ್ಷಮತೆ ಕಳೆದುಕೊಂಡಿದ್ದು ಸಾಬೀತಾದರೆ ಅವುಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಈ ನೀತಿಯಿಂದ ಪರಿಸರ ಸ್ನೇಹಿ ಹಾಗೂ ಇಂಧನ ಕ್ಷಮತೆಯ ವಾಹನಗಳ ಸಂಚಾರ ಸಾಧ್ಯವಾಗಲಿದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಾಗಾದ್ರೆ ಏನಿದು ಗುಜರಿ ಪಾಲಿಸಿ..?