ಶ್ರೀರಾಮನ ಬಂಟ ಹನುಮಂತನ ಭಕ್ತಿ ಪ್ರಧಾನ್ಯ ಭಜನೆಗಳಿವು
ರಾಮಾಯಣದಲ್ಲಿ ಶ್ರೀ ಹನುಮಂತನ ಪಾತ್ರ ಬಹಳ ಮಹತ್ವದ್ದು. ಶ್ರೀರಾಮನ ಬಂಟನಾಗಿದ್ದು, ಸೀತಾಮಾತೆಗೂ ಪ್ರಿಯನಾಗಿರುತ್ತಾನೆ ಹನುಮಂತ. ಲಂಕಾ ದಹನದಲ್ಲಿ ಪ್ರಮುಖ ಪಾತ್ರ ವಹಿಸುವ ಹನುಮಂತಹ ಮಹಾ ಮಹಿಮೆಗಳನ್ನು ಇಂದಿಗೂ ಜನ ಕೊಂಡಾಡುತ್ತಾರೆ. ಹನುಮಂತನ ನಿಷ್ಠೆ, ಸ್ವಾಮಿ ಭಕ್ತಿ ಆದರ್ಶನೀಯವಾಗಿದೆ.
ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?
ದೇಶಾದ್ಯಂತ ಹನುಮಂತನಿಗೆ ಮೀಸಲಾಗಿರುವ ಬಹಳಷ್ಟು ಸನ್ನಿಧಾನಗಳಿವೆ. ಆಂಜನೇಯ ಸ್ವಾಮಿ ಆರಾಧನೆಯನ್ನು ಮಾಡುವ ಜನರೂ ಬಹಳಷ್ಟಿದ್ದಾರೆ. ಸಂಜೀವಿನಿ ಹೊತ್ತು ಹಾರುವ ಹನುಮ ಎಲ್ಲರಿಗೂ ಅಚ್ಚುಮೆಚ್ಚು. ಶ್ರೀರಾಮನ-ಸೀತೆಯನ್ನು ನೆನೆಸಿಕೊಂಡಾದ ಜೊತೆಗೆ ಹನುಮಂತ ಇದ್ದೇ ಇರುತ್ತಾನೆ.