Asianet Suvarna News Asianet Suvarna News

Panchanga: ಈ ದಿನ ಅಮ್ಮನವರ ಸನ್ನಿಧಾನದಲ್ಲಿ ತುಪ್ಪದ ದೀಪವನ್ನು ಹಚ್ಚಿದರೆ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರ. ಇದು ಶುಭಕಾಲವನ್ನು ಸೂಚಿಸುತ್ತದೆ. ಈ ದಿನ ಅಮ್ಮನವರ ಸನ್ನಿಧಾನಕ್ಕೆ ಹೋಗಿ ತುಪ್ಪದ ದೀಪವನ್ನು ಹಚ್ಚುವುದರಿಂದ ಹಾಗೂ ದೊಣ್ಣೆಯಲ್ಲಿ ತುಪ್ಪವನ್ನು ದಾನ ಮಾಡುವುದರಿಂದ ಅಮ್ಮನವರ ಅನುಗ್ರಹ ಉಂಟಾಗುತ್ತದೆ. ಅಲ್ಲದೇ ಅವರೆ ಧಾನ್ಯವನ್ನು ದಾನ ಮಾಡಿದರೆ ಇನ್ನೂ ಹೆಚ್ಚಿನ ಫಲ ಉಂಟಾಗುತ್ತದೆ. ಜೊತೆಗೆ ಈ ದಿನದ ಮಹತ್ವ ಏನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ.