'ರಾಮಾಯಣ' ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯಕ್ಕೆ ವಿಮರ್ಶಕರ ಮೆಚ್ಚುಗೆ. ರಣಬೀರ್ ಕಪೂರ್ ರಾಮನ ಪಾತ್ರಕ್ಕಿಂತ ಯಶ್ ರಾವಣನ ಪಾತ್ರವೇ ಹೆಚ್ಚು ಗಮನ ಸೆಳೆದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
- Home
- News
- State
- Karnataka News Today Live: 'ರಾಮಾಯಣ'ದಲ್ಲಿ ರಾಮನಿಗಿಂತ ರಾವಣನೇ ಹೆಚ್ಚು ಹೈಲೈಟ್ - ಯಶ್ ನಟನೆ ನೋಡಿ ವಿಮರ್ಶಕರು ಯಾಕೆ ಹೀಗಂದ್ರು!
Karnataka News Today Live: 'ರಾಮಾಯಣ'ದಲ್ಲಿ ರಾಮನಿಗಿಂತ ರಾವಣನೇ ಹೆಚ್ಚು ಹೈಲೈಟ್ - ಯಶ್ ನಟನೆ ನೋಡಿ ವಿಮರ್ಶಕರು ಯಾಕೆ ಹೀಗಂದ್ರು!

ಬೆಂಗಳೂರು: ಹಾಲಿನ ದರ ಹೆಚ್ಚಳದ ಬಿಸಿಯನ್ನು ಶ್ರೀಸಾಮಾನ್ಯ ಅರಗಿಸಿಕೊಳ್ಳುವ ಮೊದಲೇ ರಾಜ್ಯ ಸರ್ಕಾರ ಬಸ್ ದರವನ್ನು ಹೆಚ್ಚಿಸಿದೆ. ಆದರೆ ಶೇ.23ರಿಂದ ಶೇ.35ರವರೆಗೂ ಆಗಿರುವ ಈ ಪ್ರಮಾಣದ ಏರಿಕೆ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಎನ್ನಲಾಗಿದೆ.
ಸ್ಟೇಜ್ ವಾರು ದರ ಹೆಚ್ಚಳದ ಸರಾಸರಿ ಲೆಕ್ಕದಲ್ಲಿ ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಪ್ರಯಾಣ ದರ ಸರಾಸರಿ ಶೇ.23 ಹಾಗೂ ಬಿಎಂಟಿಸಿ ದರ ಗರಿಷ್ಠ ಶೇ.35ರಷ್ಟು ಹೆಚ್ಚಳವಾಗಿದೆ.
ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ, ದೀಪಾವಳಿ ಹಬ್ಬದ ಸಂದರ್ಭಕ್ಕೆ ಸೀಮಿತವಾಗಿ ಶೇ.40ರವರೆಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ. ಆದರೆ ದರ ಏರಿಕೆ ಹಬ್ಬದ ಅವಧಿಗೆ ಮಾತ್ರ ಸೀಮಿತ. ಒಟ್ಟಾರೆ ದರ ಹೆಚ್ಚಳ ಸದ್ಯಕ್ಕೆ ಮಾಡುವ ಚಿಂತನೆಯಿಲ್ಲ ಎಂದು ಒಕ್ಕೂಟ ತಿಳಿಸಿದೆ.
ಆ ಕುರಿತಂತೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಸಗಿ ಸಾರಿಗೆಗಳು ಸಂಕಷ್ಟದಲ್ಲಿವೆ. ಆದರೂ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಡೆಯಲು ಸದ್ಯಕ್ಕೆ ಖಾಸಗಿ ಬಸ್ಗಳ ದರ ಹೆಚ್ಚಳ ಇಲ್ಲ. ಆದರೆ, ಹಬ್ಬ ಸೇರಿದಂತೆ ದೀರ್ಘ ರಜೆಯ ಸಂದರ್ಭದಲ್ಲಿ ಬಸ್ ದರ ಹೆಚ್ಚಳ ಮಾಡುವಂತೆ ಶೇ.40ರವರೆಗೆ ಹೆಚ್ಚಳ ಮಾಡಲಾಗಿದೆ. ನ.6ರಿಂದ 15ರವರೆಗೆ ಈ ಪ್ರಯಾಣ ದರ ಹೆಚ್ಚಳವಿರಲಿದೆ ಎಂದಿದ್ದಾರೆ.
Karnataka News Today Live: 'ರಾಮಾಯಣ'ದಲ್ಲಿ ರಾಮನಿಗಿಂತ ರಾವಣನೇ ಹೆಚ್ಚು ಹೈಲೈಟ್ - ಯಶ್ ನಟನೆ ನೋಡಿ ವಿಮರ್ಶಕರು ಯಾಕೆ ಹೀಗಂದ್ರು!
Karnataka News Today Live: ನಮ್ಮ ಮೆಟ್ರೋ ನೀಲಿ ಮಾರ್ಗದ ನಿಲ್ದಾಣಕ್ಕೆ ಹೊಸ ಹೆಸರು; 'ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' ₹65 ಕೋಟಿ ಒಪ್ಪಂದ!
ಬೆಂಗಳೂರಿನ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕನ್ನು ಖ್ಯಾತ ತಂತ್ರಜ್ಞಾನ ಸಂಸ್ಥೆ ಇನ್‌ಮೊಬಿ ಪಡೆದುಕೊಂಡಿದೆ. ಈ ಒಪ್ಪಂದದಿಂದ ಬಿಎಂಆರ್‌ಸಿಎಲ್‌ಗೆ ₹65 ಕೋಟಿ ಆದಾಯ ಲಭಿಸಲಿದ್ದು, ನಿಲ್ದಾಣವನ್ನು 'ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' ಎಂದು ಕರೆಯಲಾಗುತ್ತದೆ. ಇದು ಐಟಿ ಕಾರಿಡಾರ್‌ನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲಿದೆ.
Karnataka News Today Live: ಕೊಪ್ಪಳದಲ್ಲಿ SECI ಸಂಸ್ಥೆಗಾಗಿ 300 ಮೆಗಾವ್ಯಾಟ್ ಸೋಲಾರ್ ಪ್ರಾಜೆಕ್ಟ್ ಪೂರ್ಣಗೊಳಿಸಿದ ಟಾಟಾ ಪವರ್, ಗದಗದಲ್ಲಿ ಸಬ್‌ಸ್ಟೇಷನ್
ಟಾಟಾ ಪವರ್ ರೇನಿವೇಬಲ್ ಎನರ್ಜಿ ಲಿಮಿಟೆಡ್ ಕೊಪ್ಪಳದಲ್ಲಿ 300 ಮೆಗಾವಾಟ್ ಸಾಮರ್ಥ್ಯದ ಬೃಹತ್ ಸೌರಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಲೋಕಾರ್ಪಣೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಯೋಜನೆಯಲ್ಲಿ ಶೇ. 40 ರಷ್ಟು ಮಹಿಳಾ ತಾಂತ್ರಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ.
Karnataka News Today Live: 55ರಲ್ಲಿ ಡಿವೋರ್ಸ್, 60ರಲ್ಲಿ 2ನೇ ಮದುವೆ - ತಮ್ಮ ಜೀವನದ ಕಹಿ ಸತ್ಯ ಬಿಚ್ಚಿಟ್ಟ ಕನ್ನಡದ ಖ್ಯಾತ ವಿಲನ್!
55ನೇ ವಯಸ್ಸಿನಲ್ಲಿ ವಿಚ್ಛೇದನ, 60ನೇ ವಯಸ್ಸಿನಲ್ಲಿ ಎರಡನೇ ಮದುವೆ. 24 ವರ್ಷಗಳ ದಾಂಪತ್ಯ ಮುರಿದ ನೋವು, ಜನರ ಟೀಕೆ ಹಾಗೂ ಎರಡನೇ ಮದುವೆಯ ನಿರ್ಧಾರದ ಬಗ್ಗೆ ಆಶಿಶ್ ವಿದ್ಯಾರ್ಥಿ ಮನಬಿಚ್ಚಿ ಮಾತನಾಡಿದ್ದಾರೆ.
Karnataka News Today Live: ‘ನಿಜವಾದ ಪ್ರೀತಿ ಬೇಕು, ಒಳ್ಳೆಯ ಹುಡುಗನಿದ್ದರೆ ಇನ್‌ಸ್ಟಾಗ್ರಾಂಗೆ ಮೆಸೇಜ್ ಮಾಡಿ’ - ಹುಚ್ಚ ನಟಿ ಓಪನ್ ಆಫರ್!
ಹುಚ್ಚ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಇನ್ನೂ ಸಿಂಗಲ್ ಆಗಿರುವುದೇಕೆ? ಮದುವೆ, ಪ್ರೀತಿ ಹಾಗೂ ಭಾವಿ ಪತಿಯ ಬಗ್ಗೆ ಮನದ ಮಾತು ಹಂಚಿಕೊಂಡಿರುವ ನಟಿ, ಒಳ್ಳೆಯ ಹುಡುಗರು ಇನ್‌ಸ್ಟಾಗ್ರಾಂಗೆ ಡಿಎಂ ಮಾಡಬಹುದು ಎಂದಿದ್ದಾರೆ.
Karnataka News Today Live: ಕರ್ನಾಟಕಕ್ಕೆ ಮತ್ತೊಂದು ಬಿಗ್ ಇನ್ವೆಸ್ಟ್‌ಮೆಂಟ್, 380 ಕೋಟಿ ಬಂಡವಾಳದ ಜೊತೆಗೆ ಬೆಂಗಳೂರಿಗೆ ದೈತ್ಯ ಕಂಪನಿ ಎಂಟ್ರಿ
Karnataka News Today Live: ರೈಲಿನ ಸ್ಲೀಪರ್ ಟಿಕೆಟ್‌ಗೆ ₹260, ಬಸ್‌ನ ನಾನ್-ಎಸಿ ಸ್ಲೀಪರ್‌ಗೆ ₹834 - ಹಂಪಿಗೆ ಹೋಗೋಕೆ ಕೆಎಸ್‌ಆರ್‌ಟಿಸಿ ಬಸ್‌ಗಿಂತ ರೈಲೇ ಬೆಸ್ಟ್!
ಬೆಂಗಳೂರಿನಿಂದ ಹೊಸಪೇಟೆ ಮತ್ತು ಹಂಪಿಗೆ ಪ್ರಯಾಣಿಸುವವರಿಗೆ ಕೆಎಸ್‌ಆರ್‌ಟಿಸಿ ಬಸ್ ದರಗಳು ರೈಲು ದರಗಳಿಗಿಂತ ಶೇ. 50 ರಿಂದ 300 ರಷ್ಟು ದುಬಾರಿಯಾಗಿವೆ. ಬಸ್ ಪ್ರಯಾಣವು ಸಮಯ ಉಳಿಸಿದರೂ, ಆರ್ಥಿಕವಾಗಿ ರೈಲು ಪ್ರಯಾಣವೇ ಅತ್ಯಂತ ಅಗ್ಗ ಮತ್ತು ಸೂಕ್ತ ಮಾರ್ಗವಾಗಿದೆ.
Karnataka News Today Live: ಬೆಂಗಳೂರು ರಸ್ತೆಗೆ ಬಿಗ್ ಬೂಸ್ಟ್ - ಅತ್ತಿಬೆಲೆ-ಏರ್‌ಪೋರ್ಟ್-ನೆಲಮಂಗಲ ಮಾರ್ಗಕ್ಕೆ ₹1,118 ಕೋಟಿ ಹೆಚ್ಚುವರಿ ಅನುದಾನ!
ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು 134 ಕಿ.ಮೀ ಉದ್ದದ ಅತ್ತಿಬೆಲೆ-ನೆಲಮಂಗಲ ರಸ್ತೆ ಯೋಜನೆಗೆ ರಾಜ್ಯ ಸಚಿವ ಸಂಪುಟ ₹1,118 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಇದರಿಂದ ಐಟಿ ಹಬ್ ಮತ್ತು ವಿಮಾನ ನಿಲ್ದಾಣದ ಸಂಪರ್ಕ ಸುಗಮವಾಗಲಿದ್ದು, ಒಟ್ಟು ಯೋಜನಾ ವೆಚ್ಚ ₹3,409 ಕೋಟಿಗೆ ಏರಿಕೆಯಾಗಿದೆ.
Karnataka News Today Live: ಮಗ ಗೆಳತಿ ಜೊತೆ ಇದ್ದಾಗ 'ಡೆಲಿವರಿ ಬಾಯ್' ಅಪ್ಪ ಎಂಟ್ರಿ; ಹೃದಯ ಗೆದ್ದ ಪುತ್ರ! ಆಗಿದ್ದೇನು?
ಮಗ ತನ್ನ ಗೆಳತಿಯೊಂದಿಗೆ ಹೋಟೆಲ್‌ನಲ್ಲಿದ್ದಾಗ ಡೆಲಿವರಿ ಬಾಯ್ ಆಗಿರುವ ತನ್ನ ತಂದೆಯನ್ನು ಭೇಟಿಯಾಗುವ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ. ತಂದೆಯ ವೃತ್ತಿಗೆ ನಾಚಿಕೆಪಡದೆ ಮಗ ಹೆಮ್ಮೆಯಿಂದ ಗೆಳತಿಗೆ ಪರಿಚಯಿಸುವ ದೃಶ್ಯ ಎಲ್ಲರ ಹೃದಯ ಗೆದ್ದಿದೆ.
Karnataka News Today Live: ಸಂಪೂರ್ಣ 'ಯಶ್ ರಾಮಾಯಣ' - ಸಿನಿಮಾ ನೋಡಿದರೆ ಗೊತ್ತಾಗುವ 10 ಅದ್ಭುತ ವಿಶೇಷತೆಗಳಿವು!
ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ ರಾಮಾಯಣ ಸಿನಿಮಾ ನೋಡಬಹುದೇ? ಅದ್ದೂರಿ ವಿಎಫ್‌ಎಕ್ಸ್, 3D ದೃಶ್ಯ ವೈಭವ, ಆಕ್ಷನ್, ಸಂಗೀತ, ತಾರಾಗಣ, ಪ್ಲಸ್ ಮತ್ತು ಮೈನಸ್ ಅಂಶಗಳ ಜತೆಗೆ ಟಿಕೆಟ್..
Karnataka News Today Live: ಹಣಕಾಸಿನ ಕೊರತೆಯಿಂದ 2 ತಿಂಗಳ ಗೃಹಲಕ್ಷ್ಮೀ ಹಣ ನೀಡಿಲ್ಲ - ಹೈಕೋರ್ಟ್ ಎದುರು ಒಪ್ಪಿಕೊಂಡ ಸರ್ಕಾರ
Karnataka News Today Live: ₹1 ಲಕ್ಷ ಸಂಬಳ ಕೊಟ್ರೂ ಸರ್ಕಾರಿ ಶಿಕ್ಷಕರು, 5 ದಿನ ಶಾಲೆಗೆ ಬರೊಲ್ಲ; ಸಿಎಂ ಪುತ್ರಿ ವಿವಾದಾತ್ಮಕ ಹೇಳಿಕೆ
ಸರ್ಕಾರಿ ಶಾಲಾ ಶಿಕ್ಷಕರು 1.10 ಲಕ್ಷ ರೂ. ಸಂಬಳ ಪಡೆದರೂ ವಾರದಲ್ಲಿ 5 ದಿನ ಶಾಲೆಗೆ ಬರುವುದಿಲ್ಲ ಎಂದು ಐಶ್ವರ್ಯಾ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಸಣ್ಣ ಕೊಡುಗೆಗಳಿಂದ ದೊಡ್ಡ ಬದಲಾವಣೆ ತರಬಹುದು ಎಂದು ಅವರು ಸಿಎಸ್‌ಆರ್ ಕಾರ್ಯಕ್ರಮದಲ್ಲಿ ತಿಳಿಸಿದರು.
Karnataka News Today Live: ಕೋಳಿ ಅಂಕ ಕೇಸ್, ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈಗೆ ಬಿಗ್ ರಿಲೀಫ್!
ದಕ್ಷಿಣ ಕನ್ನಡದ ಕೇಪು ಗ್ರಾಮದಲ್ಲಿ ನಡೆದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ಸೇರಿ 26 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
Karnataka News Today Live: ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು
ವಿಜಯಪುರ ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪತ್ನಿಯ ಎದುರಲ್ಲೇ ಈ ಭೀಕರ ಹತ್ಯೆ ನಡೆದಿದೆ. ಕೃತ್ಯಕ್ಕೆ ಕಾರಣವಾಯ್ತಾ ಅದೊಂದು ಗಲಾಟೆ?
Karnataka News Today Live: ಮೇಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಚತುಷ್ಪಥ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ನಾಳೆಯಿಂದ 18 ತಿಂಗಳು ಬಳ್ಳಾರಿ ರಸ್ತೆ ಬಂದ್!
ಬೆಂಗಳೂರಿನ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಿಡಿಎ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ನಡೆಯಲಿದೆ. ಇದರಿಂದಾಗಿ ಬಳ್ಳಾರಿ ರಸ್ತೆಯಲ್ಲಿ ಮುಂದಿನ 18 ತಿಂಗಳ ಕಾಲ ಭಾರಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
Karnataka News Today Live: ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಸ್ಥಳಾಂತರ ಊಫಿ - ಟರ್ಫ್ ಕ್ಲಬ್ ಗುತ್ತಿಗೆ 30 ವರ್ಷ ವಿಸ್ತರಣೆ!
ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್‌ಗೆ ಸ್ಥಳಾಂತರಿಸುವ ವದಂತಿಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದ ಗುತ್ತಿಗೆಯನ್ನು ಪರಿಷ್ಕೃತ ಮೊತ್ತದೊಂದಿಗೆ ಮುಂದಿನ 30 ವರ್ಷಗಳ ಕಾಲ ವಿಸ್ತರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಿಂದ ಕುಣಿಗಲ್ ಜನರ ನಿರೀಕ್ಷೆ ಹುಸಿಯಾಗಿದೆ.
Karnataka News Today Live: ಪವನ್ ಕಲ್ಯಾಣ್ ಪ್ಯಾಂಟ್ ಹಿಂದಿದೆ ಎರಡನೇ ವಿಶ್ವಯುದ್ಧದ ನಂಟು! ಮಾಜಿ ಪತ್ನಿ ಈಗ ಬಾಯಿಬಿಟ್ರು ಅಚ್ಚರಿಯ ಕಥೆ
Karnataka News Today Live: ಬಳ್ಳಾರಿ ಪಾಳುಬಿದ್ದ ಹೊಲದಲ್ಲಿ ಅಪರೂಪದ ಅಪ್ರಕಟಿತ ಶಾಪಶಯ ಶಾಸನ ಪತ್ತೆ, ಭೂದಾನಕ್ಕೆ ಅಡ್ಡಿಪಡಿಸಿದರೆ ಕತ್ತೆ ಜನ್ಮದ ಶಾಪ!
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿ 12 ಸಾಲುಗಳ ಅಪರೂಪದ ಕನ್ನಡ ಶಿಲಾಶಾಸನ ಪತ್ತೆಯಾಗಿದೆ. ವಿಜಯನಗರೋತ್ತರ ಕಾಲಕ್ಕೆ ಸೇರಿರಬಹುದಾದ ಈ ಶಾಸನದಲ್ಲಿ ಭೂದಾನ ಮತ್ತು ಅದನ್ನು ಉಲ್ಲಂಘಿಸುವವರಿಗೆ ಕತ್ತೆಯ ಜನ್ಮದ ಶಾಪ ನೀಡಿರುವ ಉಲ್ಲೇಖವಿದೆ.
Karnataka News Today Live: ಈ ನಟಿಯ ಅಭಿನಯ ನನ್ನನ್ನು ಬಹಳವಾಗಿ ಆಕರ್ಷಿಸಿದೆ - ಮಲಯಾಳಂ ಬೆಡಗಿಯನ್ನು ಹೊಗಳಿದ ಮೇಘನಾ ರಾಜ್
ಕನ್ನಡ ನಟಿ ಮೇಘನಾ ರಾಜ್ ಅವರು ಮಲಯಾಳಂ ನಟಿ ಮಮಿತಾ ಬೈಜು ಅಭಿನಯಕ್ಕೆ ಮನಸೋತಿದ್ದಾರೆ. ಸೂರ್ಯ ನಟನೆಯ ‘ವಿಶ್ವನಾಥ್ & ಸನ್ಸ್’ ಸಿನಿಮಾದಲ್ಲಿನ ಮಮಿತಾ ಪಾತ್ರದ ಬಗ್ಗೆ ಮೇಘನಾ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Karnataka News Today Live: ಮಲೆ ಮಹದೇಶ್ವರ ಜಾತ್ರೆಯ ಭಕ್ತಾದಿಗಳಿಗೆ 2 ಲಕ್ಷ ಲಾಡು ಸಿದ್ಧ; ಬೆಟ್ಟಕ್ಕೆ ಬರುವ ಮುನ್ನ ಈ ರೂಲ್ಸ್ ತಿಳಿಯಿರಿ!
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 6 ರಿಂದ 10ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 2 ಲಕ್ಷಕ್ಕೂ ಹೆಚ್ಚು ಲಾಡು ಪ್ರಸಾದ ತಯಾರಿಸಲಾಗುತ್ತಿದೆ.