- Home
- News
- State
- Karnataka News Live: ರಾಜ್ಯದಲ್ಲಿ ಇವತ್ತು ಮೂರು ಪ್ರತ್ಯೇಕ ದುರಂತಗಳು, ದಾರುಣವಾಗಿ ಪ್ರಾಣಬಿಟ್ಟ ಐವರು
Karnataka News Live: ರಾಜ್ಯದಲ್ಲಿ ಇವತ್ತು ಮೂರು ಪ್ರತ್ಯೇಕ ದುರಂತಗಳು, ದಾರುಣವಾಗಿ ಪ್ರಾಣಬಿಟ್ಟ ಐವರು

ನವದೆಹಲಿ: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕೆದಾಟು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಸ್ಥಾಯಿ ಸಮಿತಿಯು ಕೂಡಲೇ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಸಚಿವ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವದೆಹಲಿಯ ಪರಿಸರ ಭವನದಲ್ಲಿ ಗುರುವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ ಡಿಕೆಶಿ, ರಾಜ್ಯದ ಪ್ರಮುಖ ಯೋಜನೆಗಳು ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಕಸ್ತೂರಿ ರಂಗನ್ ವರದಿ: ಭೌತಿಕ ಸಮೀಕ್ಷೆಗೆ ಪಟ್ಟು
ಪಶ್ಚಿಮ ಘಟ್ಟಗಳ ರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯ ಕುರಿತು ಮಾತನಾಡಿದ ಡಿಸಿಎಂ, "ರಾಜ್ಯದಲ್ಲಿ ಭೌತಿಕ ಸಮೀಕ್ಷೆ (Physical Survey) ಸಂಪೂರ್ಣವಾಗಿ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬಾರದು," ಎಂದು ಕೇಂದ್ರ ಸಚಿವರಲ್ಲಿ ಸ್ಪಷ್ಟವಾಗಿ ಮನವಿ ಮಾಡಿದರು. ವಾಸ್ತವಿಕ ಸ್ಥಿತಿಗತಿಗಳನ್ನು ಅರಿಯದೆ ಅಂತಿಮ ನಿರ್ಧಾರ ಕೈಗೊಂಡರೆ ಸ್ಥಳೀಯ ಜನರ ಜನಜೀವನಕ್ಕೆ ತೊಂದರೆಯಾಗಲಿದೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದರು.
Karnataka News Live ರಾಜ್ಯದಲ್ಲಿ ಇವತ್ತು ಮೂರು ಪ್ರತ್ಯೇಕ ದುರಂತಗಳು, ದಾರುಣವಾಗಿ ಪ್ರಾಣಬಿಟ್ಟ ಐವರು
Karnataka News Live ದಸರಾ ಸಂಭ್ರಮದಲ್ಲಿ ಮೈಸೂರು ಮೃಗಾಲಯಕ್ಕೆ ಬಂಪರ್ ಆದಾಯ - 1.57 ಲಕ್ಷ ಪ್ರವಾಸಿಗರಿಂದ ಬಂತು ಕೋಟಿ, ಕೋಟಿ ಆದಾಯ!
Karnataka News Live ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ, ರಾಯಚೂರಿನ ಸೊಸೆ ಆಗಲಿದ್ದಾರೆ ಸತೀಶ್ ಜಾರಕಿಹೊಳಿ ಪುತ್ರಿ!
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು ಬೆಳಗಾವಿಯಲ್ಲಿ ಗೌತಮ್ ಪಾಟೀಲ್ ಅವರೊಂದಿಗೆ ಸರಳವಾಗಿ ನೆರವೇರಿತು. ರಾಜಕೀಯ ಭಿನ್ನಾಭಿಪ್ರಾಯ ಮರೆತು ಜಾರಕಿಹೊಳಿ ಸಹೋದರರು ಈ ಕೌಟುಂಬಿಕ ಸಮಾರಂಭದಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.
Karnataka News Live 'ಮಳೆ ಇಲ್ಲವೆಂದು ಕೊರಗಬೇಡಿ, ಸರ್ವ ಮಳೆ ಕೊಡ್ತೀನಿ' ರೈತರಿಗೆ ಸಂತಸದ ಸುದ್ದಿ ನೀಡಿದ ಶ್ರೀ ರಾವುತರಾಯರ ಕಾರ್ಣಿಕ ನುಡಿ
Karnataka News Live ₹5 ಲಕ್ಷ ಹಣ, ಕಾರು ವಾಪಸ್ ಕೊಡದೇ ಬೆದರಿಕೆ ಆರೋಪ; ನಟ ಧನ್ವೀರ್ ವಿರುದ್ಧ ಮತ್ತೊಂದು ಕೇಸ್ ದಾಖಲು
₹5 ಲಕ್ಷ ಹಣ, ಕಾರು ವಾಪಸ್ ಕೊಡದೇ ಬೆದರಿಕೆ ಆರೋಪ ನಟ ಧನ್ವೀರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಇವತ್ತು ದರ್ಶನ್ ಆಪ್ತ ಧನ್ವೀರ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಏನಿದು ಪ್ರಕರಣ? ಸ್ಟೋರಿ ಓದಿ
Karnataka News Live ಮೈಸೂರು ದಸರಾ ಡ್ರೋನ್ ಶೋಗೆ ಗಿನ್ನೆಸ್ ದಾಖಲೆ! 3,473 ಡ್ರೋನ್‌ಗಳಿಂದ ಮೂಡಿಬಂತು ಭವ್ಯ ನವಿಲು
ಮೈಸೂರು ದಸರಾ 2026ರ ಅಂಗವಾಗಿ ಬನ್ನಿಮಂಟಪದಲ್ಲಿ ನಡೆದ ಡ್ರೋನ್ ಪ್ರದರ್ಶನ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. 3,473 ಡ್ರೋನ್‌ಗಳ ಬೆಳಕಿನಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ರೂಪಿಸಲಾಯಿತು. ಸಿಇಎಸ್‌ಸಿ ಮತ್ತು ಬಾಟ್‌ಲ್ಯಾಬ್ ಡೈನಾಮಿಕ್ಸ್‌ನ ಈ ಸಾಧನೆ ಮೈಸೂರು ದಸರಾ ವೈಭವಕ್ಕೆ ಮತ್ತೊಂದು ಗರಿ ಸೇರಿಸಿದೆ.
Karnataka News Live ಈಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೊಲೆ ಬೆದರಿಕೆ ಕೇಸ್, ಧನ್ವೀರ್ ಗೌಡ ತಂದೆಯಿಂದ ದೂರು ದಾಖಲು
ನಟ ಧನ್ವೀರ್ ಗೌಡ ಅವರ ಮನೆಗೆ ನುಗ್ಗಿ ರೌಡಿಗಳಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಇತರ ಮೂವರ ವಿರುದ್ಧ ಧನ್ವೀರ್ ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ.
Karnataka News Live ₹61 ಲಕ್ಷ ನೀಡಿ ಒಂದು ಎತ್ತು ಖರೀದಿ, ಈ ಕನ್ನಡಿಗನ ಎತ್ತುಗಳ ಮೇಲಿನ ಕಾಳಜಿ, ಸಹಾಸದ ಕತೆ ರೋಚಕ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಿರೂರು ಗ್ರಾಮದ ರೈತ ಬಾಳು ಹಜಾರೆ ಅವರು ಬರೋಬ್ಬರಿ 61 ಲಕ್ಷ ರೂ. ನೀಡಿ 'ಬ್ರೇಕ್ ಫೇಲ್ ಬೈಜಾ' ಎಂಬ ಖ್ಯಾತ ಓಟದ ಎತ್ತು ಖರೀದಿಸಿದ್ದಾರೆ. ಕಾರು, ಬಂಗಲೆಗಳ ಹಿಂದೆ ಬೀಳುವ ಇಂದಿನ ಕಾಲದಲ್ಲಿ, ಇವರ ಗೋಪ್ರೇಮ ಮತ್ತು ಎತ್ತಿನ ಓಟದ ಮೇಲಿನ ಆಸಕ್ತಿ ಎಲ್ಲರ ಗಮನ ಸೆಳೆದಿದೆ.
Karnataka News Live 'ಕನ್ನಡ ಸಿನಿಮಾದಲ್ಲಿ ವಿಲನ್ ಗ್ಯಾಂಗ್‌ನಲ್ಲಿದ್ದ ಹುಡುಗ ಇವತ್ತು ಕರ್ನಾಟಕದ ಕುಬೇರ - ಸ್ಯಾಂಡಲ್‌ವುಡ್ ಅನುಭವ ಬಿಚ್ಚಿಟ್ಟ ಜೆರೋಧಾ ನಿತಿನ್ ಕಾಮತ್!
Karnataka News Live Constipation In Children - ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯೇ? ಲಕ್ಷಣಗಳು ಹಾಗಿರುತ್ತವೆ, ಹೀಗೆ ಪರಿಹಾರ ಮಾಡಿ
ಮಕ್ಕಳಲ್ಲಿ ಮಲಬದ್ಧತೆ (Constipation) ಕಾಡುವುದು ಈಗೀಗ ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಸಾಕಷ್ಟು ಒದ್ದಾಡುತ್ತಾರೆ. ಸರಿಯಾಗಿ ಊಟ ಮಾಡದಿರುವುದು, ನೀರು ಕುಡಿಯದಿರುವುದು ಇದಕ್ಕೆ ಮುಖ್ಯ ಕಾರಣ. ಈ ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
Karnataka News Live ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ - ಕರಾವಳಿ, ಮಲೆನಾಡಿಗೆ 'ಎಲ್ಲೋ ಅಲರ್ಟ್' ನೀಡಿದ ಹವಾಮಾನ ಇಲಾಖೆ
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.
Karnataka News Live ಕನ್ನಡ ಹಾಡೇ ಹಾಡಬೇಕು, ಸೋನು ನಿಮಗ್ ಯಲಹಂಕ ಕಾರ್ಯಕ್ರಮಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ
ಸೋನು ನಿಗಮ್ ನಾಳೆ ಬೆಂಗಳೂರಿನ ಯಲಹಂಕದಲ್ಲಿನ ಕಾರ್ಯಕ್ರಮಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ಕನ್ನಡ ಹಾಡೇ ಹಾಡಬೇಕು, ಬೇರೆ ಹಾಡು ಹಾಡಂಗಿಲ್ಲ ಎಂದಿದ್ದಾರೆ.
Karnataka News Live ದರ್ಶನ್‌ಗೆ ಅನ್ಯಾಯ ಮಾಡ್ತಿದ್ದಾರೆ, ಅದಕ್ಕಾಗಿಯೇ ವಿಜಯಲಕ್ಷ್ಮೀ ಮ್ಯಾನೇಜರ್‌ಗೆ ಬೈದಿದ್ದೇನೆ - ಕೇಸ್ ಬೆನ್ನಲ್ಲೇ ಕಿಡಿಕಿಡಿಯಾದ ಧನ್ವೀರ್
Karnataka News Live ಆ ಹಾಡು ಹಾಡಲು ನರಕಯಾತನೆ ಅನುಭವಿಸಿದ್ದೆ - ರೆಕಾರ್ಡಿಂಗ್ ಮಧ್ಯೆ ಅಂದು ಎಸ್‌ಪಿಬಿಗೆ ಆಗಿದ್ದೇನು?
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ‘ಗೀತಾಂಜಲಿ’ ಚಿತ್ರದ ‘ಓ ಪಾಪ ಲಾಲಿ’ ಹಾಡಿನ ರೆಕಾರ್ಡಿಂಗ್ ವೇಳೆ ಎದುರಿಸಿದ್ದ ಧ್ವನಿ ಸಮಸ್ಯೆ, ಶಸ್ತ್ರಚಿಕಿತ್ಸೆಗೂ ಮುನ್ನದ ಆತಂಕ, ಹಳೆಯ ಸಂದರ್ಶನದಲ್ಲಿ ಹಂಚಿಕೊಂಡಿದ್ದ ಅನುಭವಗಳು ಇಲ್ಲಿವೆ.
Karnataka News Live ನಮ್ಮ ಮೆಟ್ರೋ ಆರೆಂಜ್ ಲೈನ್ ಡಬಲ್ ಡೆಕ್ಕರ್ ಕಾನ್ಸೆಪ್ಟ್ ರದ್ದು, 4 ಫ್ಲೈಓವರ್, ಗೊರಗುಂಟೆಪಾಳ್ಯದಲ್ಲಿ 2 ಕಿ.ಮೀ ಸುರಂಗ ರಸ್ತೆಯ ಹೊಸ ಪ್ಲ್ಯಾನ್!
BMRCL ನಮ್ಮ ಮೆಟ್ರೋದ 3ನೇ ಹಂತದ 'ಆರೆಂಜ್ ಲೈನ್' ಯೋಜನೆಯಲ್ಲಿ ಭಾರಿ ಬದಲಾವಣೆ ಮಾಡಿದ್ದು, ಡಬಲ್ ಡೆಕ್ಕರ್ ಮಾದರಿಯನ್ನು ರದ್ದುಗೊಳಿಸಿದೆ. ಬದಲಾಗಿ ವಾಹನ ದಟ್ಟಣೆ ನಿಯಂತ್ರಿಸಲು 4 ಫ್ಲೈಓವರ್‌ಗಳು ಹಾಗೂ ಗೊರಗುಂಟೆಪಾಳ್ಯದಲ್ಲಿ 2 ಕಿ.ಮೀ ಉದ್ದದ ಕಿರು ಸುರಂಗ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಿದೆ.
Karnataka News Live 45 ನಿಮಿಷ ಬದಲಿಗೆ 12 ಮಿನಿಟ್ ಡ್ಯಾನ್ಸ್ ಮಾಡಿ ಪರಾರಿ, ಖ್ಯಾತ ನಟಿ ವಿರುದ್ಧ ₹1.20 ಕೋಟಿ ನಷ್ಟ ಪರಿಹಾರ ಹೂಡಿದ ಆಯೋಜಕರು
Karnataka News Live MINUGU TAARE KALPANA DEATH SECRET - ಆ ಜೋಡಿ ಮಾಡದ ಅದೊಂದೇ ತಪ್ಪಿಗೆ ಮಿನುಗುತಾರೆ ಕಲ್ಪನಾ ಪ್ರಾಣಪಕ್ಷಿ ಹಾರಿಹೋಯ್ತು; ಅಂದು ನಿಜವಾಗಿ ನಡೆದಿದ್ದೇನು?
ಕಲ್ಪನಾ ಅವರ ಬದುಕಿನ ಕೊನೆಯ ದಿನಗಳ ಕುರಿತು ಜಯಲಕ್ಷ್ಮೀ ಹಂಚಿಕೊಂಡಿರುವ ಈ ನೆನಪುಗಳು ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ. ಇಲ್ಲಿ ಉಲ್ಲೇಖಿಸಿರುವ ಘಟನೆಗಳು ಸಂದರ್ಶನದಲ್ಲಿ ಕಲ್ಪನಾರ ಸಹ ನಟಿ ಹೇಳಿದ ಹೇಳಿಕೆಗಳಾಗಿವೆ. ನಿಜವಾಗಿಯೂ ಶಾಕಿಂಗ್!
Karnataka News Live ಚೈತ್ರಾ ಆಚಾರ್ ನಟನೆ, ಪ್ರಶಾಂತ್ ನೀಲ್ ಹೆಸರು - ವಿಮರ್ಶೆಯಲ್ಲಿ ಬಯಲಾಯ್ತು ‘418’ ಹಾರರ್ ಅಸಲಿ ಆಟ
418 ಹಾರರ್ ಸಿನಿಮಾ ಹೇಗಿದೆ? ಚೈತ್ರಾ ಜೆ. ಆಚಾರ್, ರಮೇಶ್ ಇಂದಿರಾ ಅಭಿನಯದ ಈ ಚಿತ್ರದಲ್ಲಿ ಹಳೆಯ ಹಾಸ್ಟೆಲ್, 418ನೇ ಕೊಠಡಿಯ ನಿಗೂಢತೆ ಹಾಗೂ ಭಯಾನಕ ಘಟನೆಗಳು ಪ್ರಮುಖ ಆಕರ್ಷಣೆಗಳಾಗಿವೆ.
Karnataka News Live ಅಕ್ಟೋಬರ್ ಅಂತ್ಯಕ್ಕೆ ಕೆಆರ್ ಪುರ-ಮಾರತಹಳ್ಳಿ ನಡುವೆ ಬ್ಲ್ಯೂ ಲೈನ್ ಮೆಟ್ರೋ ಪ್ರಾಯೋಗಿಕ ಸಂಚಾರ!
ನಮ್ಮ ಮೆಟ್ರೋದ 'ಬ್ಲೂ ಲೈನ್' ಯೋಜನೆಯ ಕೆಆರ್ ಪುರಂ ಮತ್ತು ಮಾರತಹಳ್ಳಿ ನಡುವೆ ಅಕ್ಟೋಬರ್ ಅಂತ್ಯಕ್ಕೆ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಕಾಮಗಾರಿ ಪರಿಶೀಲಿಸಿ, ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
Karnataka News Live ಸೌಜನ್ಯ ಕೇಸ್ ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಬೆಳ್ತಂಗಡಿ ಕೋರ್ಟ್‌ನಲ್ಲಿ ತಾಯಿ ರಕ್ತ ಮಾದರಿ ಸಂಗ್ರಹ
ಬೆಳ್ತಗಂಡಿ ತಾಲೂಕಿನ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆಗೆ ರಚನೆಗೊಂಡ ಎಸ್‌ಐಟಿ ತಂಡ ಬೆಳ್ತಂಗಡಿ ಕೋರ್ಟ್‌ನಲ್ಲೇ ಸೌಜನ್ಯ ತಾಯಿ ರಕ್ತದ ಮಾದರಿ ಸಂಗ್ರಹಿಸಿದೆ. ಜೊತೆಗೆ ಕೆಲ ದಾಖಲೆ ಸಲ್ಲಿಸಿದೆ.