Bengaluru STRR: ಬೆಂಗಳೂರಿನ ಹೊಸಕೋಟೆ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದಾಗಿ ಹೊಸಕೋಟೆ-ಹೊಸೂರು STRR ಮಾರ್ಗ ಪೂರ್ಣಗೊಳ್ಳುವುದು ತಡವಾಗಲಿದೆ. ಹೀಗಾಗಿ ಡಿಸೆಂಬರ್‌ನಲ್ಲಿ 21 ಕಿ.ಮೀ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು NHAI ನಿರ್ಧರಿಸಿದೆ.
Bengaluru STRR: ಕಳೆದ 18 ತಿಂಗಳಿನಿಂದ ಬೆಂಗಳೂರಿನ ಹೊಸಕೋಟೆ ಬಳಿಯ ಪ್ರಮುಖ ರೈಲ್ವೆ ಮೇಲ್ಸೇತುವೆಯೊಂದರ ಕಾಮಗಾರಿ ವಿಳಂಬದಿಂದಾಗಿ ಸ್ಯಾಟಲೈಟ್ ಟೌನ್‌ರಿಂಗ್ ರಸ್ತೆ(STRR) ತಮಿಳನಾಡು ಗಡಿ ತಲುಪಿಸುವ ಹೊಸಕೋಟೆ-ಹೊಸೂರು ಮಾರ್ಗವು ಮಾರ್ಚ್ 2027ರವರೆಗೂ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಮೇಲ್ಸೇತುವೆ ಸಂಪೂರ್ಣವಾಗಿ ನಿರ್ಮಾಣವಾಗುವವರೆಗೆ ಕಾಯುವ ಬದಲು ಡಿಸೆಂಬರ್ ತಿಂಗಳಿನಲ್ಲೇ ಈ 21 ಕಿಲೋಮೀಟರ್ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಮುಂದಾಗಿದೆ.
ಈಗಾಗಲೇ ಹೆದ್ದಾರಿ ಪೂರ್ಣಗೊಂಡಿರುವ ಭಾಗವನ್ನು ಹಂತ ಹಂತವಾಗಿ ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಲಿಂಗಧೀರಮಲ್ಲಸಂದ್ರದಲ್ಲಿನ ಅಂದರೆ ರಸ್ತೆಯು ಬೆಂಗಳೂರು-ಚೆನ್ನೈ ರೈಲು ಮಾರ್ಗ ದಾಟುವ ನಿರ್ಮಾಣ ಪ್ರದೇಶ ವಾಹನ ಸಂಚಾರವನ್ನು ಬೇರೆ ಮಾರ್ಗದ ಮೂಲಕ ತಿರುಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ರೈಲ್ವೆ ಮೇಲ್ಸೇತುವೆ(ROB ಕಾಮಗಾರಿ ನಡೆಯುತ್ತಿರುವಾಗಲೂ, ವಾಹನ ಸವಾರರು ಈಗಾಗಲೇ ಪೂರ್ಣಗೊಂಡ ರಸ್ತೆಯ ಬಹುಭಾಗವನ್ನು ಬಳಸಲು ಇದು ಅನುವು ಮಾಡಿಕೊಡುತ್ತದೆ.
ರೈಲು ಮಾರ್ಗದ ಅಡ್ಡಲಾಗಿ 59 ಮೀಟರ್ ಉದ್ದದ ಗಿರ್ಡರ್ (girder) ಅನ್ನು ಅಳವಡಿಸಲು ಅನುಮತಿ ಪಡೆಯುವುದು ಸದ್ಯದ ಸವಾಲಾಗಿದೆ. ಹೊಸಕೋಟೆಯಿಂದ ಹೊಸೂರು ಕಡೆಗೆ ಸಾಗುವ ರಸ್ತೆಯಲ್ಲಿ, ಡಿಸೆಂಬರ್ ತಿಂಗಳೊಳಗೆ ಈ ಗಿರ್ಡರ್ ಅನ್ನು ಅಳವಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ. ಇದರ ಎದುರು ಭಾಗದಲ್ಲಿ, ಅಂದರೆ ಹೊಸಕೋಟೆಯ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮತ್ತೊಂದು ಗಿರ್ಡರ್ ಅನ್ನು ಮಾರ್ಚ್ 2027ರ ವೇಳೆಗೆ ಅಳವಡಿಸುವ ನಿರೀಕ್ಷೆಯಿದೆ.
ಹೊಸಕೋಟೆ-ಹೊಸೂರು(STRR) ರಸ್ತೆ ವಿಳಂಭಕ್ಕೆ ಕಾರಣವೇನು?
ಈ ವಿಳಂಬವು ಹೊಸಕೋಟೆ-ಹೊಸೂರು ನಡುವಿನ 21 ಕಿ.ಮೀ ಹೆದ್ದಾರಿಗೆ ಸಂಬಂಧಿಸಿದ್ದಲ್ಲ. ನಗರದ ಆಗ್ನೇಯ ಹೊರವಲಯದಲ್ಲಿರುವ ಲಿಂಗದೀರಮಲ್ಲಸಂದ್ರದಲ್ಲಿ ಬೆಂಗಳೂರು-ಚೆನ್ನೈ ರೈಲು ಮಾರ್ಗದಲ್ಲಿ ಬೌಸ್ಟ್ರಿಂಗ್ ಗಿರ್ಡರ್ ಅನ್ನು ಪ್ರಾರಂಭಿಸಿದ್ದರಿಂದ ಹೊಸಕೋಟೆ-ಹೊಸೂರು ರಸ್ತೆ ವಿಳಂಬಕ್ಕೆ ಕಾರಣವಾಗಿದೆ.54 ಮೀಟರ್ ಉದ್ದವಿರುವ ಈ ಬೌಸ್ಟ್ರಿಂಗ್ ಗಿರ್ಡರ್, ಬಿಲ್ಲು ಆಕಾರದ ರೈಲ್ವೆ ಓವರ್‌ಬ್ರಿಡ್ಜ್ ಆಗಿದ್ದು, ಪ್ರತಿ ದಿಕ್ಕಿನಲ್ಲಿ ಮೂರು ಲೇನ್‌ಗಳನ್ನು ಹೊಂದಿರುತ್ತದೆ. ಇದರ ಅನುಷ್ಠಾನಕ್ಕೆ(ಗಿರ್ಡರ್ ಲಾಂಚ್) ನೈಋತ್ಯ ರೈಲ್ವೆ ಇಲಾಖೆಯಿಂದ ಅನುಮೋದನೆಗಳು ಬೇಕಾಗುತ್ತವೆ ಉಳಿದ ಭಾಗಗಳಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದರೂ, ಗಿರ್ಡರ್‌ಗಳನ್ನು ಅಳವಡಿಸುವ (girder launch) ಕೆಲಸ ಬಾಕಿ ಉಳಿದಿರುವುದರಿಂದ ರಸ್ತೆಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. 'ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್' (RDSO) ಸ್ಥಳ ಪರಿಶೀಲನೆ ನಡೆಸಿ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತ್ತು.
ಮಾರ್ಚ್ 2027ಕ್ಕೆ ಮೊದಲೇ ರಸ್ತೆ ಪೂರ್ಣಗೊಳಿಸಲು NHAI ಪ್ಲಾನ್?
ROB ಯ ಎರಡೂ ಕ್ಯಾರೇಜ್‌ವೇಗಳು ಪೂರ್ಣಗೊಳ್ಳುವವರೆಗೆ ಕಾಯುವ ಬದಲು ಈಗಾಗಲೇ ಪೂರ್ಣಗೊಂಡಿರುವ ರಸ್ತೆಯನ್ನು ಹಂತ ಹಂತವಾಗಿ ಸಂಚಾರಕ್ಕೆ ಮುಕ್ತಗೊಳಿಸಲು NHAI ಯೋಜಿಸುತ್ತಿದೆ. ಹೊಸಕೋಟೆಯಿಂದ ಹೊಸೂರು ಕ್ಯಾರೇಜ್‌ವೇಗೆ ಗಿರ್ಡರ್ ಅನ್ನು ಡಿಸೆಂಬರ್‌ನಲ್ಲಿ ಮುಗಿದರೆ ಆದರೆ ಎದುರು ಭಾಗದಲ್ಲಿ ಕೆಲಸವು ಮಾರ್ಚ್ 2027 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.
ಬೆಂಗಳೂರಿನ ಸಂಚಾರ ವ್ಯವಸ್ಥೆಗೆ ಈ ಮಾರ್ಗ ಏಕೆ ಮುಖ್ಯ?
ಹೊಸಕೋಟೆ-ತಮಿಳುನಾಡು ನಡುವಿನ ಸಂಪರ್ಕಕ್ಕೆ 'STRR' (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಪ್ರಮುಖ ರಸ್ತೆಯಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಉಪನಗರಗಳನ್ನು (satellite towns) ಸಂಪರ್ಕಿಸಲು, ನಗರದ ಒಳಗೆ ಪ್ರವೇಶಿಸುವ ಅಗತ್ಯವಿಲ್ಲದ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಕರ್ನಾಟಕ-ತಮಿಳುನಾಡು ಗಡಿಯಲ್ಲಿ, ಈ ರಸ್ತೆಯು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬೆಳಗೊಂಡಪಳ್ಳಿಯ ಕಡೆಗೆ ಸಾಗುವ 36 ಕಿ.ಮೀ ಉದ್ದದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ; ಇದು ಅಲ್ಲಿಂದ ಮುಂದೆ ಹೊಸೂರಿಗೆ ಸಂಪರ್ಕ ಒದಗಿಸುತ್ತದೆ.
ಈ ಮಾರ್ಗವು ಸಂಚಾರಕ್ಕೆ ಮುಕ್ತವಾದ ನಂತರ, ಹೊಸಕೋಟೆ ಮತ್ತು ಹೊಸೂರು ನಡುವೆ ನೇರ ಸಂಚಾರ ಸಾಧ್ಯವಾಗಲಿದೆ. ವಿಶೇಷವಾಗಿ ಸರಕು ಸಾಗಣೆ ವಾಹನಗಳಿಗೆ ಮತ್ತು ತಮಿಳುನಾಡಿನ ಕಡೆಗೆ ಪ್ರಯಾಣಿಸುವ ವಾಹನ ಸವಾರರಿಗೆ ಇದು ಅನುಕೂಲಕರವಾಗಲಿದೆ. ಅಲ್ಲದೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ತುಮಕೂರು ರಸ್ತೆಯ ಕಡೆಗೆ ಸಂಪರ್ಕ ವ್ಯವಸ್ಥೆಯೂ ಸುಧಾರಿಸಲಿದೆ.
ಪ್ರಯಾಣಿಕರು ಮತ್ತು ಸಾರಿಗೆ ನಿರ್ವಾಹಕರಿಗೆ, ಡಿಸೆಂಬರ್‌ನ ಈ ಗಡುವು ಮಾರ್ಗದ ಬಹುಭಾಗವನ್ನು ಮೊದಲೇ ಬಳಸಿಕೊಳ್ಳಲು ಅವಕಾಶ ನೀಡಬಹುದು. ಆದರೆ, ರೈಲ್ವೆ ಮೇಲ್ಸೇತುವೆ (ROB) ಸಂಪೂರ್ಣವಾಗಿ ಸಿದ್ಧವಾಗುವ ಮೊದಲು, ಈ ಹಂತ ಹಂತದ ವ್ಯವಸ್ಥೆಯು ಪ್ರಯಾಣವನ್ನು ಸುಗಮಗೊಳಿಸಬಲ್ಲದೇ ಎಂಬುದೇ ದೊಡ್ಡ ಪ್ರಶ್ನೆ.

