ಕಾನ್ಪುರದಲ್ಲಿ ನಡೆದ 'ನಾಗಡಾ ನೈಟ್ಸ್' ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ಕೇವಲ 12 ನಿಮಿಷ ಡ್ಯಾನ್ಸ್ ಮಾಡಿ ವಿವಾದಕ್ಕೀಡಾಗಿದ್ದಾರೆ. 45 ನಿಮಿಷಗಳ ಪ್ರದರ್ಶನ ನೀಡದ ಕಾರಣ ಆಯೋಜಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ 1.20 ಕೋಟಿ ರೂ. ಪರಿಹಾರ ಕೋರಿ ಕಾನೂನು ನೋಟಿಸ್ ಕೂಡ ಕಳುಹಿಸಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ವಿವಾದ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಕಾನ್ಪುರದಲ್ಲಿ 'ನಾಗಡಾ ನೈಟ್ಸ್' ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಜನರ ರಂಜಿಸಲು ಅಂಜಲಿ ಅರೋರಾ ಅವರಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅರೋರಾ, ಕೊನೆಯಲ್ಲಿ ಒಂದು ಮಿಸ್ಟೇಕ್ಸ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಆಗಿದ್ದೇನು?

ಆಯೋಜಕರಿಗೆ ಕೊಟ್ಟ ಮಾತಿನಂತೆ ಅರೋರಾ ಬರೋಬ್ಬರಿ 45 ನಿಮಿಷಗಳ ಕಾಲ ಅವರ ವೇದಿಕೆ ಮೇಲೆ ಡ್ಯಾನ್ಸ್ ಮಾಡಬೇಕಿತ್ತು. ಆದರೆ ಕೇವಲ 12 ನಿಮಿಷ ಮಾತ್ರ ಡ್ಯಾನ್ಸ್‌ ಮಾಡಿ ಅಲ್ಲಿಂದ ನಿರ್ಗಮಿಸಿದ್ದಾರೆ. ಇದು ಆಯೋಜಕರ ವಿರೋಧಕ್ಕೆ ಕಾರಣವಾಗಿದೆ. ಆಯೋಜಕರು ಹೇಳುವ ಪ್ರಕಾರ.. ನಾವು ಅಂಜಲಿ ಅವರಿಗೆ ಬರೋಬ್ಬರಿ 2.75 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ಅವರು ಅರ್ಧಕ್ಕೆ ಹೋಗಿದ್ದರಿಂದ ನಾವು ಹಣವನ್ನು ತಡೆ ಹಿಡಿದಿದ್ದೇವು. ಅವರು ಕಾರ್ಯಕ್ರಮವನ್ನು ಅರ್ಧಕ್ಕೆ ಮುಗಿಸಿರೋದ್ರಿಂದ ನಮಗೆ 20 ಲಕ್ಷ ರೂಪಾಯಿ ನಷ್ಟವಾಗಿದೆ. ಈ ಸಂಬಂಧ ಸ್ವರೂಪ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಜಕರು ಆಗ್ರಹಿಸಿದ್ದಾರೆ.

ವಕೀಲರು ನೀಡಿರುವ ಮಾಹಿತಿ ಪ್ರಕಾರ.. ಅಕ್ಟೋಬರ್ 15 ರಂದು ಕಾರ್ಯಕ್ರಮ ಆಯೋಜನೆಗೊಂಡಿತ್ತು. ಲಜಪತ್ ಭವನ್‌ನಲ್ಲಿ ಕಾರ್ಯಕ್ರಮ ನಡೆದಿತ್ತು. ಶೋರ್ ಬ್ಯಾಂಡ್‌ನ ನಿರ್ದೇಶಕ ಅಮನ್ ನಿಗಮ್, ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ನಿರ್ದೇಶಕ ಆಶಿಶ್ ಕುಮಾರ್ ಮತ್ತು ಈವೆಂಟ್ ಪ್ಲಾನರ್ ಅನುಭವ್ ರಾಜ್ ಆಯೋಜಿಸಿದ್ದರು. ಅವರಿಗೆ ಕಾರ್ಯಕ್ರಮಕ್ಕೆ ಒಟ್ಟು 3 ಲಕ್ಷ ರೂಪಾಯಿ ನೀಡುವ ಮಾತುಕತೆ ನಡೆದಿತ್ತು. ಅಂತೆಯೇ ಸಂಘಟಕರು 2.75 ಲಕ್ಷ ಹಣವನ್ನು ಈಗಾಗಲೇ ನೀಡಿದ್ದರು. ಅವರಿಗಾಗಿ ಆಯೋಕರು ವಿಮಾನ ಪ್ರಯಾಣ, ವಸತಿ ಹಾಗೂ ಆಹಾರ ವೆಚ್ಚವನ್ನು ಭರಿಸಿದ್ದರು.

ಅಕ್ಟೋಬರ್ 15 ರಂದು ಕಾನ್ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೊದಲು 75 ಸಾವಿರ ರೂಪಾಯಿ ಹಾಕಿಸಿಕೊಂಡಿದ್ದರು. ವಿಮಾನ ನಿಲ್ದಾಣ ಇಳಿದ ಬೆನ್ನಲ್ಲೇ ಉಳಿದ ಹಣವನ್ನು ಜಮೆ ಮಾಡುವಂತೆ ಕೇಳಿಕೊಂಡಿದ್ದರು. ಉಳಿದ ಮೊತ್ತವನ್ನು ಪಾವತಿಸಿದ ನಂತರ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಅವರ ಪ್ರದರ್ಶನಕ್ಕಾಗಿ ರಾತ್ರಿ 9 ಗಂಟೆಯಯಿಂದ 9.45ವರೆಗೆ ಸಮಯ ನಿಗಧಿ ಮಾಡಲಾಗಿತ್ತು. ಆದರೆ ಅವರು ರಾತ್ರಿ 9.45ರ ಸುಮಾರಿಗೆ ವೇದಿಕೆಗೆ ಬಂದರು. ಸುಮಾರು 12 ನಿಮಿಷಗಳ ಬಳಿಕ ಆಯೋಜಕರ ಜೊತೆ ವಾಗ್ವಾದ ನಡೆಸಿ ಅಲ್ಲಿಂದ ಹೊರಟು ಹೋದರ ಎನ್ನಲಾಗಿದೆ. ಇದರಿಂದ ನಮಗೆ ತುಂಬಾ ನಷ್ಟವಾಗಿದೆ. ಕಾರ್ಯಕ್ರಮ ವೀಕ್ಷಣೆಗಾಗಿ ಸಾವಿರಾರು ಜನರು ಬಂದಿದ್ದರು. ಅವರೆಲ್ಲರಿಗೂ ಅಂಜಲಿ ಮೋಸ ಮಾಡಿದ್ದಾರೆ. ಅವರನ್ನು ಕರೆಸಲು ನಾವು ಮಾಡಿದ ಒಟ್ಟು ವೆಚ್ಚ ಸೇರಿ 1.20 ಕೋಟಿ ಪರಿಹಾರ ನೀಡಬೇಕು. ಮತ್ತು ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಎಂದು ಆಗ್ರಹಿಸಿ ಕಾನೂನು ನೋಟಿಸ್ ಕಳುಹಿಸಿದ್ದಾರೆ.