- Home
- Life
- Health
- Constipation In Children: ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯೇ? ಲಕ್ಷಣಗಳು ಹಾಗಿರುತ್ತವೆ, ಹೀಗೆ ಪರಿಹಾರ ಮಾಡಿ
Constipation In Children: ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯೇ? ಲಕ್ಷಣಗಳು ಹಾಗಿರುತ್ತವೆ, ಹೀಗೆ ಪರಿಹಾರ ಮಾಡಿ
ಮಕ್ಕಳಲ್ಲಿ ಮಲಬದ್ಧತೆ (Constipation) ಕಾಡುವುದು ಈಗೀಗ ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಸಾಕಷ್ಟು ಒದ್ದಾಡುತ್ತಾರೆ. ಸರಿಯಾಗಿ ಊಟ ಮಾಡದಿರುವುದು, ನೀರು ಕುಡಿಯದಿರುವುದು ಇದಕ್ಕೆ ಮುಖ್ಯ ಕಾರಣ. ಈ ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಕ್ಕಳಲ್ಲಿ ಮಲಬದ್ಧತೆ ಲಕ್ಷಣಗಳೇನು?
ಕೆಟ್ಟ ಆಹಾರ ಪದ್ಧತಿ ಹಾಗೂ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದರಿಂದ ಮಕ್ಕಳಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಇದು ತಾತ್ಕಾಲಿಕ ಸಮಸ್ಯೆಯಾದರೂ, ಮಕ್ಕಳಿಗೆ ವಿಪರೀತ ನೋವು ಹಾಗೂ ಕಿರಿಕಿರಿ ಉಂಟುಮಾಡುತ್ತದೆ.
ಸಂಸ್ಕರಿಸಿದ ಆಹಾರಗಳಿಂದ ದೂರವಿಡಿ
ಚೀಸ್, ವೈಟ್ ಬ್ರೆಡ್, ರೆಡ್ ಮೀಟ್ ಹಾಗೂ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ತಿನ್ನುವ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚು ಕಾಡುತ್ತದೆ. ಹಾಗಾಗಿ ಇಂತಹ ಆಹಾರಗಳಿಂದ ಮಕ್ಕಳನ್ನು ಆದಷ್ಟು ದೂರವಿಡುವುದು ಒಳ್ಳೆಯದು.
ಮಕ್ಕಳಿಗೆ ಸಾಕಷ್ಟು ನೀರು ಕುಡಿಸಿ
ಪೋಷಕರು ಮಕ್ಕಳಿಗೆ ಫೈಬರ್ ಅಂಶ ಹೆಚ್ಚಿರುವ ಆಹಾರವನ್ನು ಕಡ್ಡಾಯವಾಗಿ ನೀಡಬೇಕು. ಇದರ ಜೊತೆಗೆ ಮಕ್ಕಳಿಗೆ ದಿನವಿಡೀ ಸಾಕಷ್ಟು ನೀರು ಕುಡಿಸುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು.
ಹೈಪೋಥೈರಾಯ್ಡಿಸಮ್ ಕೂಡ ಕಾರಣ
ಒಂದೇ ಕಡೆ ಕೂತು ಆಡುವ ಜಡ ಜೀವನಶೈಲಿಯಿಂದ ಮಕ್ಕಳಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಶಾಲೆ ಶುರುವಾಗುವ ಟೆನ್ಷನ್, ಮನೆ ಬದಲಾಯಿಸುವುದು ಅಥವಾ ಹೈಪೋಥೈರಾಯ್ಡಿಸಮ್ನಂತಹ ಆರೋಗ್ಯ ಸಮಸ್ಯೆಗಳು ಕೂಡ ಮಕ್ಕಳಲ್ಲಿ ಮಲಬದ್ಧತೆಗೆ ಕಾರಣವಾಗಬಹುದು.
ನಾರಿನಂಶದ ಕೊರತೆ
ಮಕ್ಕಳು ನಾರಿನಂಶ (ಫೈಬರ್) ಇರುವ ಆಹಾರ ಹಾಗೂ ಸಾಕಷ್ಟು ನೀರು ಕುಡಿಯದೇ ಇದ್ದರೆ ಮಲಬದ್ಧತೆ ಶುರುವಾಗುತ್ತದೆ. ಪ್ರೊಸೆಸ್ಡ್ ಫುಡ್ (ಸಂಸ್ಕರಿಸಿದ ಆಹಾರ) ಹೆಚ್ಚಾಗಿ ತಿಂದರೂ ಈ ಸಮಸ್ಯೆ ಬರುತ್ತದೆ. ಏಕೆಂದರೆ ಇವುಗಳಲ್ಲಿ ಪೋಷಕಾಂಶಗಳು ತೀರಾ ಕಡಿಮೆ ಇರುತ್ತವೆ.
ಟಾಯ್ಲೆಟ್ ಹೋಗಲು ಮಕ್ಕಳ ಹಿಂದೇಟು
ಕೆಲವು ಮಕ್ಕಳು ಟಾಯ್ಲೆಟ್ ಹೋಗಲು ಭಯಪಡುತ್ತಾರೆ. ಹೀಗೆ ಮಲವನ್ನು ತಡೆದಿಟ್ಟುಕೊಳ್ಳುವುದೇ ಮಲಬದ್ಧತೆಗೆ ಮುಖ್ಯ ಕಾರಣ. ಮಕ್ಕಳಿಗೆ ನಾರಿನಂಶ ಇರುವ ಆಹಾರ, ಸಾಕಷ್ಟು ನೀರು ಕೊಡುವ ಮೂಲಕ ಹಾಗೂ ಪ್ರತಿದಿನ ಟಾಯ್ಲೆಟ್ ಹೋಗುವ ಅಭ್ಯಾಸ ಮಾಡಿಸುವ ಮೂಲಕ ಈ ಸಮಸ್ಯೆ ದೂರ ಮಾಡಬಹುದು.
ಒಣ ಮಲ, ಹೊಟ್ಟೆನೋವು
ಮಕ್ಕಳು ಟಾಯ್ಲೆಟ್ ಹೋಗಲು ಕಷ್ಟಪಡುತ್ತಿದ್ದರೆ, ಮಲ ಒಣಗಿದ್ದರೆ ಅಥವಾ ಹೊಟ್ಟೆನೋವು ಎಂದು ಅಳುತ್ತಿದ್ದರೆ ಅದು ಮಲಬದ್ಧತೆಯ ಲಕ್ಷಣ. ನೋವಿನ ಭಯದಿಂದ ಮಕ್ಕಳು ಟಾಯ್ಲೆಟ್ ಹೋಗುವುದನ್ನೇ ತಪ್ಪಿಸುತ್ತಾರೆ. ಜೊತೆಗೆ ಅವರಿಗೆ ಹಸಿವು ಕೂಡ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.






