09:40 PM (IST) Nov 09

Karnataka News Live 9th November: ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ

ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ ನೀಡಲಾಗಿದೆ. ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದ ಭಾಗವಾಗಿ ಬಂದ್‌ಕೆ ಕರೆ ನೀಡಲಾಗಿದೆ.

Read Full Story
09:40 PM (IST) Nov 09

Karnataka News Live 9th November: ತಲೈವರ್ 173 ಬಜೆಟ್ ಎಷ್ಟು - ಕಮಲ್ ಹಾಸನ್ ಉದಾರ ಕೊಡುಗೆ.. ನಿರ್ದೇಶಕ ಸುಂದರ್ ಸಂಭಾವನೆ ಇಷ್ಟೊಂದಾ?

ಸೂಪರ್‌ ಸ್ಟಾರ್ ರಜನಿಕಾಂತ್ ನಟನೆಯ ತಲೈವರ್ 173 ಚಿತ್ರಕ್ಕೆ ಕಮಲ್ ಹಾಸನ್ ಭರ್ಜರಿ ಬಜೆಟ್ ನೀಡಿದ್ದಾರಂತೆ. ಅಷ್ಟೇ ಅಲ್ಲ, ನಿರ್ದೇಶಕ ಸುಂದರ್ ಸಿ ಅವರ ಸಂಭಾವನೆ ವಿವರ ಕೂಡ ಹೊರಬಿದ್ದಿದೆ.

Read Full Story
09:14 PM (IST) Nov 09

Karnataka News Live 9th November: ಅಯ್ಯೋ ದುರ್ವಿಧಿಯೇ.. ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮಗ

ಆಸ್ತಿ ಹಂಚಿಕೆಗೆ ಒಪ್ಪದ ತಂದೆಯನ್ನ ,ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಡೆದಿದೆ. ನಾರಾಯಣ ಪರಶು ಮರಾಠಿ ಕೊಲೆಯಾದ ವ್ಯಕ್ತಿ.

Read Full Story
08:39 PM (IST) Nov 09

Karnataka News Live 9th November: ರಣಬೀರ್-ಆಲಿಯಾ 'ಲವ್ ಅಂಡ್ ವಾರ್' ರಿಲೀಸ್ ಡೇಟ್ ಫಿಕ್ಸ್ - ಈ ಸೂಪರ್‌ಸ್ಟಾರ್ ಜೊತೆ ಬಾಕ್ಸಾಫೀಸ್ ಫೈಟ್

ರಣಬೀರ್ ಕಪೂರ್-ಆಲಿಯಾ ಭಟ್ ಅಭಿನಯದ 'ಲವ್ ಅಂಡ್ ವಾರ್' ಸಿನಿಮಾ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಚಿತ್ರದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಇತ್ತೀಚೆಗೆ, ಚಿತ್ರದ ಸೆಟ್‌ನಿಂದ ಆಲಿಯಾ ಅವರ ಲುಕ್ ಕೂಡ ರಿವೀಲ್ ಆಗಿತ್ತು.

Read Full Story
08:17 PM (IST) Nov 09

Karnataka News Live 9th November: ಕಬ್ಬು ಬೆಳೆಗಾರರ ಕಿವಿಯಲ್ಲಿ ಹೂ ಇಟ್ಟು ದೋಖಾ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ. ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

Read Full Story
08:01 PM (IST) Nov 09

Karnataka News Live 9th November: ಇಂತವರು ಅಪ್ಪಿತಪ್ಪಿಯೂ ಬಿಯರ್ ಕುಡಿಯಬಾರದು.. ಕುಡಿದ್ರೆ ತುಂಬಾನೇ ಡೇಂಜರ್, ತಕ್ಷಣ ನಿಲ್ಲಿಸಿ!

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವರಲ್ಲಿ ಆಲ್ಕೋಹಾಲ್ ತೀವ್ರ ಪರಿಣಾಮ ಬೀರುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಬಿಯರ್‌ನಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ.

Read Full Story
07:45 PM (IST) Nov 09

Karnataka News Live 9th November: ಮುಧೋಳ ರೈತರ ಜೊತೆಗಿನ ಸಚಿವರ ಸಂಧಾನ ಸಭೆ ವಿಫಲ, ಆಕ್ರೋಶಕ್ಕೆ ರಾಜ್ಯ ಹೆದ್ದಾರಿ ಬಂದ್

ಮುಧೋಳ ರೈತರ ಜೊತೆಗಿನ ಸಚಿವರ ಸಂಧಾನ ಸಭೆ ವಿಫಲ, ಆಕ್ರೋಶಕ್ಕೆ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆಗೆ ಸಚಿವ ತಿಮ್ಮಾಪುರ ನಡೆಸಿದ ಸಭೆ ವಿಫಲಗೊಂಡಿದೆ.

Read Full Story
07:07 PM (IST) Nov 09

Karnataka News Live 9th November: Bigg Boss - ಸೈಕಿಗೆ ಮಾಡ್ತಿಲ್ಲ ಲೈಕು! ಕಾವು ಕೊಡೋದ್ಯಾಕೆ ನೋವು? ಡಮಾಲ್ ಡುಮಲ್ ಡಕ್ಕಾ- ಹೋಗೋದು ಪಕ್ಕಾ!

ಬಿಗ್ ಬಾಸ್ ಮನೆಯಲ್ಲಿ 'ಗಿಲ್ಲಿ ನಟ' ವೀಕ್ಷಕರ 'ಡಮಾಲ್ ಡುಮಲ್ ಡಕ್ಕಾ' ಕವನ ವಾಚಿಸಿ ಎಲ್ಲರ ಕಾಲೆಳೆದರು. ಇದೇ ವೇಳೆ, 'ಊಸರವಳ್ಳಿ' ಎಂದು ಕರೆದಿದ್ದಕ್ಕೆ ತೀವ್ರ ಬೇಸರಗೊಂಡ ಚಂದ್ರಪ್ರಭ, ಎಲಿಮಿನೇಷನ್‌ಗೂ ಮುನ್ನವೇ ಅನಿರೀಕ್ಷಿತವಾಗಿ ಮನೆಯಿಂದ ಹೊರನಡೆದಿದ್ದಾರೆ.
Read Full Story
07:01 PM (IST) Nov 09

Karnataka News Live 9th November: ರಾಜಮೌಳಿ ಸಿನಿಮಾಗಳೆಲ್ಲಾ ಆ ಭಾಷೆಯಲ್ಲಿ ಅಟ್ಟರ್ ಫ್ಲಾಪ್ - ಧೈರ್ಯ ಕೊಟ್ಟ ಸ್ಟಾರ್ ಹೀರೋ ಬಗ್ಗೆ ಜಕ್ಕಣ್ಣ ಹೀಗಂದ್ರು..

ಆ ಭಾಷೆಯಲ್ಲಿ ರಾಜಮೌಳಿ ಸಿನಿಮಾಗಳೆಲ್ಲಾ ಫ್ಲಾಪ್ ಆಗ್ತಿದ್ದವು. ಇದರಿಂದ ಜಕ್ಕಣ್ಣನಿಗೆ ಒಬ್ಬ ಸ್ಟಾರ್ ಹೀರೋ ಧೈರ್ಯ ತುಂಬಿದ್ರು. ಆ ಭಾಷೆಯಲ್ಲಿ ರಾಜಮೌಳಿಗೆ ಸಿಕ್ಕ ಮೊದಲ ಗೆಲುವು ಯಾವುದು ಅನ್ನೋದನ್ನ ಈ ಲೇಖನದಲ್ಲಿ ತಿಳಿಯಿರಿ.

Read Full Story
06:49 PM (IST) Nov 09

Karnataka News Live 9th November: ಹಿಂದೂ ಭಾವನೆ ಮರೆತರೆ ರಾಷ್ಟ್ರ ವಿಭಜನೆ - ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌

ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ, ಇಂಡಿಯಾ ಎಂದು ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ, ಆಲೋಚನೆ ಮಾತ್ರ ಒಂದು ರಾಷ್ಟವಾಗಿರಲಿ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್ ಭಾಗವತ್‌ ಹೇಳಿದರು.

Read Full Story
06:47 PM (IST) Nov 09

Karnataka News Live 9th November: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು, ತಕ್ಷಣದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು. ಆದರೆ ನಡೆದಿದ್ದೇ ಬೇರೆ. ಪೋಷಕರು ಅಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಮಗು ಬದುಕುಳಿಯಲಿಲ್ಲ.

Read Full Story
06:41 PM (IST) Nov 09

Karnataka News Live 9th November: ಬ್ರಾಹ್ಮಣ ಮಹಾಸಂಘ ಹೊಸ ನೇಮಕಾತಿ - ಮಹಿಳಾ ವಿಭಾಗ ಬಲವರ್ಧನೆಗೆ ವಿಶೇಷ ಒತ್ತು

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ), ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವು ಇಂದು ಭವ್ಯವಾಗಿ ನೆರವೇರಿತು.

Read Full Story
06:27 PM (IST) Nov 09

Karnataka News Live 9th November: ಪ್ರಾಣ ಕೈಲಿ ಹಿಡಿದು ಕಿಟಕಿಯಿಂದ ಜಿಗಿದು ಓಡಿಹೋದ್ರಂತೆ ಆ್ಯಂಕರ್ ಸುಮಾ.. ಚಿರಂಜೀವಿ, ಪವನ್ ಎಫೆಕ್ಟ್ ಕಾರಣವಂತೆ!

ಸುಮಾ ಕನಕಾಲ ಇತ್ತೀಚೆಗೆ ತಮ್ಮ ವೃತ್ತಿಜೀವನದ ಮೊದಲ ಬ್ರೇಕ್ ಬಗ್ಗೆ ಮಾತನಾಡಿದ್ದಾರೆ. ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ ಎದುರಾದ ಕಹಿ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಕೆಲವು ಬಾರಿ ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ ಕಿಟಕಿಯಿಂದ ಜಿಗಿದು ಓಡಿಹೋಗಬೇಕಾಯಿತು ಎಂದು ಹೇಳಿದ್ದಾರೆ.

Read Full Story
05:46 PM (IST) Nov 09

Karnataka News Live 9th November: ಕಾಂತಾರ ಚಾಪ್ಟರ್ 1 ಒಟ್ಟು ಕಲೆಕ್ಷನ್ ಎಷ್ಟು? ಈ ರಾಜ್ಯಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾಗೆ ತುಂಬಾ ನಷ್ಟವಂತೆ?

ಭಾರೀ ನಿರೀಕ್ಷೆಯೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ. 1000 ಕೋಟಿ ಕಲೆಕ್ಷನ್ ಮಾಡಲು ವಿಫಲವಾದ ರಿಷಬ್ ಶೆಟ್ಟಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ?

Read Full Story
05:32 PM (IST) Nov 09

Karnataka News Live 9th November: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ನವೆಂಬರ್‌ನಲ್ಲಿ ರಾಜಕೀಯ ಬದಲಾವಣೆ - ಸಂಸದ ಜಗದೀಶ್ ಶೆಟ್ಟರ್

ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕಬ್ಬು ಬೆಳೆಗಾರರು ಹೋರಾಟದ ಹಾದಿ ತುಳಿಯುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ಹರಿಹಾಯ್ದರು.

Read Full Story
05:27 PM (IST) Nov 09

Karnataka News Live 9th November: ಆರ್‌ಎಸ್‌ಎಸ್ ನಿಷೇಧ ಹೇಳಿಕೆ ಮೂರ್ಖತನದ್ದು - ಪ್ರಮೋದ್‌ ಮುತಾಲಿಕ್ ಆಕ್ರೋಶ

ಆರ್‌ಎಸ್‌ಎಸ್ ನಿಷೇಧ ಮಾಡುವುದು ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರಿಂದ ಸಾಧ್ಯವಿಲ್ಲ. ಇದನ್ನು ನಿಷೇಧ ಮಾಡುವ ಹೇಳಿಕೆ ನೀಡುವುದು ಮೂರ್ಖತನ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Read Full Story
05:00 PM (IST) Nov 09

Karnataka News Live 9th November: ಡೆಲಿವರಿ ಆದ್ಮೇಲೆ ಮುಟ್ಟು ಆಗದಿದ್ರೂ ಗರ್ಭಿಣಿ ಆಗೋ ಸಾಧ್ಯತೆ ಇದೆ - ವೈದ್ಯೆ ಕೊಟ್ಟ ಸಲಹೆ, ಎಚ್ಚರಿಕೆ ಏನು?

ಹೆರಿಗೆಯ ನಂತರ ದೈಹಿಕ ಸಂಪರ್ಕ ಮತ್ತು ಮುಟ್ಟಿನ ಬಗ್ಗೆ ಮಹಿಳೆಯರಿಗಿರುವ ಗೊಂದಲಗಳಿಗೆ ಸ್ತ್ರೀರೋಗ ತಜ್ಞರು ಉತ್ತರಿಸಿದ್ದಾರೆ. ಎದೆಹಾಲುಣಿಸುವಾಗ ಮುಟ್ಟು ವಿಳಂಬವಾದರೂ, ಅಂಡೋತ್ಪತ್ತಿ ಸಂಭವಿಸಿ ಗರ್ಭಧರಿಸುವ ಸಾಧ್ಯತೆ ಇರುವುದರಿಂದ, ಸುರಕ್ಷತಾ ವಿಧಾನಗಳನ್ನು ಬಳಸುವುದು ಅತ್ಯಗತ್ಯ ಎಂದು ಎಚ್ಚರಿಸಿದ್ದಾರೆ.

Read Full Story
04:54 PM (IST) Nov 09

Karnataka News Live 9th November: ಒಂದು ದಿನ ಹೋರಾಟ ಮಾಡಿದರೆ ರೈತರ ಮಕ್ಕಳಾಗಲ್ಲ - ಶಾಸಕ ಬಸನಗೌಡ ಯತ್ನಾಳ

ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿ. ಕೇವಲ ಒಂದು ದಿನ ಮಲಗಿದರೆ ರೈತರ ಮಕ್ಕಳಾಗಲು ಸಾಧ್ಯವೇ? ರೈತರ ಮಕ್ಕಳಾಗಿದ್ದರೆ ದುಬೈನಲ್ಲಿ ಯಾಕೆ ಆಸ್ತಿ ಮಾಡಿದ್ದಾರೆ ಎಂದು ಶಾಸಕ ವಿಜಯಪುರ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Read Full Story
04:54 PM (IST) Nov 09

Karnataka News Live 9th November: ರೈಲಿನಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಶಾಲಾ ಮಕ್ಕಳು - ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 

Read Full Story
04:46 PM (IST) Nov 09

Karnataka News Live 9th November: ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ

ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ, ಕೂಡ್ಲಿಗೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಭಾಷಣದ ನಡುವೇ ಹೌದೋ, ಅಲ್ವೋ ಎಂಬ ಪ್ರಶ್ನೆಗೆ ಎಲ್ಲರೂ ಮೌನವಾಗಿ ಕುಳಿತಿದ್ದು ಸಿದ್ದರಾಮಯ್ಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.

Read Full Story