- Home
- Entertainment
- TV Talk
- Bigg Boss: ಸೈಕಿಗೆ ಮಾಡ್ತಿಲ್ಲ ಲೈಕು! ಕಾವು ಕೊಡೋದ್ಯಾಕೆ ನೋವು? ಡಮಾಲ್ ಡುಮಲ್ ಡಕ್ಕಾ- ಹೋಗೋದು ಪಕ್ಕಾ!
Bigg Boss: ಸೈಕಿಗೆ ಮಾಡ್ತಿಲ್ಲ ಲೈಕು! ಕಾವು ಕೊಡೋದ್ಯಾಕೆ ನೋವು? ಡಮಾಲ್ ಡುಮಲ್ ಡಕ್ಕಾ- ಹೋಗೋದು ಪಕ್ಕಾ!
ಬಿಗ್ ಬಾಸ್ ಮನೆಯಲ್ಲಿ 'ಗಿಲ್ಲಿ ನಟ' ವೀಕ್ಷಕರ 'ಡಮಾಲ್ ಡುಮಲ್ ಡಕ್ಕಾ' ಕವನ ವಾಚಿಸಿ ಎಲ್ಲರ ಕಾಲೆಳೆದರು. ಇದೇ ವೇಳೆ, 'ಊಸರವಳ್ಳಿ' ಎಂದು ಕರೆದಿದ್ದಕ್ಕೆ ತೀವ್ರ ಬೇಸರಗೊಂಡ ಚಂದ್ರಪ್ರಭ, ಎಲಿಮಿನೇಷನ್‌ಗೂ ಮುನ್ನವೇ ಅನಿರೀಕ್ಷಿತವಾಗಿ ಮನೆಯಿಂದ ಹೊರನಡೆದಿದ್ದಾರೆ.

ಡಮಾಲ್ ಡುಮಲ್ ಡಕ್ಕಾ
ಬಿಗ್ಬಾಸ್ನಲ್ಲಿ ಈಗ ಡಮಾಲ್ ಡುಮಲ್ ಡಕ್ಕಾ ಕವನವನ್ನು ಓದುವ ಮೂಲಕ ಗಿಲ್ಲಿ ನಟ (Bigg Boss Gilli Nata) ಎಲ್ಲರಿಗೂ ಚಮಕ್ ಕೊಟ್ಟಿದ್ದಾರೆ. ಓದುಗರಿಂದ ಬಂದಿರುವ ಕವನವನ್ನು ಅವರು ಓದಿದ್ದಾರೆ. ಅದರಲ್ಲಿ ಅಶ್ವಿನಿ ಗೌಡ, ಕಾವ್ಯಾ ಶೈವ, ಧ್ರುವಂತ್ ಸೇರಿದಂತೆ ಬಹುತೇಕ ಮಂದಿಯ ಬಗ್ಗೆ ಸುಂದರವಾಗಿ ಬರೆಯಲಾಗಿದ್ದು, ಅದನ್ನು ಗಿಲ್ಲಿ ಓದಿದ್ದಾರೆ.
ಅಶ್ವಿನಿ ಗೌಡ ಬಗ್ಗೆ...
ಅಶ್ವಿನಿ ಗೌಡ (Bigg Boss Ashwini Gowda) ಬಗ್ಗೆ ಬೇರೆವರ ಬಗ್ಗೆ ಮಾತನಾಡಿ ಮಾತನಾಡಿ ಎಲ್ಲರಿಗೂ ಮಾಡ್ತಾ ಇರ್ತಾರೆ ಸೈಕು, ಅದಕ್ಕೆ ನಿಮಗೆ ಯಾರೂ ಮಾಡ್ತಿಲ್ಲ ಲೈಕು. ಡಮಾಲ್ ಡುಮಲ್ ಡಕ್ಕಾ ನೀವು ಆಚೆ ಹೋಗೋದು ಪಕ್ಕಾ ಎಂದು ಬರೆಯಲಾಗಿದೆ.
ಇನ್ನು ಕಾವ್ಯಾ ಶೈವ (Bigg Boss Kavya Shaiva)
ಕಾವು ಕಾವು ಕಾವು, ನೀನ್ಯಾಗೆ ಅಣ್ಣ ಗಿಲ್ಲಿಗೆ ಮಾಡ್ತಿಯಾ ನೋವು? ಡಮಾಲ್ ಡುಮಲ್ ಡಕ್ಕಾ ನೀನು ಇಲ್ಲೇ ಇರ್ತಿಯಾ ಪಕ್ಕಾ ಎಂದಿದ್ದಾರೆ.
ಧ್ರುವಂತ್ ಬಗ್ಗೆ...
ಕೊನೆಗೆ ಧ್ರುವಂತ್ ಬಗ್ಗೆ ವೀಕ್ಷಕರು ತುಂಬಾ ಕುತೂಹಲರಾಗಿದ್ದಾರೆ. ಅವರ ಬಗ್ಗೆ ಹೇಳಿ ಎಂದು ಸುದೀಪ್ ಹೇಳಿದ್ದಾರೆ. ಅಗ ಗಿಲ್ಲಿ ಅವರು, ಹೇಳಿದವರ ತಲೆಗೆ ಬಿಡ್ತಾರೆ ಡ್ರಿಲ್ಲಿಂಗು, ಅದನ್ನು ಕೇಳೋಕೆ ಎಲ್ಲರಿಗೂ ಬೋರಿಂಗು, ಮಾತೆತ್ತಿದ್ರೆ ಕ್ಯಾಮೆರಾ ಮುಂದೆ ನಿತ್ಕೋತಾನೆ, ಸ್ವಲ್ಪ ಹೊತ್ತಿನಲ್ಲೇ ಬಾಗಿಲ ಹತ್ತಿರ ನಿತ್ಕೋತಾನೆ ಎಂದು ಬರೆದಿರುವುದನ್ನು ಓದಿದ್ದಾರೆ.
ಬೇಸರದಿಂದ ಹೊರಕ್ಕೆ
ಅಷ್ಟಕ್ಕೂ ಇಂದು ಚಂದ್ರಪ್ರಭ ಅವರು ಬೇಸರದಿಂದ ಹೊರಗೆ ಬಂದಿರುವ ಘಟನೆಯೂ ನಡೆದಿದೆ. 20 ಹೆಸರುಗಳಲ್ಲಿ ಯಾರಿಗೆ ಯಾವ ಪದ ಸೂಕ್ತ ಎಂದು ಹೇಳಿ ಕೊಡಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದರು. ಆಗ ಕೆಲವರು ಕೆಲವರಿಗೆ ಒಂದಿಷ್ಟು ಟೈಟಲ್ ಕೊಟ್ಟಿದ್ದಾರೆ. ಇದರ ಪರಿಣಾಮ ಚಂದ್ರಪ್ರಭ ಅವರು ಹೊರಗಡೆ ಬಂದಿದ್ದಾರೆ.
ಊಸರವಳ್ಳಿ e
ಆ ವೇಳೆ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂದು ಹೇಳಲಾಗಿದೆ. ಇದು ಚಂದ್ರಪ್ರಭಗೆ ಬೇಸರ ಬಂದಿದೆ. ಕಣ್ಣೀರು ಹಾಕಿರುವ ಚಂದ್ರಪ್ರಭ ಯಾರಿಗೂ ಹೇಳದೆ ಹೊರಗಡೆ ಬಂದಿದ್ದಾರೆ. ಅಂದಹಾಗೆ ಈ ಬಾರಿ ದೊಡ್ಮನೆಯ ಡೋರ್ ಒಪನ್ ಇತ್ತು. ಕಿಚ್ಚನ ಪಂಚಾಯಿತಿ ಟೈಮ್‌ನಲ್ಲಿ ಬ್ರೇಕ್ ಇತ್ತು, ಆ ವೇಳೆ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ. ಚಂದ್ರಪ್ರಭ ಅವರು ಎಲಿಮಿನೇಟ್ ಆಗುವ ಸಾಧ್ಯತೆಯೂ ಇತ್ತು.