ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ ನೀಡಲಾಗಿದೆ. ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದ ಭಾಗವಾಗಿ ಬಂದ್‌ಕೆ ಕರೆ ನೀಡಲಾಗಿದೆ. 

ಕಲಬುರಗಿ (ನ.09) ಕರ್ನಾಟಕದಲ್ಲಿ ರೈತ ಹೋರಾಟ ತೀವ್ರಗೊಳ್ಳುತ್ತಿದೆ. ರಾಜ್ಯದ ಹಲವು ಭಾಗದಲ್ಲಿ ರೈತ ಪ್ರತಿಭಟನೆಗಳು ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಭಾರಿ ತೀವ್ರ ಸ್ವರೂಪ ಪಡೆದ ಈ ಹೋರಾಟ ಕೊನೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಅಂತ್ಯಹಾಡಿತ್ತು. ಆದರೆ ಕಲಬುರಗಿ, ಬಾಗಲಕೋಟೆ ಸೇರಿದಂತೆ ಕೆಲ ಭಾಗದ ರೈತರು 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಿದ್ದಾರೆ. ಇದೀಗ ನಾಳೆ (ನ.10) ಅಫಜಲಪುರ ಬಂದ್‌ಗೆ ಹೋರಾಟಗಾರರು ಕರೆ ನೀಡಿದ್ದಾರೆ.

ನಾಳೆ ಸ್ವಯಂ ಘೋಷಿತ ಅಫಜಲಪುರ ಬಂದ್ ಗೆ ಕರೆ

ನಾಳೆ ಅಫಜಲಪುರದಲ್ಲಿ ಸ್ವಯಂ ಘೋಷಿತದ ಬಂದ್‌ಗೆ ಕರೆ ನೀಡಲಾಗಿದೆ. ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಅಫಜಲಪುರ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ. ಹೀಗಾಗಿ ಬಂದ್ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಮುಧೋಳದಲಲ್ಲಿ ಎಲ್ಲಾ ಸರ್ಕಾರಿ ಕಚೇರಿ ಬಂದ್

ಮುಧೋಳದಲ್ಲಿ ರೈತರು ಕಬ್ಬಿನ ಬೆಲೆ ಹೋರಾಟ ತೀವ್ರಗೊಳಿಸಿದ್ದಾರೆ. ಇಂದು ಸಿಚವ ಆರ್‌ಬಿ ತಿಮ್ಮಾಪುರ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ. ಇದರ ಬೆನ್ನಲ್ಲೋ ರೈತರು ಮುಧೋಳದಲ್ಲಿ ನಾಳೆ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಡಂಗೂರ ಸಾರಿ ಪ್ರತಿಭಟನೆಗೆ ಬರುವಂತೆ ಮನವಿ ಮಾಡಿದ್ದಾರೆ. ನಾಳೆ(ನ.10) ಬೆಳಿಗ್ಗೆ 10 ಗಂಟೆಗೆ ಮುಧೋಳ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈರು ಸೇರಲಿದ್ದಾರೆ. ಮುಧೋಳ ತಾಲೂಕಿನ ಎಲ್ಲ ಸರ್ಕಾರಿ ಕಚೇರಿ ಬಂದ್ ಮಾಡಿಸಲು ನಿರ್ಧಾರ ಮಾಡಲಾಗಿದೆ.

ವರ್ತಕರು ಸ್ವಇಚ್ಚೆಯಿಂದ ಬೆಂಬಲ ಸೂಚಿಸಲು ಮನವಿ

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ರ್ಯಾಲಿ ಮೂಲಕ ತಹಶಿಲ್ದಾರರ್ ಕಚೇರಿಗೆ ತೆರಳಲು ರೈತರು ಮುಂದಾಗಿದ್ದಾರೆ. ಎಲ್ಲಾ ಸರ್ಕಾರಿ ಕಚೇರ ಬಂದ್ ಮಾಡುತ್ತೇವೆ. ವರ್ತಕರು ಸ್ವ ಇಚ್ಚೆಯಿಂದ ಬೆಂಬಲ ಸೂಚಿಸಬೇಕು. ಅಂಗಡಿ ಬಂದ್ ಮಾಡಬೇಡಿ, ಬೆಂಬಲ ಸೂಚಿಸಿ ಎಂದು ರೈತ ಹೋರಾಟಗಾರರು ಹೇಳಿದ್ದಾರೆ.

ರೈತಸಂಘದ ಜಿಲ್ಲಾಧ್ಯಕ್ಷರ ಎಚ್ಚರಿಕೆ

ಕಬ್ಬು ಕಡಿದು ಕಾರ್ಖಾನೆ ಆರಂಭ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದಲ್ಲಿ, ಜಿಲ್ಲಾಡಳಿತ, ಕಾರ್ಖಾನೆ ‌ಮಾಲೀಕರೇ ಹೊಣೆ ಹೊರಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಎಚ್ಚರಿಕೆ ನೀಡಿದ್ದಾರೆ.