ಹೆರಿಗೆಯ ನಂತರ ದೈಹಿಕ ಸಂಪರ್ಕ ಮತ್ತು ಮುಟ್ಟಿನ ಬಗ್ಗೆ ಮಹಿಳೆಯರಿಗಿರುವ ಗೊಂದಲಗಳಿಗೆ ಸ್ತ್ರೀರೋಗ ತಜ್ಞರು ಉತ್ತರಿಸಿದ್ದಾರೆ. ಎದೆಹಾಲುಣಿಸುವಾಗ ಮುಟ್ಟು ವಿಳಂಬವಾದರೂ, ಅಂಡೋತ್ಪತ್ತಿ ಸಂಭವಿಸಿ ಗರ್ಭಧರಿಸುವ ಸಾಧ್ಯತೆ ಇರುವುದರಿಂದ, ಸುರಕ್ಷತಾ ವಿಧಾನಗಳನ್ನು ಬಳಸುವುದು ಅತ್ಯಗತ್ಯ ಎಂದು  ಎಚ್ಚರಿಸಿದ್ದಾರೆ.

ಮಹಿಳೆಯರಿಗೆ ದಾಂಪತ್ಯ ಜೀವನದ ಕುರಿತು ಹಾಗೂ ಲೈಂ*ಗಿಕತೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಕಾಡುತ್ತಿದ್ದರೂ, ಅದನ್ನು ಓಪನ್​ ಆಗಿ ಹೇಳಿಕೊಳ್ಳುವ ಸ್ಥಿತಿ ಇಂದಿಗೂ ಕೂಡ ಹಲವೆಡೆಗಳಲ್ಲಿ ಕಷ್ಟವೇ ಆಗಿದೆ. ಮನೆಗಳಲ್ಲಿ ಕೂಡ ಮುಕ್ತವಾಗಿ ಈ ಬಗ್ಗೆ ಮಾತನಾಡುವ ವಾತಾವರಣ ಇಂದಿಗೂ ಸೃಷ್ಟಿಯಾಗಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಿದರೆ ಎಲ್ಲಿ, ಯಾರು ಏನು ಅಂದುಕೊಂಡು ಬಿಟ್ಟಾರೆಯೋ ಎನ್ನುವ ಸಂಕಟ ಇದ್ದೇ ಇರುತ್ತದೆ. ಕೆಲವೊಮ್ಮೆ ವೈದ್ಯರ ಬಳಿಯೂ ಓಪನ್​ ಆಗಿ ಎಷ್ಟೋ ಮಹಿಳೆಯರು ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಷ್ಟಪಡುವುದು ಇದೆ. ಇದೇ ಕಾರಣಕ್ಕೆ ವಿವಾಹದ ಬಳಿಕದ ಹಲವು ತೊಂದರೆಗಳಿಗೆ ಅದರಲ್ಲಿಯೂ ಲೈಂ*ಗಿಕತೆಗೆ ಸಂಬಂಧಿಸಿದಂತೆ ಹಲವು ರೀತಿಯ ತಪ್ಪುಗಳನ್ನು ಮಾಡುವುದು ಇದೆ. ಇದೇ ಕಾರಣಕ್ಕೆ ತೊಂದರೆಗೂ ಸಿಲುಕುವುದು ಇದೆ.

ದೈಹಿಕ ಸಂಪರ್ಕದ ಪ್ರಶ್ನೆಗಳು

ಅದರಲ್ಲಿ ಒಂದು ಮಗು ಹುಟ್ಟಿದ ಮೇಲೆ ಪತಿ-ಪತ್ನಿ ದೈಹಿಕವಾಗಿ ಸೇರುವ ಬಗ್ಗೆ ಹಲವು ಪ್ರಶ್ನೆಗಳು, ಗೊಂದಲುಗಳು ಇದ್ದೇ ಇವೆ. ಮಗು ಹುಟ್ಟಿದ ಎಷ್ಟು ತಿಂಗಳ ಬಳಿಕ ಸೇರಬೇಕು? ಪಿರಿಯಡ್ಸ್​ ಯಾವಾಗ ಆಗುತ್ತದೆ, ಆಗಿದ್ದರೆ ಏನು ಮಾಡಬೇಕು? ಪಿರಿಯಡ್ಸ್​ ಆಗದಿದ್ದರೆ ಪತಿಯ ಜೊತೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ದೈಹಿಕ ಸಂಬಂಧ ಮಾಡಬಹುದಾ? ಈ ಸಂದರ್ಭದಲ್ಲಿ ಮತ್ತೆ ಗರ್ಭಿಣಿಯಾಗುವ ಸಾಧ್ಯತೆ ಇದೆ ಎಂದೆಲ್ಲಾ ಪ್ರಶ್ನೆಗಳು ಹಲವು ಮಹಿಳೆಯರನ್ನು ಕಾಡುತ್ತದೆ.

ಮತ್ತೆ ಮುಟ್ಟು ಯಾವಾಗ?

ಅದರಲ್ಲಿಯೂ ಮುಖ್ಯವಾಗಿ ಹೆರಿಗೆಯ ಬಳಿಕ ಮತ್ತೆ ಮುಟ್ಟು ಆಗುವುದು ಯಾವಾಗ? ಒಂದು ವೇಳೆ ಮುಟ್ಟು ಆಗಿದ್ದರೆ ಪತಿಯ ಜೊತೆ ಸೇರಿದಾಗ ಗರ್ಭಧಾರಣೆ ಆಗುವುದಿಲ್ಲವೆ ಎನ್ನುವುದು. ಈ ಬಗ್ಗೆ ಇದೀಗ ಸ್ತ್ರೀರೋಗ ವೈದ್ಯೆಯಾಗಿರುವ ಡಾ.ದೀಪ್ತಿಯವರು ಉತ್ತರಿಸಿದ್ದಾರೆ. ಮಗು ಹುಟ್ಟಿದ ಮೇಲೆ ಅವರವರ ದೈಹಿಕ ಪ್ರಕೃತಿಗೆ ಅನುಗುಣವಾಗಿ ಪಿರಿಯಡ್ಸ್​ ಆಗುತ್ತದೆ. ಸಾಮಾನ್ಯವಾಗಿ ಹೆರಿಗೆಯ ಬಳಿಕ ಮೂರು ತಿಂಗಳು ಆದ ಮೇಲೆ ಪಿರಿಯಡ್ಸ್​ ಶುರುವಾಗುತ್ತದೆ. ದಿನಕ್ಕೆ 1-12ಸಲ ಮಗುವಿಗೆ ಎದೆಹಾಲು ಉಣಿಸುತ್ತಿದ್ದರೆ, ಪಿರಿಯಡ್ಸ್​ ಆಗುವುದು ಸ್ವಲ್ಪ ವಿಳಂಬ ಆಗಬಹುದು. Prolactin level ಹೆಚ್ಚುವ ಹಿನ್ನೆಲೆಯಲ್ಲಿ 7-8 ತಿಂಗಳು ಮುಟ್ಟು ಆಗದೇ ಇರಬಹುದು ಎಂದಿದ್ದಾರೆ ವೈದ್ಯೆ.

ಮುಖ್ಯವಾದ ಮಾಹಿತಿ

ಅದಕ್ಕಿಂತಲೂ ಮುಖ್ಯವಾದ ವಿಷಯವೊಂದನ್ನು ವೈದ್ಯೆ ಹೇಳಿದ್ದಾರೆ. ಅದೇನೆಂದರೆ, ನಾನು ಎದೆಹಾಲು ಕುಡಿಸ್ತಾ ಇದ್ದೇನೆ, ಪಿರಿಯಡ್ಸ್​ ಕೂಡ ಆಗಿಲ್ಲ ಎಂದು ಯಾವುದೇ ಎಚ್ಚರಿಕೆ ತೆಗೆದುಕೊಳ್ಳದೇ (ಗರ್ಭಧಾರಣೆ ವಿಷಯದಲ್ಲಿ) ಪತಿಯ ಜೊತೆ ಸಂಪರ್ಕ ಮಾಡುವುದು ಇದೆ. ಆದರೆ ನೆನಪಿಡಿ, ಒಮ್ಮೊಮ್ಮೆ ಅಂಡೋತ್ಪತ್ತಿ ಆಗಿಬಿಟ್ಟು ಗರ್ಭ ಧರಿಸುವ ಸಾಧ್ಯತೆ ಇದೆ. ಆದ್ದರಿಂದ ಪತಿಯ ಜೊತೆ ಸೇರುವುದೇ ಆಗಿದ್ದರೆ, ಕಾಂಡೋಮ್ಸ್​ ಇಲ್ಲವೇ ಬೇರೆ ವಿಧಾನಗಳನ್ನು ಅನುಸರಿಸುವುದು ಅಗತ್ಯ ಎಂದಿದ್ದಾರೆ ಅವರು. ಒಂದು ವೇಳೆ ಎಚ್ಚರಿಕೆ ತೆಗೆದುಕೊಳ್ಳದೇ ಸೇರಿಬಿಟ್ಟಿದ್ದ ಪಕ್ಷದಲ್ಲಿ, ತಿಂಗಳಿಗೆ ಒಮ್ಮೆಯಾದರೂ ಗರ್ಭ ಧರಿಸಿರುವ ಬಗ್ಗೆ ಮನೆಯಲ್ಲಿಯೇ ಮೂತ್ರ ಪರೀಕ್ಷೆ ಮಾಡಿಕೊಳ್ಳಬೇಕು ಎನ್ನುವುದು ಅವರ ಮಾತು.

ವೈದ್ಯೆಯ ಮಾತು ಕೇಳಲು ಇದರ ಮೇಲೆ ಕ್ಲಿಕ್​ ಮಾಡಿ