LIVE NOW
Karnataka News Live: ಬಾಳೆ ಕಾವಲಿಗೆ ರಾಧಿಕಾ, ರಚಿತಾ, ರವಿಚಂದ್ರನ್! ನಂಜನಗೂಡು ರೈತರ ಐಡಿಯಾ

ಸಾರಾಂಶ
ಮೈಸೂರು: ಸಾಮಾನ್ಯವಾಗಿ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಯಾರ ದೃಷ್ಟಿಯೂ ತಾಕಬಾರದು ಎಂದು ರೈತರು ದೃಷ್ಟಿ ಬೊಂಬೆಗಳನ್ನು ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ, ತಾನು ಬೆಳೆದ ಬಾಳೆ ಬೆಳೆಗೆ ದೃಷ್ಟಿ ತಾಕದಿರಲಿ ಎಂದು ಚಿತ್ರ ನಟಿಯರ ಫೋಟೋಗಳನ್ನೇ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ರೈತನೊಬ್ಬ ತನ್ನ ಜಮೀನಿನ ಮುಂಭಾಗದ ತಂತಿ ಬೇಲಿಗೆ ನಟ ರವಿಚಂದ್ರನ್, ನಟಿಯರಾದ ರಾಧಿಕಾ ಕುಮಾರಸ್ವಾಮಿ, ರಚಿತಾ ರಾಮ್, ಸ್ನೇಹ, ಪ್ರಿಯಾಂಕಾ ಉಪೇಂದ್ರ ಅವರ ಫ್ಲೆಕ್ಸ್ ಅಳವಡಿಸಿದ್ದಾರೆ. ಜನರ ದೃಷ್ಟಿಯು ಬೆಳೆಗಳ ಮೇಲೆ ಬೀಳದೆ ನಟ-ನಟಿಯರ ಮೇಲೆ ಬೀಳಲಿದೆ ಎಂಬುದು ರೈತರ ಉಪಾಯ.