ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಕಾಯ್ದಿರಿಸಿದ ಬೋಗಿ ವ್ಯವಸ್ಥೆ ಇದೆ. ಆದರೆ ಮಹಿಳಾ ಬೋಗಿ ಖಾಲಿ ಇದ್ದರೂ ತಂಬಿ ತುಳುಕುತ್ತಿರುವ ಜನರಲ್ ಬೋಗಿಗೆ ಹತ್ತುವುದೇಕೆ ಎಂದು ಪ್ರಯಾಣಿಕ ಪ್ರಶ್ನಿಸಿದ್ದಾನೆ. ಇದು ಭಾರಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ನ.09) ನಮ್ಮ ಮೆಟ್ರೋ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಪ್ರಮುಖ ಆಧಾರ. ಬೆಂಗಳೂರಿನ ಕಿಕ್ಕಿರಿದ ಟ್ರಾಫಿಕ್ ನಡುವೆ ಪ್ರತಿ ದಿನ ಪ್ರಯಾಣಿಕರು ನಮ್ಮ ಮೆಟ್ರೋ ಮೂಲಕ ಸಮಯಕ್ಕೆ ಸರಿಯಾಗಿ ತಲುಪುತ್ತಿದ್ದಾರೆ. ಇದೀಗ ನಮ್ಮ ಮೆಟ್ರೋದ ಪ್ರಯಾಣಿಕನೊಬ್ಬ ಕೆಲ ಪ್ರಶ್ನೆಗಳನ್ನು ಎತ್ತಿದ್ದಾನೆ. ಪ್ರಮುಖವಾಗಿ ಮಹಿಳೆಯರಿಗೆ ಕಾಯ್ದಿರಿಸಿದ ಬೋಗಿ ಇದೆ. ಈ ಬೋಗಿ ಖಾಲಿ ಇದ್ದರೂ ಮಹಿಳೆಯರು ಜನರಲ್ ಬೋಗಿ ಹತ್ತು ಇರುವವರಿಗೂ ಜಾಗ ಇಲ್ಲದಂತೆ ಮಾಡುವುದೇಕೆ ಎಂದು ಪ್ರಶ್ನಿಸಿದ್ದಾನೆ. ಈತನ ಪ್ರಶ್ನೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಪ್ರಯಾಣಿಕನ ಪ್ರಶ್ನೆ ಏನು
ಬೆಂಗಳೂರಿನ ಮೆಟ್ರೋ ಪ್ರಯಾಣಿಕ ರೆಡ್ಡಿಟ್ನಲ್ಲಿ ಈ ಕುರಿತು ಬರೆದುಕೊಂಡಿದ್ದಾನೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಆರಂಭದಲ್ಲೇ ಮಹಿಳೆಯರಿಗೆ ಮೀಸಲು ಬೋಗಿ ನೀಡಲಾಗಿದೆ. ಈ ಬೋಗಿ ಬಹುತೇಕ ಬಾರಿ ಖಾಲಿ ಇರುತ್ತದೆ. ಸೀಟುಗಳು ಇಲ್ಲದಿದ್ದರೂ ಕಿಕ್ಕಿರಿದು ತುಂಬಿರುವುದಿಲ್ಲ. ಮಹಿಳಾ ಬೋಗಿಗಳು ಖಾಲಿ ಇದ್ದರೂ ಮಹಿಳೆಯರು ಜನರಲ್ ಬೋಗಿ ಹತುತ್ತಾರೆ. ಇದು ಯಾಕೆ ಎಂದು ಮಟ್ರೋ ಪ್ರಯಾಣಿಕ ರೆಡ್ಡಿಟ್ ಮೂಲಕ ಪ್ರಶ್ನಿಸಿದ್ದಾನೆ.
ಬೆಂಗಳೂರಿನ ಪೀಕ್ ಸಮಯದಲ್ಲಿ ಜನರಲ್ ಬೋಗಿಗಳು ತುಂಬಿ ತುಳುಕುತ್ತದೆ. ಇಲ್ಲಿ ನಿಲ್ಲಲು ಜಾಗವಿರುವುದಿಲ್ಲ. ಆದರೆ ಮಹಿಳಾ ಬೋಗಿಗಳು ಬಹುತೇಕ ಸಮಯ ಖಾಲಿ ಇರುವುದಿಲ್ಲ. ಆದರೆ ಮಹಿಳೆಯರು ಖಾಲಿ ಇರುವ ಮಹಿಳಾ ಬೋಗಿ ಹತ್ತುವುದಿಲ್ಲ. ಬದಲಾಗಿ ನಿಲ್ಲಲು ಜಾಗವಿಲ್ಲದ ಜನರಲ್ ಬೋಗಿ ಹತ್ತುತ್ತಾರೆ. ಮಹಿಳೆಯರಿಗೆ ಕಾಯ್ದಿರಿಸಿದ ಕೋಚ್ ಬಳಸುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾನೆ.
ಮಹಿಳಾ ಸುರಕ್ಷತಾ ಪ್ರಶ್ನೆ
ಜನರಲ್ ಬೋಗಿಯಲ್ಲಿ ಪ್ರಯಾಣಿಕರು ತುಂಬಿರುತ್ತಾರೆ. ನಿಲ್ಲಲು ಜಾಗವಿರುವುದಿಲ್ಲ. ಇದರಿಂದ ಮಹಿಳೆಯರಿಗೂ ಕಿರಿಕಿರಿಯಾಗುತ್ತದೆ. ಭಾರಿ ದಟ್ಟಣೆಯಿಂದ ನೂಕುನುಗ್ಗಲು ಸಂಭವಿಸುತ್ತದೆ. ಈ ವೇಳೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ, ದೂರು ನೀಡುತ್ತಾರೆ. ಕಿಕ್ಕಿರಿದು ತುಂಬಿದ ಜನರಲ್ ಕೋಚ್ಗಳಲ್ಲಿ ಮಹಿಳೆಯರ ಸುರಕ್ಷತೆಗಳ ಪ್ರಶ್ನೆ ಎದುರಾಗುತದೆ. ಇದನ್ನು ತಪ್ಪಿಸಲು ಮಹಿಳೆಯರು ಕಾಯ್ದಿರಿಸಿದ ಬೋಗಿಗಳನ್ನು ಬಳಸಿಕೊಂಡರೆ ಉತ್ತಮ. ಮಹಿಳೆಯರಿಗೂ ಅನುಕೂಲ, ಜನರಲ್ ಬೋಗಿ ಪ್ರಯಾಣಿಕರಿಗೂ ಅನುಕೂಲ ಎಂದು ಪ್ರಯಾಣಿಕ ಹೇಳಿದ್ದಾನೆ. ಮಹಿಳಾ ಬೋಗಿ ರಶ್ ಇದ್ದಾಗ ಜನರಲ್ ಬೋಗಿ ಹತ್ತುವುದರಲ್ಲಿ ಅರ್ಥವಿದೆ, ಆದರೆ ಹಲವು ಸಂದರ್ಭದಲ್ಲಿ ಮಹಿಳಾ ಬೋಗಿ ತುಂಬಾ ರಶ್ ಇರುವುದಿಲ್ಲ ಎಂದು ಪ್ರಯಾಣಿಕ ಹೇಳಿದ್ದಾನೆ.
ಪ್ರಯಾಣಿಕನ ಪ್ರಶ್ನೆಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕುಟುಂಬ ಜೊತೆ ಪ್ರಯಾಣಿಸುವಾಗ ಮಹಿಳೆ ಪ್ರತ್ಯೇಕವಾಗಿ ಮಹಿಳಾ ಕೋಚ್ನಲ್ಲಿ ಪ್ರಯಾಣಿಸುವುದು ಹೇಗೆ? ಇನ್ನು ಇಳಿಯುವ ಹಾಗು ಹತ್ತುವ ಮೆಟ್ಟಿಲು, ಎಸ್ಕಲೇಟರ್ ಮಧ್ಯ ಭಾಗದಲ್ಲಿರುತ್ತದೆ. ಹೀಗಾಗಿ ಸುಲಭವಾಗಿ ತೆರಳಲು ಸಾಧ್ಯವಾಗಲು ಮಧ್ಯದ ಬೋಗಿಗಳು ಹತ್ತುತ್ತಾರೆ ಎಂದು ಮಹಿಳೆಯರ ಪರ ಹಲವರು ಕಮೆಂಟ್ಸ್ ಮಾಡಿದ್ದಾರೆ.














