ಏಷ್ಯಾದಲ್ಲೇ ಅತಿ ಉದ್ದದ ರೈಲು ಇದೇನಾ? ಬರೋಬ್ಬರಿ 4.5 ಕಿ.ಮೀ ಉದ್ದ, 7 ಇಂಜಿನ್ಗಳ ವಿಶೇಷತೆ!
ರೈಲು ಸಾಮಾನ್ಯವಾಗಿ ಎಷ್ಟು ಉದ್ದ ಇರುತ್ತೆ? ಒಂದು ಅಥವಾ ಒಂದೂವರೆ ಕಿಲೋಮೀಟರ್. ಆದ್ರೆ ಬರೋಬ್ಬರಿ 4.5 ಕಿಲೋಮೀಟರ್ ಉದ್ದದ ರೈಲನ್ನು ನೀವೆಂದಾದರೂ ನೋಡಿದ್ದೀರಾ? ಭಾರತೀಯ ರೈಲ್ವೆ ದಾಖಲೆ ಬರೆದ ಈ ವಿಶೇಷ ರೈಲಿನ ಬಗ್ಗೆ ಈಗ ತಿಳಿಯೋಣ.
15

Image Credit : gemini ai
ಏಷ್ಯಾದ ಅತಿ ಉದ್ದದ ರೈಲು
ಸಾಮಾನ್ಯವಾಗಿ ಒಂದು ರೈಲು ಹೋಗ್ತಾ ಇದ್ರೆ ಅದರ ಕೊನೆಯ ಬೋಗಿ ಕಾಣೋಕೆ ಸ್ವಲ್ಪ ಸಮಯ ಹಿಡಿಯುತ್ತೆ. ಅದೇ ಬರೋಬ್ಬರಿ 4.5 ಕಿಲೋಮೀಟರ್ ಉದ್ದದ ರೈಲು ಹೋದ್ರೆ ಹೇಗಿರುತ್ತೆ? ಒಂದು, ಎರಡಲ್ಲ.. ಬರೋಬ್ಬರಿ 354 ಬೋಗಿಗಳು, ಅವನ್ನ ಎಳೆಯೋಕೆ 7 ಇಂಜಿನ್ಗಳು. ಭಾರತೀಯ ರೈಲ್ವೆ ಹೊಸ ದಾಖಲೆ ಬರೆದ ಈ ವಿಶೇಷ ರೈಲಿನ ಹೆಸರು 'ರುದ್ರಾಸ್ತ್ರ'. ಅಷ್ಟಕ್ಕೂ ಈ ರೈಲು ಎಲ್ಲಿ ಓಡಿತು? ಇದರ ವಿಶೇಷತೆಗಳೇನು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : gemini ai
ಏಷ್ಯಾದ ಅತಿ ಉದ್ದದ ಗೂಡ್ಸ್ ರೈಲುಗಳಲ್ಲಿ ಒಂದು
ಭಾರತೀಯ ರೈಲ್ವೆ ಇತಿಹಾಸದಲ್ಲಿ 2025ರ ಆಗಸ್ಟ್ 7 ಒಂದು ವಿಶೇಷ ದಿನ. ಅಂದು ರೈಲ್ವೆ ಬರೋಬ್ಬರಿ 4.5 ಕಿ.ಮೀ ಉದ್ದದ ಗೂಡ್ಸ್ ರೈಲನ್ನು ಯಶಸ್ವಿಯಾಗಿ ಓಡಿಸಿದೆ. 'ರುದ್ರಾಸ್ತ್ರ' ಹೆಸರಿನ ಈ ರೈಲನ್ನು ಪೂರ್ವ ಮಧ್ಯ ರೈಲ್ವೆ (East Central Railway) ವ್ಯಾಪ್ತಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿಭಾಗದ ಅಧಿಕಾರಿಗಳು ಸಿದ್ಧಪಡಿಸಿದ್ದರು. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಗಂಜ್ ಖ್ವಾಜಾ ರೈಲು ನಿಲ್ದಾಣದಿಂದ ಜಾರ್ಖಂಡ್ನ ಗರ್ವಾ ರೋಡ್ವರೆಗೆ ಈ ರೈಲು ಸಂಚರಿಸಿದೆ. ಒಟ್ಟು 209 ಕಿಲೋಮೀಟರ್ ದೂರವನ್ನು 5 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿದೆ. ಗಂಟೆಗೆ ಸರಾಸರಿ 40.5 ಕಿಲೋಮೀಟರ್ ವೇಗದಲ್ಲಿ ಇದು ಸಾಗಿದೆ. ಭಾರತೀಯ ರೈಲ್ವೆ ನಡೆಸಿದ ಈ ಪ್ರಯೋಗ ಏಷ್ಯಾದ ಅತಿ ಉದ್ದದ ಗೂಡ್ಸ್ ರೈಲುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
35
Image Credit : gemini ai
354 ಬೋಗಿಗಳು.. 7 ಇಂಜಿನ್ಗಳು!
ರುದ್ರಾಸ್ತ್ರ ರೈಲಿನ ವಿಶೇಷತೆ ಅದರ ಉದ್ದ ಮಾತ್ರವಲ್ಲ. ಅದರಲ್ಲಿರುವ ಬೋಗಿಗಳು ಮತ್ತು ಇಂಜಿನ್ಗಳು ಕೂಡ. ಸಾಮಾನ್ಯವಾಗಿ ಒಂದು ಗೂಡ್ಸ್ ರೈಲಿನಲ್ಲಿ ಇರುವ ಬೋಗಿಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಬೋಗಿಗಳು ಇದರಲ್ಲಿವೆ. 6 ಸರಕು ರೈಲುಗಳನ್ನು ಒಟ್ಟಿಗೆ ಸೇರಿಸಿ ಒಂದೇ ರೈಲಾಗಿ ಮಾಡಿದ್ದಾರೆ. ಒಟ್ಟು 354 ಬೋಗಿಗಳನ್ನು ಒಂದಕ್ಕೊಂದು ಜೋಡಿಸಿ ಈ ರೈಲನ್ನು ಸಿದ್ಧಪಡಿಸಿದ್ದಾರೆ. ಇವುಗಳ ಒಟ್ಟು ಉದ್ದ ಸುಮಾರು 4.5 ಕಿಲೋಮೀಟರ್. ಪ್ರತಿಯೊಂದು ಬೋಗಿ ಸುಮಾರು 72 ಟನ್ ಸರಕು ಹೊರುವ ಸಾಮರ್ಥ್ಯ ಹೊಂದಿದೆ. ಇಷ್ಟು ದೊಡ್ಡ ರೈಲನ್ನು ಒಂದೇ ಇಂಜಿನ್ನಿಂದ ಎಳೆಯೋದು ಅಸಾಧ್ಯ. ಅದಕ್ಕೇ ರೈಲ್ವೆ ಅಧಿಕಾರಿಗಳು ಬರೋಬ್ಬರಿ 7 ಇಂಜಿನ್ಗಳನ್ನು ಬಳಸಿದ್ದಾರೆ. ಮುಂಭಾಗದಲ್ಲಿ ಎರಡು ಇಂಜಿನ್ಗಳನ್ನು ಅಳವಡಿಸಿದ್ದು, ಪ್ರತಿ 59 ಬೋಗಿಗಳ ನಂತರ ಮತ್ತೊಂದು ಇಂಜಿನ್ ಸೇರಿಸಿದ್ದಾರೆ. ಹೀಗೆ ರೈಲಿನ ಉದ್ದಕ್ಕೂ ಇಂಜಿನ್ಗಳನ್ನು ಅಳವಡಿಸಿರುವುದರಿಂದ ಎಲ್ಲಾ ಬೋಗಿಗಳಿಗೂ ಬೇಕಾದ ಶಕ್ತಿ ಸಿಗುತ್ತದೆ.
45
Image Credit : gemini ai
6 ಗೂಡ್ಸ್ ರೈಲುಗಳನ್ನು ಸೇರಿಸಿ ಮಾಡಿದ್ದಾರೆ
ಈ ಪ್ರಯೋಗದಿಂದ ಸರಕು ಸಾಗಣೆಯಲ್ಲಿ ಸಮಯ ಉಳಿಸುವುದರ ಜೊತೆಗೆ ರೈಲ್ವೆ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳು ಯೋಚಿಸಿದ್ದಾರೆ. 6 ರೈಲುಗಳನ್ನು ಬೇರೆ ಬೇರೆಯಾಗಿ ಓಡಿಸಬೇಕಾದರೆ 6 ರೈಲ್ವೆ ಹಳಿಗಳು, ಸಿಬ್ಬಂದಿ ಮತ್ತು ಇಂಜಿನ್ಗಳು ಬೇಕಾಗುತ್ತವೆ. ಅದೇ ಅವುಗಳನ್ನು ಒಂದೇ ರೈಲಾಗಿ ಓಡಿಸುವುದರಿಂದ ಆ ಅಗತ್ಯ ಕಡಿಮೆಯಾಗುತ್ತದೆ. ಬೇರೆ ರೈಲುಗಳ ಓಡಾಟಕ್ಕೂ ಮಾರ್ಗದಲ್ಲಿ ಹೆಚ್ಚಿನ ಸಾಮರ್ಥ್ಯ ಲಭ್ಯವಾಗುತ್ತದೆ.
55
Image Credit : gemini ai
ಸರಕು ಸಾಗಣೆಯಲ್ಲಿ ಹೊಸ ಪ್ರಯೋಗ
ಭಾರತದಲ್ಲಿ ಕಲ್ಲಿದ್ದಲು, ಕಬ್ಬಿಣ, ಸಿಮೆಂಟ್ನಂತಹ ಭಾರಿ ಸರಕುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಲ್ಲೂ ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ವೇಗವಾಗಿ ಸಾಗಿಸುವುದು ಬಹಳ ಮುಖ್ಯ. ಇಂತಹ ಸಮಯದಲ್ಲಿ ರುದ್ರಾಸ್ತ್ರದಂತಹ ಭಾರಿ ಗೂಡ್ಸ್ ರೈಲುಗಳು ರೈಲ್ವೆಗೆ ತುಂಬಾ ಉಪಯೋಗವಾಗುತ್ತವೆ. ಬೇರೆ ಬೇರೆ ರೈಲುಗಳಿಗೆ ಬೇಕಾಗುವ ಸಮಯ, ಸಿಬ್ಬಂದಿ, ಇತರ ಸಂಪನ್ಮೂಲಗಳನ್ನು ಕಡಿಮೆ ಮಾಡುವುದರ ಜೊತೆಗೆ ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲು ಇಂತಹ ಪ್ರಯೋಗಗಳು ಸಹಾಯ ಮಾಡುತ್ತವೆ. ಅದಕ್ಕೇ ರುದ್ರಾಸ್ತ್ರ ಪ್ರಯೋಗವನ್ನು ಭಾರತೀಯ ರೈಲ್ವೆಯಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಒಟ್ಟಿನಲ್ಲಿ 4.5 ಕಿಲೋಮೀಟರ್ ಉದ್ದ, 354 ಬೋಗಿಗಳು, 7 ಇಂಜಿನ್ಗಳೊಂದಿಗೆ ಸಂಚರಿಸಿದ ರುದ್ರಾಸ್ತ್ರ.. ಭಾರತೀಯ ರೈಲ್ವೆಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ವಿಶೇಷ ಗೂಡ್ಸ್ ರೈಲಾಗಿ ನಿಂತಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.













