11:34 PM (IST) Nov 08

Karnataka News Live 8th November:ಛೇ! ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ - Anchor Anushree ಬಗ್ಗೆ ಅಭಿಮಾನಿಗಳ ಭಾರಿ ಬೇಸರ, ಕೋಪ - ಆಗಿದ್ದೇನು?

'ಮಹಾನಟಿ ಸೀಸನ್-2' ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಐವರು ಸ್ಪರ್ಧಿಗಳ ನಡುವೆ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಫಿನಾಲೆಯ ಪ್ರೋಮೋದಲ್ಲಿ ಆ್ಯಂಕರ್ ಅನುಶ್ರೀ ಅವರು ಮಂಗಳಸೂತ್ರ ಧರಿಸದೇ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.
Read Full Story
10:42 PM (IST) Nov 08

Karnataka News Live 8th November:ಸುನಿಲ್​ ಶೆಟ್ಟಿ ಅಂದಕ್ಕೂ, ಕರ್ನಾಟಕಕ್ಕೂ ಇದೆಯಂತೆ ನಂಟು! ಕನ್ನಡದಲ್ಲಿಯೇ ಮಾತನಾಡಿದ ನಟ ಹೇಳಿದ್ದೇನು?

ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಜೈ' ಚಿತ್ರದ ಪ್ರಚಾರಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ತುಳುನಾಡಿನ ಮೂಲವನ್ನು ಸ್ಮರಿಸಿ, ಕನ್ನಡ ಸಿನಿಮಾಗಳ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ತಮ್ಮ ಫಿಟ್ನೆಸ್ ರಹಸ್ಯ ಹಂಚಿಕೊಂಡರು.

Read Full Story
10:36 PM (IST) Nov 08

Karnataka News Live 8th November:ತಪ್ಪು ಸಾಬೀತುಪಡಿಸಿ, Bigg Boss Kannada 12 ಶೋ ಬಿಡ್ತೀನಿ; ಕಿಚ್ಚ ಸುದೀಪ್‌ ಮುಂದೆ ಅಶ್ವಿನಿ ಗೌಡ ಚಾಲೆಂಜ್

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ನಡುವಿನ ಮನಸ್ತಾಪವನ್ನು ಕಿಚ್ಚ ಸುದೀಪ್‌ ಅವರು ಅಡ್ರೆಸ್‌ ಮಾಡಿ ಮಾತನಾಡಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಸತ್ಯ ಏನು ಎಂದು ರಿವೀಲ್‌ ಆಗಿದೆ.

Read Full Story
10:18 PM (IST) Nov 08

Karnataka News Live 8th November:ಅವಾರ್ಡ್​ ಬಂದಿದ್ದನ್ನು ಮೂಕನಾಗಿ ಅಮ್ಮನಿಗೆ ಅರ್ಥ ಮಾಡಿಸಿದ Amruthadhaare ಆನಂದ್​ - ಎಲ್ಲರ ಕಣ್ಣಲ್ಲೂ ನೀರು!

'ಅಮೃತಧಾರೆ' ಖ್ಯಾತಿಯ ನಟ ಆನಂದ್ ಕುಮಾರ್, ತಮಿಳಿನ 'ಗಟ್ಟಿಮೇಳಂ' ಸೀರಿಯಲ್‌ನಲ್ಲಿನ ತಮ್ಮ ಮೂಕಾಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಅವರು ತಮ್ಮ ತಾಯಿಗೆ ಸನ್ನೆಗಳ ಮೂಲಕವೇ ಈ ಸಂತಸದ ಸುದ್ದಿ ತಿಳಿಸಿ ಭಾವುಕ ಕ್ಷಣವನ್ನು ಸೃಷ್ಟಿಸಿದರು. 

Read Full Story
09:48 PM (IST) Nov 08

Karnataka News Live 8th November:ಎಥೆನಾಲ್‌ ಬಗ್ಗೆ ಪ್ರಲ್ಹಾದ್ ಜೋಶಿ ಹೇಳಿಕೆ ಸುಳ್ಳು - ಸಿಎಂ ಸಿದ್ದರಾಮಯ್ಯ ತಿರುಗೇಟು

ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ನಿಗದಿ ಮಾಡಿರುವುದು 47 ಕೋಟಿ ಲೀಟರ್‌ ಎಥೆನಾಲ್‌ ಅಲ್ಲ, 116.30 ಕೋಟಿ ಲೀಟರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಲ್ಹಾದ್ ಜೋಶಿಗೆ ತಿರುಗೇಟು ನೀಡಿದ್ದಾರೆ.

Read Full Story
09:31 PM (IST) Nov 08

Karnataka News Live 8th November:ಕಬ್ಬು ದರ ಹೆಚ್ಚಳ ನಿರ್ಧಾರ ಜಾರಿ ಬಗ್ಗೆ ಅನುಮಾನ - ಆರ್.ಅಶೋಕ್ ಪ್ರಶ್ನೆ

ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಕಡೆಗೂ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ರು. ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

Read Full Story
09:22 PM (IST) Nov 08

Karnataka News Live 8th November:ಒಂದೂವರೆ ಗಂಟೆ ಬೆಂಗಳೂರು ಆಗಸದಲ್ಲೇ ಗಿರಕಿ ಹೊಡೆದ ವಿಮಾನ, ಏರ್ ಇಂಡಿಯಾದಿಂದ ಸ್ಪಷ್ಟನೆ

ಒಂದೂವರೆ ಗಂಟೆ ಬೆಂಗಳೂರು ಆಗಸದಲ್ಲೇ ಗಿರಕಿ ಹೊಡೆದ ವಿಮಾನ, ಏರ್ ಇಂಡಿಯಾದಿಂದ ಸ್ಪಷ್ಟನೆ ನೀಡಿದೆ. ಲ್ಯಾಂಡಿಂಗ್ ಸಮಸ್ಯೆಯಾಗಿ ಜೆಪಿ ನಗರ ಆಗಸದಲ್ಲೇ ಸುತ್ತಾಡಿತ್ತಾ ವಿಮಾನ? ಏರ್ ಇಂಡಿಯಾ ಹೇಳಿದ್ದೇನು?

Read Full Story
09:22 PM (IST) Nov 08

Karnataka News Live 8th November:ನವೆಂಬರ್‌ನಲ್ಲಿ ಕ್ರಾಂತಿನೂ ಇಲ್ಲ, ವಾಂತಿನೂ ಇಲ್ಲ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ನನಗೆ ಸಿದ್ದರಾಮಯ್ಯ ಅವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ, ಯಾವ ಬದಲಾವಣೆಯೂ ಅಗುವುದಿಲ್ಲ. ಯಾವ ಕ್ರಾಂತಿನೂ ಆಗಲ್ಲ ಎಂದರು ಎಚ್.ಡಿ.ಕುಮಾರಸ್ವಾಮಿ.

Read Full Story
08:57 PM (IST) Nov 08

Karnataka News Live 8th November:ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಜನಗಣಮನದ ಅರ್ಥ ಗೊತ್ತಿದೆಯೇ? - ಸಚಿವ ಸಂತೋಷ್ ಲಾಡ್‌

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜನಗಣಮನದ ಅರ್ಥ ಗೊತ್ತಿದೆಯೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಪ್ರಶ್ನಿಸಿದ್ದಾರೆ. ರಾಷ್ಟ್ರಗೀತೆ ಬಗ್ಗೆ ಕಾಗೇರಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

Read Full Story
08:42 PM (IST) Nov 08

Karnataka News Live 8th November:1000 ಕೋಟಿಯಲ್ಲಿ ತಯಾರಾಗುತ್ತಿರುವ ರಾಜಮೌಳಿಯ SSMB29 ಚಿತ್ರದ ಶಕ್ತಿಶಾಲಿ ವಿಲನ್ ಯಾರು? ಫಸ್ಟ್ ಲುಕ್ ರಿಲೀಸ್

'ಬಾಹುಬಲಿ' ಮತ್ತು 'RRR' ನಂತಹ ಅದ್ಭುತ ಚಿತ್ರಗಳನ್ನು ನೀಡಿದ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರದ ವಿಲನ್ ಲುಕ್ ಹೊರಬಿದ್ದಿದೆ. ನಾವು ಮಾತನಾಡುತ್ತಿರುವುದು SSMB29 ಎಂಬ ತಾತ್ಕಾಲಿಕ ಶೀರ್ಷಿಕೆಯ ಚಿತ್ರದ ಬಗ್ಗೆ.

Read Full Story
08:33 PM (IST) Nov 08

Karnataka News Live 8th November:ಬೆಂಗಳೂರಲ್ಲಿ ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಕೊಲೆ, ಶವ ಬಚ್ಚಿಟ್ಟ ಮಹಿಳೆ ಅರೆಸ್ಟ್ ಆಗಿದ್ದೇ ರೋಚಕ

ಬೆಂಗಳೂರಲ್ಲಿ ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಕೊಲೆ, ಶವ ಬಚ್ಚಿಟ್ಟ ಮಹಿಳೆ ಅರೆಸ್ಟ್ ಆಗಿದ್ದೇ ರೋಚಕ, ಹತ್ಯೆ ಮಾಡಿ ಯಾರಿಗೂ ತಿಳಿಯದಂತೆ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಸಿನಿಮಾ ಕತೆ ರೀತಿಯಲ್ಲೇ ಈ ಹತ್ಯೆ ನಡೆದಿದೆ.

Read Full Story
07:52 PM (IST) Nov 08

Karnataka News Live 8th November:ಬೆಂಗಳೂರು ಯುವತಿಯ ತೊಡೆ ಸವರಿ ಅನುಚಿತ ವರ್ತನೆ ತೋರಿದ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್

ಬೆಂಗಳೂರು ಯುವತಿಯ ತೊಡೆ ಸವರಿ ಅನುಚಿತ ವರ್ತನೆ ತೋರಿದ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್, ಕಿರುಕುಳದ ವಿಡಿಯೋ ಹಂಚಿಕೊಂಡುಕಣ್ಣೀರಿಟಿದ್ದ ಯುವತಿಯಿಂದ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Read Full Story
07:48 PM (IST) Nov 08

Karnataka News Live 8th November:ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ - ಸಚಿವ ರಾಮಲಿಂಗಾರೆಡ್ಡಿ

ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ತಡವಾಗುತ್ತಿದೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ. ಈ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story
07:37 PM (IST) Nov 08

Karnataka News Live 8th November:ಕಾಫಿ, ಟೀ ಕುಡಿಲಿಲ್ಲ ಅಂದ್ರೆ ತಲೆನೋವು ಬರುತ್ತಾ.. ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!

ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಅದನ್ನು ಕುಡಿಯದಿದ್ದರೆ ತಲೆನೋವು ಬರುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಕಾರಣವೇನು.

Read Full Story
07:08 PM (IST) Nov 08

Karnataka News Live 8th November:'ಕಾಫಿ ವಿತ್ ಕರಣ್'ಗೆ ವಿರಾಟ್ ಕೊಹ್ಲಿಯನ್ನು ಯಾಕೆ ಕರೆಯಲ್ಲ ಕರಣ್ ಜೋಹರ್? ಸಾನಿಯಾ ಮಿರ್ಜಾ ಕೇಳಿದ್ದೇನು?

2019ರಲ್ಲಿ ಹಾರ್ದಿಕ್ ಪಾಂಡ್ಯ-ಕೆಎಲ್ ರಾಹುಲ್ ಜೊತೆಗಿನ 'ಕಾಫಿ ವಿತ್ ಕರಣ್' ವಿವಾದದ ನಂತರ ಕರಣ್ ಜೋಹರ್ ಯಾವುದೇ ಕ್ರಿಕೆಟಿಗರನ್ನು ಶೋಗೆ ಕರೆದಿಲ್ಲ. ಹಾರ್ದಿಕ್ ಕಾಮೆಂಟ್‌ನಿಂದಾಗಿ ಇಬ್ಬರನ್ನೂ ಅಮಾನತುಗೊಳಿಸಲಾಗಿತ್ತು.

Read Full Story
07:06 PM (IST) Nov 08

Karnataka News Live 8th November:ಸಂಸದನಿಗೇ ಸೈಬರ್ ಶಾಕ್ - ಖಾತೆಯಿಂದ 55 ಲಕ್ಷ ಮಾಯ

ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್ ಬ್ಯಾನರ್ಜಿ ಸೈಬರ್ ವಂಚನೆಗೆ ಬಲಿಯಾಗಿದ್ದು, ಬರೋಬ್ಬರಿ 55 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕರು ಅವರ ಸಕ್ರಿಯ ಖಾತೆಯಿಂದ ನಿಷ್ಕ್ರಿಯ ಖಾತೆಗೆ ಹಣ ವರ್ಗಾಯಿಸಿ, ನಂತರ ಸಂಪೂರ್ಣ ಹಣವನ್ನು ಲಪಟಾಯಿಸಿದ್ದಾರೆ. 

Read Full Story
06:56 PM (IST) Nov 08

Karnataka News Live 8th November:12ಕ್ಕೂ ಹೆಚ್ಚು ಕಂಡೀಷನ್ ಹಾಕಿ ಧರಣಿ ಅಂತ್ಯಗೊಳಿಸಿದ ಕಬ್ಬು ಬೆಳೆಗಾರರು, ಷರತ್ತುಗಳೇನು?

12ಕ್ಕೂ ಹೆಚ್ಚು ಕಂಡೀಷನ್ ಹಾಕಿ ಧರಣಿ ಅಂತ್ಯಗೊಳಿಸಿದ ಕಬ್ಬು ಬೆಳೆಗಾರರು, ಷರತ್ತುಗಳೇನು? ಕಬ್ಬಿನ ಬೆಲೆ ನಿಗದಿ ಆದೇಶ ಪ್ರತಿ ಹೋರಾಟಗಾರರಿಗೆ ನೀಡಿದ ಬಳಿಕ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಪ್ರತಿಭಟನೆ ಅಂತ್ಯಗೊಂಡಿದೆ. ಇದೀಗ ಸರ್ಕಾರಕ್ಕೆ ಕಂಡಿಷನ್ ತಲೆನೋವು ಶುರುವಾಗಿದೆ.

Read Full Story
06:31 PM (IST) Nov 08

Karnataka News Live 8th November:ಶ್ರದ್ಧಾಭಕ್ತಿಯಿಂದ ಜರುಗಿದ ರಾಜ್ಯದ ಏಕೈಕ ಗಣೇಶ ಬ್ರಹ್ಮರಥೋತ್ಸವ - ಸಾವಿರಾರು ಈಡುಗಾಯಿ ಅರ್ಪಿಸಿದ ಭಕ್ತರು!

ನಾಲ್ಕುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಗಣಪತಿ ದೇವಾಲಯ ವಾರ್ಷಿಕ ಜಾತ್ರೆ ಮತ್ತು ರಥೋತ್ಸವ ಅದ್ದೂರಿಯಿಂದ ನೆರವೇರಿತು. ಕಾರ್ತಿಕ ಮಾಸದ ಕೃಷ್ಣಪಕ್ಷದ ಚತುರ್ಥಿ ಲಗ್ನದಲ್ಲಿ ಗಣೇಶನ ಬ್ರಹ್ಮ ರಥೋತ್ಸವ ನಡೆಯಿತು.

Read Full Story
06:20 PM (IST) Nov 08

Karnataka News Live 8th November:ನಾನು ವಿಜಯ್ ದೇವರಕೊಂಡ ಜೊತೆ.. ಮದುವೆ ಸುದ್ದಿಗಳ ನಡುವೆ ರಶ್ಮಿಕಾ ಮಂದಣ್ಣ ಹೇಳಿದ ದೊಡ್ಡ ಮಾತು ವೈರಲ್!

ವಿಜಯ್ ಮತ್ತು ರಶ್ಮಿಕಾ ಮದುವೆ ಫೆಬ್ರವರಿ 26, 2026ರಂದು ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಜೋಡಿ ಅಕ್ಟೋಬರ್‌ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಈ ಮದುವೆ ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆಯಲಿದೆ.

Read Full Story
05:53 PM (IST) Nov 08

Karnataka News Live 8th November:ಹೇ ಪ್ರಭು ಸಿನಿಮಾ ವಿಮರ್ಶೆ - ಮಾಫಿಯಾ, ರಿಯಲ್ ಎಸ್ಟೇಟ್ ಒತ್ತಡ ಮತ್ತು ಹಳ್ಳಿಯ ಹೋರಾಟ

ಮೇಕಿಂಗ್‌ನಲ್ಲಿ ನಿರ್ದೇಶಕರಿಗೆ ಸೀಮಿತ ಅವಕಾಶಗಳು ಇದ್ದಿದ್ದನ್ನು ಸಿನಿಮಾನೇ ಕಾಣಿಸುತ್ತದೆ. ಅದರ ಹೊರತಾಗಿ ನಾಯಕಿ ಸಂಹಿತಾ ವಿನ್ಯಾ ಅವರು ಯೂಟ್ಯೂಬರ್‌ ಪಾತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಜಯವರ್ಧನ್ ಮೆಚ್ಚುಗೆ ಗಳಿಸುತ್ತಾರೆ.

Read Full Story