ಬೆಂಗಳೂರಲ್ಲಿ ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಕೊಲೆ, ಶವ ಬಚ್ಚಿಟ್ಟ ಮಹಿಳೆ ಅರೆಸ್ಟ್ ಆಗಿದ್ದೇ ರೋಚಕ, ಹತ್ಯೆ ಮಾಡಿ ಯಾರಿಗೂ ತಿಳಿಯದಂತೆ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಸಿನಿಮಾ ಕತೆ ರೀತಿಯಲ್ಲೇ ಈ ಹತ್ಯೆ ನಡೆದಿದೆ.
ಬೆಂಗಳೂರು (ನ.08) ರವಿಚಂದ್ರನ್ ನಾಯಕನಾಗಿ ಕಾಣಿಸಿಕೊಂಡ ದೃಶ್ಯ ಸಿನಿಮಾದಲ್ಲಿ ಅಚಾನಕ್ಕಾಗಿ ಆಗಿರುವ ಕೊಲೆಯನ್ನು ಮುಚ್ಚಿಡಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಇದರಲ್ಲಿ ನಾಯಕ ಯಶಸ್ವಿಕೂಡ ಆಗುತ್ತಾನೆ. ಸಿನಿಮಾ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ದೃಶ್ಯ ಸಿನಿಮಾ ರೀತಿಯಲ್ಲೇ ಬೆಂಗಳೂರಿನಲ್ಲಿ ವೃದ್ಧೆಯ ಕೊಲೆಯಾಗಿದೆ. ಹತ್ಯೆ ಬಳಿಕ ಮೃತದೇಹ ಬಚ್ಚಿಡಲಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಆರೋಪಿ ಮಹಿಳೆ ಎಸ್ಕೇಪ್ ಆಗಿದ್ದಳು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ.
ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರಿನಲ್ಲಿ ಘಟನೆ ನಡೆದಿದೆ. ಕೂಗೂರು ನಿವಾಸಿ 68 ವರ್ಷದ ಭದ್ರಮ್ಮ ಉತ್ತಮ ಜೀವನ ನಡೆಸುತ್ತಿದ್ದರು. ಕುಟುಂಬಸ್ಥರು ಉತ್ತಮ ಸ್ಥಾನಮಾನದಲ್ಲಿದ್ದರು. ಹೀಗಾಗಿ ಭದ್ರಮ್ಮಳಿಗೆ ಯಾವ ಕೊರತೆಯೂ ಇರಲಿಲ್ಲ. ನೆರೆ ಹೊರೆಯವರು, ಗ್ರಾಮದವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಿರುವಾಗ ಅದೇ ಗ್ರಾಮದ ದೀಪಾ ಅನ್ನೋ ಮಹಿಳೆಯ ಇದೇ ಭದ್ರಮ್ಮನನ್ನು ಮನೆಗೆ ಕರೆದಿದ್ದಾಳೆ.
ಕಜ್ಜಾಯ ನೀಡುವುದಾಗಿ ಮನೆಗೆ ಕರೆದಿದ್ದ ಮಹಿಳೆ
ಮನೆಯಲ್ಲಿ ಹಬ್ಬದ ಕಾರಣ ವಿಶೇಷ ತಿನಿಸು ಮಾಡಿದ್ದೇವೆ. ಕಜ್ಜಾಯ ಮಾಡಿದ್ದೇವೆ. ನೀವು ಬರಬೇಕು, ಕಜ್ಜಾಯ ಕೊಡುತ್ತೇನೆ. ಹಿರಿಯರಾಗಿರುವ ನೀವು ಬಂದು ಕಜ್ಜಾಯ ಸ್ವೀಕರಿಸಿದರೆ ಅದೇ ನಮಗೆ ನೀಡುವ ಆಶೀರ್ವಾದ ಎಂದು ಬಣ್ಣದ ಮಾತನಾಡಿದ್ದಾಳೆ. ಈ ಕಾಲದಲ್ಲಿ ಹಿರಿಯರಿಗೆ ಗೌರವ ನೀಡುವುದೇ ದೊಡ್ಡ ವಿಚಾರ ಎಂದು ಭದ್ರಮ್ಮ ಕೂಡ ಕಳೆದ ತಿಂಗಳು ದಿನಾಂಕ 30 ರಂದು ದೀಪಾ ಮನೆಗೆ ತೆರಳಿದ್ದಾರೆ. ಆದರೆ ದೀಪಾ ಹೇಳಿದು ಬಿಸಿ ಬಿಸಿ ಕಜ್ಜಾಯ ಅನ್ನೋದು ಭದ್ರಮ್ಮಗೆ ಗೊತ್ತಿರಿಲ್ಲ. ಆಕೆಯ ಉದ್ದೇಶದ ಕುರಿತು ಕಿಂಚಿತ್ತು ಅನುಮಾನವೂ ಇರಲಿಲ್ಲ.
ವೃದ್ಧೆ ನಾಪತ್ತೆ ದೂರು ನೀಡಿದ ಕುಟುಂಬಸ್ಥರು
ಎಷ್ಟು ಹೊತ್ತಾದರೂ ಮನೆಗೆ ಭದ್ರಮ್ಮ ವಾಪಾಸ್ ಆಗಿಲ್ಲ. ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಎಲ್ಲೇ ಹೋದರು ಸಂಜೆಯಾಗುವ ಮೊದಲೇ ಮನೆ ಸೇರುತ್ತಿದ್ದ ಭದ್ರಮ್ಮ ರಾತ್ರಿಯಾದರೂ ವಾಪಾಸ್ ಆಗಿಲ್ಲ. ಹೀಗಾಗಿ ಆತಂಕಗೊಂಡ ಕುಟುಂಬಸ್ಥರು ಭದ್ರಮ್ಮ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ. ಸತತ ತನಿಖೆ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಸಿಸಿಟಿವಿ ದೃಶ್ಯಗಳಲ್ಲೂ ಎಲ್ಲಿ ಹೋಗಿದ್ದಾರೆ ಅನ್ನೋದು ಸ್ಪಷ್ಟವಾಗಿರಲಿಲ್ಲ. ಹೋಗಿರವ ದಾರಿ ಆಧರಿಸಿ ಒಂದಷ್ಟ ಮಂದಿ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಈ ಪೈಕಿ ಅದೇ ಊರಿನ ನಿವಾಸಿ ದೀಪಾ ಕೂಡ ಒಬ್ಬರು.
ಅನುಮಾನದ ಮೇಲೆ ದೀಪಾ ವಶಕ್ಕೆ ಪಡೆದ ಪೊಲೀಸರು
ದೀಪಾ ನಡೆ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಅನುಮಾನ ಮತ್ತಷ್ಟು ಬಲಗೊಂಡಿದೆ. ಆಕೆಯ ತನಗೇನು ಗೊತ್ತಿಲ್ಲ ಎಂದು ಹೇಳುತ್ತಿದ್ದಂತೆ ಪೊಲೀಸ್ ಭಾಷೆಯಲ್ಲಿ ವಿಚಾರಣೆ ಆರಂಭಗೊಂಡಿದೆ. ಈ ವೇಳೆ ನಡೆದ ಘಟನೆ ಬಾಯ್ಬಿಟ್ಟಿದ್ದಾಳೆ.
ಎರಡು ದಿನ ಮನೆಯಲ್ಲೇ ಮತೃದಹೇ ಬಚ್ಚಿಟ್ಟ ದೀಪಾ
ಕಜ್ಜಾಯ ನೀಡಲು ಮನೆಗೆ ಕರೆದ ವೃದ್ಧೆ ಭದ್ರಮನನ್ನು ದೀಪಾ ಹತ್ಯೆ ಮಾಡಿದ್ದಾಳೆ. ಯಾವುದೇ ಅಳುಕು ಅಂಜಿಲ್ಲದೆ ಭದ್ರಮ್ಮ ಹತ್ಯೆ ಮಾಡಿದ ದೀಪಾ ಬಳಿಕ ದೃಶ್ಯ ಸಿನಿಮಾ ರೀತಿ ಮೃತದೇಹ ಬಚ್ಚಿಟ್ಟಿದ್ದಾಳೆ. ಸಿನಿಮಾದಲ್ಲಿ ಪೊಲೀಸ್ ಠಾಣೆ ಅಡಿಯಲ್ಲೇ ಬಚ್ಚಿಟ್ಟರೆ, ಇಲ್ಲಿ ದೀಪಾ ತನ್ನ ಮನೆಯಲ್ಲೇ ಮೃತದೇಹ ಬಚ್ಟಿಟ್ಟಿದ್ದಾಳೆ. ಆದರೆ ಕೆಲ ದಿನಗಳ ಬಳಿಕ ಮೃತದೇಹದ ದುರ್ವಾಸನೆ ಹೆಚ್ಚಾಗಿದೆ. ಹೀಗಾಗಿ ಕಾರಿನಲ್ಲಿ ಮೃತದೇಹ ತುಂಬಿಕೊಂಡು ತಿಮ್ಮಸಂದ್ರ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾಳೆ. ಚಿನ್ನಾಭರಣಕ್ಕಾಗಿ ಭದ್ರಮ್ಮನ ಕೊಲೆ ಮಾಡಿದ್ದಾಳೆ.
ಆರೋಪಿ ದೀಪಾ ನೀಡಿದ ಮಾಹಿತಿ ಆಧರಿಸಿ ಸ್ಥಳ ಪರಿಶೀಲನೆ ನಡೆಸಿದಾಗ ವೃದ್ಧಯ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
