- Home
- Entertainment
- TV Talk
- ಛೇ! ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ: Anchor Anushree ಬಗ್ಗೆ ಅಭಿಮಾನಿಗಳ ಭಾರಿ ಬೇಸರ, ಕೋಪ: ಆಗಿದ್ದೇನು?
ಛೇ! ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ: Anchor Anushree ಬಗ್ಗೆ ಅಭಿಮಾನಿಗಳ ಭಾರಿ ಬೇಸರ, ಕೋಪ: ಆಗಿದ್ದೇನು?
'ಮಹಾನಟಿ ಸೀಸನ್-2' ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಐವರು ಸ್ಪರ್ಧಿಗಳ ನಡುವೆ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಫಿನಾಲೆಯ ಪ್ರೋಮೋದಲ್ಲಿ ಆ್ಯಂಕರ್ ಅನುಶ್ರೀ ಅವರು ಮಂಗಳಸೂತ್ರ ಧರಿಸದೇ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಮಹಾನಟಿ ಸೀಸನ್-2
ಮಹಾನಟಿ (Mahanati Reality Show) ಫಿನಾಲೆ ನಡೆಯುತ್ತಿದೆ. ಇದು ಸೀಸನ್ -2 ಆಗಿದ್ದು, ಯಾರಿಗೆ ಮಹಾನಟಿಯ ಪಟ್ಟ ಒಲಿಯಲಿದೆ ಎನ್ನುವ ಬಗ್ಗೆ ಸಕತ್ ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
ಕಿರುತೆರೆಯಿಂದ ಬೆಳ್ಳಿತೆರೆಗೆ
ಕಿರುತೆರೆಯಿಂದ ಬೆಳ್ಳಿತೆರೆಗೆ ಎಲ್ಲ ರೀತಿಯ ಅರ್ಹತೆ, ಪ್ರತಿಭೆ ಇರುವ ಯುವತಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ.
ಫೈನಲಿಸ್ಟ್ಗಳು ಯಾರು?
ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದಾರೆ. ರಮೇಶ್ ಅರವಿಂದ್, ಪ್ರೇಮ, ನಿರ್ದೇಶಕ ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಅವರು ಈ ರಿಯಾಲಿಟಿ ಷೋನ ತೀರ್ಪುಗಾರರಾಗಿದ್ದು, ಇದಾಗಲೇ ಮಹಾನಟಿ ಯಾರು ಎನ್ನುವ ಬಗ್ಗೆ ಡಿಸೈಡ್ ಮಾಡಲಾಗಿದೆ. ಅದಿನ್ನೂ ಪ್ರಸಾರ ಕಾಣುವುದು ಬಾಕಿಯಿದೆ ಅಷ್ಟೇ.
ಷಾರ್ಟ್ ಮೂವಿಗಳಲ್ಲಿ ನಟನೆ
ಇದರಲ್ಲಿ ಅಂತಿಮ ಸ್ಪರ್ಧಿಗಳಾಗಿರುವವರು ಇದಾಗಲೇ ನಿರ್ದೇಶಕರುಗಳಾದ ಹರಿ ಸಂತೋಷ್, ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ನಿರ್ದೇಶಿಸಿರುವ ಷಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ. ಈ ಶಾರ್ಟ್ ಮೂವಿಗಳ ಸ್ಕ್ರೀನಿಂಗ್ ಇದೇ 3ರಂದು ಆಗಿದೆ.
ಪ್ರೊಮೋ ರಿಲೀಸ್
ಇದರ ನಡುವೆಯೇ ಪ್ರೊಮೋ ರಿಲೀಸ್ ಆಗಿದ್ದು, ಇದರಲ್ಲಿ ಆ್ಯಂಕರ್ ಅನುಶ್ರೀ (Anchor Anushree) ಅವರನ್ನು ನೋಡಿ ಅಭಿಮಾನಿಗಳು ಭಾರಿ ಬೇಸರ ಹೊರಹಾಕುತ್ತಿದ್ದಾರೆ. ನಿಮ್ಮಿಂದ ಇದನ್ನು ಎಕ್ಸ್ಪೆಕ್ಟ್ ಮಾಡಲಿಲ್ಲ ಎನ್ನುತ್ತಿದ್ದಾರೆ..
ಅಭಿಮಾನಿಗಳ ಕನಸು
ಅಷ್ಟಕ್ಕೂ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಹೀಗೆಯೇ ಇರಬೇಕು, ಬೇರೆಯವರಿಗೆ ಮಾದರಿ ಆಗಬೇಕು ಎನ್ನುವ ಕನಸು ಇರುತ್ತದೆ. ಅದರಲ್ಲಿಮುಖ್ಯವಾಗಿ ಅಭಿಮಾನಿಗಳ ಗಮನ ಹೋಗುವುದು ಮದುವೆಯಾದ ಮೇಲೆ ಸೆಲೆಬ್ರಿಟಿಗಳು ಮಂಗಳಸೂತ್ರ ಧರಿಸುತ್ತಾರೋ ಇಲ್ಲವೋ ಎನ್ನುವುದು, ಇಲ್ಲಿಯವರೆಗೆ ಅನುಶ್ರೀ ಅವರು ಮಂಗಳಸೂತ್ರವನ್ನು ಧರಿಸಿ ಅಂದವಾಗಿ ಕಾಣಿಸುತ್ತಿದ್ದರು. ಎಲ್ಲರೂ ಇದೇ ಕಾರಣಕ್ಕೆ ಅವರನ್ನು ಕಮೆಂಟ್ಗಳಲ್ಲಿ ಹೊಗಳಿದ್ದೂ ಇದೆ.
ಮಂಗಳಸೂತ್ರ ಕಾಣೆ?
ಆದರೆ ಇದೀಗ ಮಹಾನಟಿಯ ಗ್ರ್ಯಾಂಡ್ ಫಿನಾಲೆ ಸಂದರ್ಭದಲ್ಲಿ ಭಾರಿ ನೆಕ್ಲೆಸ್ ಹಾಕಿಕೊಂಡಿರುವ ಅನುಶ್ರೀ ಅವರ ಕೊರಳಿನಲ್ಲಿ ಮಾಂಗಲ್ಯಸರ ಇಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕೊನೆಯ ಪಕ್ಷ ನಿಮ್ಮಿಂದ ಇಂಥದ್ದೊಂದು ನಿರೀಕ್ಷೆ ಮಾಡಲಿಲ್ಲ ಎಂದು ಹೇಳುತ್ತಿದ್ದಾರೆ.