ಬೆಂಗಳೂರು ಯುವತಿಯ ತೊಡೆ ಸವರಿ ಅನುಚಿತ ವರ್ತನೆ ತೋರಿದ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್, ಕಿರುಕುಳದ ವಿಡಿಯೋ ಹಂಚಿಕೊಂಡುಕಣ್ಣೀರಿಟಿದ್ದ ಯುವತಿಯಿಂದ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬೆಂಗಳೂರು (ನ.08) ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಚಾಲಕನ ಅನುಚಿತ ವರ್ತನೆ ವಿರುದ್ದ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವಾಗ ಚಾಲಕ ಯುವತಿಯ ತೊಡೆ ಸವರಿ ಕಿರುಕುಳ ನೀಡಿದ್ದ. ನಿಲ್ಲಿಸಲು ಮನವಿ ಮಾಡಿದರೂ ಮುಂದುವರಿಸಿದ್ದ. ಯುವತಿ ಕಣ್ಣೀರಿಟ್ಟು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದರು. ಇದೀಗ ಬೈಕ್ ಟ್ಯಾಕ್ಸಿ ಚಾಲಕನ ಅರೆಸ್ಟ್ ಮಾಡಲಾಗಿದೆ.

ಉಲ್ಲಾಳ ಭಾಗದ ಲೋಕೇಶ್ ಬಂಧಿತ ಆರೋಪಿ

ಯುವತಿ ಜೊತೆಗೆ ಬೈಕ್ ಟ್ಯಾಕ್ಸಿ ಚಾಲಕನ ಅನುಚಿತ ವರ್ತನೆ ಕೇಸ್ ದಾಖಲಿಸಿದ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿ ಉಲ್ಲಾಳ ಭಾಗದ 28 ವರ್ಷದ ಲೋಕೇಶನನ್ನು ಬಂಧಿಸಿದ್ದಾರೆ. ಗುರುವಾರ (ನ.06) ಸಂಜೆ ಈ ಘಟನೆ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ. ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ದೇಶದಲ್ಲೆ ತೀವ್ರ ಚರ್ಚೆ ಗ್ರಾಸವಾಗಿದ್ದ ಪ್ರಕರಣ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಳಿ ಪಿಜಿಯಲ್ಲಿ ವಾಸ್ತ್ಯವ್ಯವಿರುವ ಯುವತಿ, ಕೆಲಸದ ನಿಮಿತ್ತ ತೆರಳಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಕೆಲ ಕ್ಷಣದಲ್ಲಿ ಆಗಮಿಸಿದ ಬೈಕ್ ಚಾಲಕ, ಯುವತಿಯನ್ನು ಕೂರಿಸಿಕೊಂಡು ಹೊರಟಿದ್ದಾನೆ. ಆದರೆ ದಾರಿಯಲ್ಲಿ ಯುವತಿಯ ತೊಡೆ ಸವರಿಕೊಂಡು ಕಿರುಕುಳ ನೀಡಲು ಆರಂಭಿಸಿದ್ದಾನೆ. ಪದೇ ಪದೇ ಯುವತಿ ತೊಡೆ ಮುಟ್ಟುತ್ತಾ, ಸವರುತ್ತಾ ಸಾಗಿದ್ದಾನೆ.

ಅಣ್ಣಾ, ಏನು ಮಾಡುತ್ತಿದ್ದೀಯಾ, ನಿಲ್ಲಿಸು

ಚಾಲಕನ ಕಿರಿಕುಳ ಆರಂಭಗೊಳ್ಳುತ್ತಿದ್ದಂತೆ ಯುವತಿ, ನಿಲ್ಲಿಸು ಸೂಚಿಸಿದ್ದಾಳೆ. ಏನು ಮಾಡುತ್ತಿದ್ದೀಯಾ ಅಣ್ಣಾ, ನಿಲ್ಲಿಸಲು ಸೂಚಿಸಿದ್ದಾಳೆ. ಆದರೆ ಚಾಲಕ ತನ್ನ ಉದ್ದೇಶದಿಂದ ಕಿರುಕುಳ ನೀಡುತ್ತಾ ಸಾಗಿದ್ದಾನೆ. ಸಿಗ್ನಲ್ ಬಳಿ ಬೈಕ್ ನಿಲ್ಲಿಸಿದಾಗ ಆಕೆಯ ತೊಡೆಯ ಮೇಲೆ ಎರಡು ಕೈಗಳನ್ನಿಟ್ಟು ನಿಂತಿದ್ದಾನೆ. ತೀವ್ರ ಮಾನಸಿಕ ಹಿಂಸೆ, ಕಿರುಕುಳದಿಂದ ನೊಂದ ಯುವತಿ ಹೇಳಲು ಸಾಧ್ಯವಾಗದೆ, ಪ್ರತಿಭಟಿಸಿದರೆ ಎಲ್ಲಿ ಅನಾಹುತವಾಗುತ್ತೆ ಅನ್ನೋ ಭಯದಿಂದಲೇ ಪ್ರಯಾಣ ಮುಂದುವರಿಸಿದ್ದಾಳೆ. ಕಿರುಕುಳ ಅತೀಯಾಗುತ್ತಿದ್ದಂತೆ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ಬೆಂಗಳೂರಿನ ಮಾನ ಎಲ್ಲೆಡೆ ಹರಾಜಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂದು ದೇಶದಲ್ಲೇ ವಿಡಿಯೋ ವೈರಲ್ ಆಗಿದೆ. ಇತ್ತ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಚಾಲಕನ ಬಂಧಿಸಿ ಬುದ್ದಿ ಕಲಿಸಿದ್ದಾರೆ.