Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ನಡುವಿನ ಮನಸ್ತಾಪವನ್ನು ಕಿಚ್ಚ ಸುದೀಪ್‌ ಅವರು ಅಡ್ರೆಸ್‌ ಮಾಡಿ ಮಾತನಾಡಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಸತ್ಯ ಏನು ಎಂದು ರಿವೀಲ್‌ ಆಗಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಸಿಕ್ಕಾಪಟ್ಟೆ ಮನಸ್ತಾಪ ಇದೆ. ಮೊದಲ ವಾರದಿಂದಲೇ ಅಶ್ವಿನಿ ಗೌಡ ಮೇಲೆ ರಕ್ಷಿತಾ ಬೇಸರಮಾಡಿಕೊಂಡಿದ್ದರು. ಈಗ ಅಶ್ವಿನಿ ಅವರು ರಕ್ಷಿತಾಗೆ ಹಾಗೆ ಹೇಳಿಲ್ಲ, ಹೀಗೆ ಹೇಳಿದೀನಿ, ಅದು ಸಾಬೀತಾದರೆ ಬಿಗ್‌ ಬಾಸ್‌ ಶೋ ಬಿಡುತ್ತೀನಿ ಎಂದಿದ್ದಾರೆ.

ಪರ್ಸನಲ್‌ ಆಗಿ ತಗೊಂಡ ಅಶ್ವಿನಿ ಗೌಡ

ಲೆಟರ್‌ ಟಾಸ್ಕ್‌ನಲ್ಲಿ ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಮುಖಾಮುಖಿ ಆಗಿದ್ದರು. ಇದರ ಬಗ್ಗೆ ಚರ್ಚೆ ಆಯ್ತು. ಆಗ ಸೂರಜ್‌ ಅವರು, “ಅಶ್ವಿನಿ ಗೌಡ ಅವರು ಪರ್ಸನಲ್‌ ಆಗಿ ತಗೊಂಡರು. ನನ್ನ ಮುಖಕ್ಕೆ ಮಸಿ ಬಳಿದರು ಎಂದು ಹೇಳಿದರು, ನಮ್ಮ ಅಭಿಪ್ರಾಯವನ್ನು ಹೇಳೋಕೆ ಬಿಡಲಿಲ್ಲ” ಎಂದು ಹೇಳಿದ್ದರು.

ಅಶ್ವಿನಿ ಗೌಡ ಏನಂದ್ರು?

ಆಗ ಅಶ್ವಿನಿ ಗೌಡ ಅವರು, “ನಾನು ಸೂರಜ್‌ ಹೇಳಿದಂತೆ ಮಾತನಾಡಿಲ್ಲ, ಈಗಲೇ ವಿಡಿಯೋ ಹಾಕಿ, ಅದೇನಾದರೂ ಸಾಬೀತಾದರೆ ನಾನು ಹೊರಗಡೆ ಹೋಗ್ತೀನಿ” ಎಂದು ಹೇಳಿದ್ದರು.

ವಿಡಿಯೋದಲ್ಲಿ ಏನಿತ್ತು?

ಆಮೇಲೆ ಈ ವಿಟಿ ಪ್ಲೇ ಆಯ್ತು, ಆ ವಿಡಿಯೋದಲ್ಲಿ ಅಶ್ವಿನಿ ಗೌಡ ಅವರು ರಕ್ಷಿತಾಗೆ ಲೆಟರ್‌ ಸಿಗೋದು ಬೇಡ ಎಂದು ಹೇಳಿರೋದು, ಪರ್ಸನಲ್‌ ಆಗಿ ತಗೊಂಡಿರೋದು ಬಯಲಾಗಿತ್ತು.

“ಈ ಮನೆ ಛ಼ಿದ್ರ ಆಗೋಕೆ ರಕ್ಷಿತಾ ಶೆಟ್ಟಿ ಕಾರಣ. ನನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತಿರುಚಿ, ವ್ಯಕ್ತಿತ್ವಕ್ಕೆ ಮಸಿ ಬಳಿದಿದ್ದಾರೆ. ರಕ್ಷಿತಾ ಬಗ್ಗೆ ನನಗೆ ಏನೂ ಹೇಳೋಕೆ ಬರಬೇಡಿ” ಎಂದು ಅಶ್ವಿನಿ ಗೌಡ ಅವರು ವಿಡಿಯೋದಲ್ಲಿ ಹೇಳಿದ್ದರು.

ರಕ್ಷಿತಾಗೆ ಪತ್ರ ಸಿಗಬಾರದು ಎನ್ನೋದಿತ್ತು

“ರಕ್ಷಿತಾ ಶೆಟ್ಟಿಗೆ ಪತ್ರ ಸಿಗಬಾರದು ಎಂದು ನಾನು ಹೇಳಿದೆ, ಇದನ್ನು ನಾನು ಪರ್ಸನಲ್‌ ಆಗಿ ತಗೊಂಡೆ. ನನಗೆ ರಕ್ಷಿತಾಳಿಂದ ಬೇಸರ ಆಗಿತ್ತು. ಇದನ್ನು ನಾನು ಒಪ್ಪಿಕೊಳ್ತೀನಿ. ಆ ಕ್ಷಣದಲ್ಲಿ ಅನಿಸ್ತು, ಹಾಗೆ ಮಾಡಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಮೊದಲೇ ಹೇಳಬೇಕಿತ್ತು

“ಎಲ್ಲರೂ ಆ ಕ್ಷಣದಲ್ಲಿ ಮಾಡುತ್ತಾರೆ, ನೀವು ಮಾಡೋದು ಸರಿ ಹಾಗೂ ತಪ್ಪು ಎರಡರಲ್ಲಿ ಒಂದಕ್ಕೆ ಬದ್ಧರಾಗಬೇಕು. ಪರ್ಸನಲ್‌ ಆಗಿ ತಗೊಂಡಿರೋದನ್ನು ಮೊದಲೇ ಹೇಳಿದ್ರೆ ನಿಮಗೆ ನಾನು ಸೆಲ್ಯೂಟ್‌ ಹೊಡೆಯುತ್ತಿದ್ದೆ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ನಡುವೆ ಹದಿನೈದು ವರ್ಷಗಳ ವಯಸ್ಸಿನ ಅಂತರವಿದೆ. ನಾನು ಅಶ್ವಿನಿ ಗೌಡ ಅವರ ಮತಕ್ಕೆ ಕಾಲು ಹಾಕಿ ತುಳಿಯುತ್ತೀನಿ ಎಂದು ಹೇಳಿದ್ದಕ್ಕೆ ಎಂದು ರಕ್ಷಿತಾ ಶೆಟ್ಟಿ ಕ್ಷಮೆ ಕೇಳಿದ್ದಾರೆ.