ಮೇಕಿಂಗ್‌ನಲ್ಲಿ ನಿರ್ದೇಶಕರಿಗೆ ಸೀಮಿತ ಅವಕಾಶಗಳು ಇದ್ದಿದ್ದನ್ನು ಸಿನಿಮಾನೇ ಕಾಣಿಸುತ್ತದೆ. ಅದರ ಹೊರತಾಗಿ ನಾಯಕಿ ಸಂಹಿತಾ ವಿನ್ಯಾ ಅವರು ಯೂಟ್ಯೂಬರ್ ಪಾತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಜಯವರ್ಧನ್ ಮೆಚ್ಚುಗೆ ಗಳಿಸುತ್ತಾರೆ.
ಆರ್.ಎಸ್.
ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಔಷಧ ಮಾಫಿಯಾ, ಹಸಿರು ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಜಗತ್ತು, ಈ ಮಧ್ಯೆ ಅಡಕತ್ತರಿಯಲ್ಲಿ ಸಿಕ್ಕಿರುವ ಮನುಷ್ಯ ಜನಾಂಗ ಹೀಗೆ ಬಹಳ ಸಂಕೀರ್ಣ ವಿಚಾರಗಳ ಕುರಿತು ದನಿ ಎತ್ತುವ ಸಿನಿಮಾ ಇದು. ಇಲ್ಲೊಬ್ಬ ಸಮಾಜಕ್ಕೆ ಒಳಿತು ಮಾಡಬೇಕು ಎಂದು ಬಯಸುವ ಯುವ ವೈದ್ಯ ಇದ್ದಾನೆ. ಆತನಿಗೆ ಹಳ್ಳಿಯ ಜನರಿಗೆ ನೆರವಾಗಬೇಕು ಎಂಬ ಹಂಬಲ.
ಅದೇ ಅವನಿಗೆ ಒಂದು ತಂಡ ಸಿಕ್ಕಿ ವೈದ್ಯಕೀಯ ಕ್ಷೇತ್ರದಲ್ಲಿ ತಪ್ಪುಗಳನ್ನು ಮಾಡಲು ಸೂಚಿಸುತ್ತದೆ. ಈ ಪ್ರಕರಣ ವಾಸ್ತವ ಜಗತ್ತಿನ ಹಲವಾರು ಪ್ರಸಂಗಗಳನ್ನು ನೆನಪಿಸಬಹುದು. ಮತ್ತೊಂದು ಕಡೆ ಹಳ್ಳಿಯ ಜಮೀನನ್ನು ಕಾರ್ಪೋರೇಟ್ ಜನರಿಗೆ ಕೊಡಬಾರದು ಎಂದು ಹೋರಾಡುವ ತಂಡವಿದೆ. ಅವರನ್ನು ಹತ್ತಿಕ್ಕುವ ಭೂಮಿ ಪೀಡಕರೂ ಇದ್ದಾರೆ. ಈ ಎರಡು ಸಮಸ್ಯೆಗಳು ಮತ್ತು ಹಳ್ಳಿಯ ಜನರ ಮನಸ್ಥಿತಿಯನ್ನು ತೋರಿಸುತ್ತಾ ಕತೆ ಮುಂದುವರಿಯುತ್ತದೆ.
ಚಿತ್ರ: ಹೇ ಪ್ರಭು
ನಿರ್ದೇಶನ: ವೆಂಕಟ್ ಭಾರದ್ವಾಜ್
ತಾರಾಗಣ: ಜಯವರ್ಧನ್, ಸಂಹಿತಾ ವಿನ್ಯ, ಯಮುನಾ ಶ್ರೀನಿಧಿ, ಗಜಾನನ ಹೆಗ್ಡೆ, ಲಕ್ಷ್ಮಣ ಶಿವಶಂಕರ
ರೇಟಿಂಗ್: 3
ಮೇಕಿಂಗ್‌ನಲ್ಲಿ ನಿರ್ದೇಶಕರಿಗೆ ಸೀಮಿತ ಅವಕಾಶಗಳು ಇದ್ದಿದ್ದನ್ನು ಸಿನಿಮಾನೇ ಕಾಣಿಸುತ್ತದೆ. ಅದರ ಹೊರತಾಗಿ ನಾಯಕಿ ಸಂಹಿತಾ ವಿನ್ಯಾ ಅವರು ಯೂಟ್ಯೂಬರ್ ಪಾತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಜಯವರ್ಧನ್ ಮೆಚ್ಚುಗೆ ಗಳಿಸುತ್ತಾರೆ. ಈ ಸಿನಿಮಾ ನೋಡುಗರ ಮನಸ್ಸಲ್ಲಿ ಪ್ರಶ್ನೆಗಳನ್ನು ಹುಟ್ಟಿಸಲು ಯತ್ನಿಸುತ್ತದೆ. ಇಲ್ಲಿ ಚರ್ಚಿಸಿರುವ ಸಂಕೀರ್ಣ ಸಮಸ್ಯೆಗಳು ನೋಡುಗರಲ್ಲಿ ಸಣ್ಣದೊಂದು ಬೇಸರವನ್ನು ಹುಟ್ಟಿಸುತ್ತದೆ. ಮೆಡಿಕಲ್ ಮಾಫಿಯಾ ಕುರಿತ ವಿವರಗಳು ಆತಂಕ ಹುಟ್ಟಿಸುತ್ತದೆ. ಅದೇ ಈ ಸಿನಿಮಾದ ಗೆಲುವು.
