ಸ್ಟಾರ್ಟ್ಅಪ್ ಬಿಸ್ನೆಸ್ ಕುರಿತು ಪಿಯೂಷ್ ಗೋಯಲ್ ನೀಡಿದ ವಿವಾದಿತ ಹೇಳಿಕೆಯನ್ನು ಸುಹೇಲ್ ಸೇಠ್ ಸಮರ್ಥಿಸಿದ್ದಾರೆ. ಅಷ್ಟಕ್ಕೂ ಸುಹೇಲ್ ಸೇಠ್ ಈ ಹೇಳಿಕೆ ಸಮರ್ಥಿಸಿದ್ದೇಕೆ?
ಪೂರ್ತಿ ಓದಿ- Home
- News
- State
- Karnataka News Live: ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ ಬೆಂಬಲಿಸಿದ ಸುಹೇಲ್ ಸೇಠ್
Karnataka News Live: ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ ಬೆಂಬಲಿಸಿದ ಸುಹೇಲ್ ಸೇಠ್

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಮಂಗಳವಾರ ಮಧ್ಯಾಹ್ನ ಪ್ರಕಟಗೊಳ್ಳಲಿದೆ. ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಮಧ್ಯಾಹ್ನ 12.30ಕ್ಕೆ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ನಂತರ 1.30ರ ವೇಳೆಗೆ ವಿದ್ಯಾರ್ಥಿಗಳು ವೆಬ್ಸೈಟ್ನಲ್ಲಿ (https://karresults.nic.in) ತಮ್ಮ ಫಲಿತಾಂಶ ವೀಕ್ಷಿಸಬಹುದು. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುವ ನಿರೀಕ್ಷೆಯಿದ್ದು, ಇನ್ನೊಂದು ವಾರದೊಪ್ಪತ್ತಿನಲ್ಲಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸುವ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ.
ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ ಬೆಂಬಲಿಸಿದ ಸುಹೇಲ್ ಸೇಠ್
ರಾಜ್ಯದ ಜನತೆಗೆ ನಿರಂತರ ದರ ಏರಿಕೆ ಶಾಕ್, ಈಗ ಖಾಸಗಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಫಿಕ್ಸ್
ಹಾಲಿನ ಬೆಲೆ ಏರಿಕೆ, ಡೀಸೆಲ್ ಮೇಲೆ ಸೆಸ್ ಏರಿಕೆ, ವಿದ್ಯುತ್ ದರ ಏರಿಕೆ, ಕಸದ, ಪಾರ್ಕಿಂಗ್ ಮೇಲೆ ಶುಲ್ಕ ಸೇರಿದಂತೆ ರಾಜ್ಯದಲ್ಲಿ ಜನರು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಇದೀಗ ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗುತ್ತಿದೆ.
ಪೂರ್ತಿ ಓದಿಬಾಂಗ್ಲಾದೇಶದೊಂದಿಗೆ ಸ್ನೇಹ ಬೆಳೆಸಿ ಬೆನ್ನಿಗೆ ಚೂರಿ, ಇಡೀ ಸಮುದ್ರ ಸುತ್ತಿ ನಡು ನೀರಲ್ಲಿ ಕೈ ಬಿಟ್ಟ ಪಾಕ್!
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನದ ನಂತರ ಬಾಂಗ್ಲಾ-ಪಾಕ್ ಸ್ನೇಹ ಸಂಬಂಧ ಹತ್ತಿರವಾಗಿತ್ತು. ಆದರೆ ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ನೀಡಿದ ಭರವಸೆಯನ್ನು ಈಡೇರಿಸದೆ, ನಡು ನೀರಿನಲ್ಲಿ ಕೈಬಿಟ್ಟಿದೆ.
ಪೂರ್ತಿ ಓದಿBreaking ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಆಸ್ಪತ್ರೆ ದಾಖಲು
ಕೇಂದ್ರ ಮಾಜಿ ಸಚಿವ, ಪಿ ಚಿದಂಬಂರ ಆರೋಗ್ಯದಲ್ಲಿ ಏರುಪೇರಾಗಿದೆ. ಕಾರ್ಯಕ್ರಮದಲ್ಲಿರುವಾಗಲೇ ಅಸ್ವಸ್ಥಗೊಂಡ ನಾಯಕ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿದಂಬರಂ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಪೂರ್ತಿ ಓದಿವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ!
ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಅವರು ಯುನೈಟೆಡ್ ನೇಷನ್ಸ್ ಯೂತ್ ಫೋರಂಗೆ ಭಾರತದಿಂದ ಆಯ್ಕೆಯಾಗಿದ್ದಾರೆ. 138 ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಈ ಸಮಾವೇಶವು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಪೂರ್ತಿ ಓದಿಭಾರತದ ವಾಯು ರಕ್ಷಣಾ ಬಲ ವರ್ಧಿಸಿದ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳು
ಭಾರತೀಯ ಸೇನೆಯು ಮೂರು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಸೇರಿಸಿಕೊಳ್ಳುವ ಮೂಲಕ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಕ್ಷಿಪಣಿಗಳು ಭಾರತದಲ್ಲೇ ನಿರ್ಮಾಣವಾಗಿದ್ದು, ವೈಮಾನಿಕ ಅಪಾಯಗಳನ್ನು ತಡೆಯಲು ಸಮರ್ಥವಾಗಿವೆ.
ಪೂರ್ತಿ ಓದಿಈ ರಾಜ್ಯದ ಕಾರಿನ ರಿಜಿಸ್ಟ್ರೇಶನ್ ನಂಬರ್ 45 ಲಕ್ಷ ರೂಗೆ ಹರಾಜು, ಈ ನಂಬರ್‌ನಲ್ಲಿ ಏನಿದೆ?
ಭಾರತದಲ್ಲಿ ವಾಹನಕ್ಕೆ ನಿಮಗಿಷ್ಟದ ನಂಬರ್ ಪಡೆಯಲು ಹರಾಜಿನ ಮೂಲಕ ಖರೀದಿಸಬೇಕು. ಇದೀಗ ಭಾರತದ ಅತೀ ಗರಿಷ್ಠ ಮೊತ್ತಕ್ಕೆ ಹರಾಜಾದ ನಂಬರ್ ಪ್ಲೇಟ್ ಅನ್ನೋ ಹೆಗ್ಗಳಿಕೆಗೆ ಈ ನಂಬರ್ ಪಾತ್ರವಾಗಿದೆ. ಈ ನಂಬರ್ ಯಾವ ರಾಜ್ಯದಲ್ಲಿ ಹರಾಜಾಗಿದೆ? ಈ ನಂಬರ್‌ನಲ್ಲಿ ಅಂತಾದ್ದೇನಿದೆ?
ಪೂರ್ತಿ ಓದಿಟಾಪ್ 10 ಅತಿದೊಡ್ಡ ವಜ್ರದ ಗಣಿಗಳು: ಭಾರತದಲ್ಲಿ ಎಷ್ಟಿವೆ?
ವಿಶ್ವದ ಟಾಪ್ 10 ಅತಿದೊಡ್ಡ ವಜ್ರದ ಗಣಿಗಳ ಬಗ್ಗೆ ತಿಳಿಯಿರಿ. ರಷ್ಯಾದ ಐಖಲ್‌ನಿಂದ ಹಿಡಿದು ಕೆನಡಾದ ಏಕಾಟಿಯವರೆಗೆ, ಈ ಗಣಿಗಳು ವಜ್ರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾರತದಲ್ಲಿ ಗಣಿಗಳ ವಿವರ ಇಲ್ಲಿದೆ.
ಪೂರ್ತಿ ಓದಿ'ಎಂಜಲು ತಾಕಿಸೋದಿಲ್ಲ..' ಮಲ್ಹಾರ್ ಮಾಂಸ ಎಂದರೇನು? ವಿವಾದ ಎಬ್ಬಿಸಿದ '100% ಹಿಂದೂ' ಮಟನ್!
ಮಹಾರಾಷ್ಟ್ರದಲ್ಲಿ 'ಮಲ್ಹಾರ್ ಪ್ರಮಾಣೀಕರಣ' ವಿವಾದ ಭುಗಿಲೆದ್ದಿದೆ. ಇದು 'ಜಟ್ಕಾ' ಮಾಂಸ ಮಾರಾಟ ಮಾಡುವ ಹಿಂದೂ ಅಂಗಡಿಗಳಿಗೆ ಮಾತ್ರ ನೀಡಲಾಗುವುದು. ಈ ಕ್ರಮವು ರಾಜಕೀಯ ಚರ್ಚೆಗೆ ಕಾರಣವಾಗಿದೆ, ವಿರೋಧ ಪಕ್ಷಗಳು ಸಮಾಜವನ್ನು ವಿಭಜಿಸುವ ಆರೋಪ ಮಾಡಿವೆ.
ಪೂರ್ತಿ ಓದಿಬೆಂಗಳೂರು: ಇನ್ಫೋಸಿಸ್ ಉದ್ಯೋಗಿ, ಬೈಕ್ ಟ್ಯಾಕ್ಸಿ ಡ್ರೈವರ್ ಆದ ಕಥೆ!
ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬೈಕ್ ಟ್ಯಾಕ್ಸಿ ಬುಕ್ ಮಾಡಿದಾಗ ಇನ್ಫೋಸಿಸ್ ಉದ್ಯೋಗಿಯೊಬ್ಬರು ಡ್ರೈವರ್ ಆಗಿ ಬಂದಿದ್ದಾರೆ. ಹೆಚ್ಚುವರಿ ಹಣ ಗಳಿಸಲು ಮತ್ತು ಒಂಟಿತನ ಹೋಗಲಾಡಿಸಲು ಉದ್ಯೋಗಿ ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೂರ್ತಿ ಓದಿವೆಜ್ ಬಿರಿಯಾನಿಯಲ್ಲಿ ಸಿಕ್ಕಿದ್ದು ಚಿಕನ್ ಪೀಸ್! ಸಸ್ಯಾಹಾರಿಗೆ ಹಬ್ಬದ ದಿನವೇ ನಾನ್ವೆಜ್ ತಿನಿಸಿದ 'ಸ್ವಿಗ್ಗಿ'- ಬಂಧನ
ಹಬ್ಬದ ದಿನ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ನಾನ್ವೆಜ್ ನೀಡಿರುವ ಘಟನೆ ನಡೆದಿದೆ. ರೆಸ್ಟೋರೆಂಟ್ ಸಿಬ್ಬಂದಿ ಅರೆಸ್ಟ್ ಆಗಿದ್ದಾನೆ. ಆಗಿದ್ದೇನು?
ವಿದ್ಯಾರ್ಥಿನಿಯರ ಕೋಣೆಗೆ ಕರೆಸುತ್ತಿದ್ದ ಕಾಲೇಜು ಉಪನ್ಯಾಸಕ, ವಿಡಿಯೋ ಹೊರಬಿದ್ದ ಬೆನ್ನಲ್ಲೇ ಅರೆಸ್ಟ್
ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ ಕೋಣೆಗೆ ಕರೆಸುತ್ತಿದ್ದ. ಹಲವು ವಿಡಿಯೋಗಳು ಬಹಿರಂಗವಾಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪೂರ್ತಿ ಓದಿಹೋಮ್ ಲೋನ್ ಪಡೆದವರಿಗೆ ಸುಗ್ಗಿ, ಶೇ. 8ಕ್ಕಿಂತ ಕೆಳಗಿಳಿಯಲಿದೆ ಬಡ್ಡಿ!
ಆರ್‌ಬಿಐ ರೆಪೊ ದರ ಕಡಿತದ ನಿರೀಕ್ಷೆಯಿದ್ದು, ಗೃಹ ಸಾಲದ ಬಡ್ಡಿ ದರಗಳು ಶೇ.8ಕ್ಕೆ ಇಳಿಯುವ ಸಾಧ್ಯತೆ ಇದೆ. ವಿವಿಧ ಬ್ಯಾಂಕುಗಳ ಗೃಹ ಸಾಲದ ಬಡ್ಡಿ ದರಗಳ ವಿವರ ಇಲ್ಲಿದೆ.
ಪೂರ್ತಿ ಓದಿAAI ನೇಮಕಾತಿ 2025: ಬೆಂಗಳೂರು ಏರ್ಪೋರ್ಟ್‌ನಲ್ಲಿ 309 ಜೂ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪದವೀಧರರು ಆನ್‌ಲೈನ್ ಮೂಲಕ ಏಪ್ರಿಲ್ 25, 2025 ರೊಳಗೆ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿಭಾರತದ ಈ ಗ್ರಾಮದ ಜನರಿಗೆ ಹೆಸ್ರೇ ಇಲ್ಲ! ಹಾಡು, ಶಿಳ್ಳೆಗಳಿಂದಲೇ ಸಂವಹನ... ವಿಚಿತ್ರ ಊರಿನ ವಿಡಿಯೋ ನೋಡಿ...
ಮೇಘಾಲಯದಲ್ಲಿರುವ ಗ್ರಾಮವೊಂದರಲ್ಲಿ ನೆಲೆಸಿರುವ ಬುಡಕಟ್ಟು ಜನರು ಹೆಸರಿನ ಬದಲು ಹಾಡು, ಶಿಳ್ಳೆಗಳಿಂದಲೇ ಸಂವಹನ ನಡೆಸುತ್ತಾರೆ. ವಿಚಿತ್ರ ಎನಿಸುವ ಪದ್ಧತಿಯ ವಿಡಿಯೋ ವೈರಲ್ ಆಗಿದೆ.
ಯುದ್ಧಕಾಂಡ ಸಿನಿಮಾಗಾಗಿ ಪ್ರೀತಿಯ BMW ಮಾರಿದ ಅಜಯ್ ರಾವ್, ಕಾರ್‌ನ ಮುಂದೆ ನಿಂತು ಬಿಕ್ಕಳಿಸಿ ಅತ್ತ ಮಗಳು ಚೆರಿಷ್ಮಾ!
ನಟ ಅಜಯ್ ರಾವ್ ಅಭಿನಯದ ಯುದ್ಧಕಾಂಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ BMW ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರ್ ಬಿಟ್ಟುಕೊಡಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿಈ ಸಲ ಕಪ್ ಆರ್‌ಸಿಬಿದೇ; ಬೆಂಗಳೂರು ಆರ್ಭಟ ನೋಡಿ ಉಲ್ಟಾ ಹೊಡೆದ ರಾಯುಡು!
ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಟಿ ರಾಯುಡು ಆರ್‌ಸಿಬಿ ಈ ಬಾರಿ ಐಪಿಎಲ್ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಪೂರ್ತಿ ಓದಿಉದ್ವಿಘ್ನತೆ ನಡುವೆ ಕೊನೆಗೂ ಅಮೆರಿಕ ಇರಾನ್ ಪರಮಾಣು ಮಾತುಕತೆ, ಮಹತ್ವದ ಘೋಷಣೆ
ಅಮೆರಿಕ ಹಾಗೂ ಇರಾನ್ ನಡುವಿನ ವೈಮನಸ್ಸು ಹೆಚ್ಚಾಗುತ್ತಿದ್ದಂತೆ ಹಲವು ಸುತ್ತಿನ ಮಾತುಕಗಳು ಮುರಿದು ಬಿದ್ದಿತ್ತು. ಹೀಗಾಗಿ ಪರಮಾಣು ಆತಂಕ, ಯುದ್ಧ ಭೀತಿ ಹೆಚ್ಚಾಗಿತ್ತು. ಇದೀಗ ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮಾತುಕತೆಗೆ ಒಪ್ಪಿದೆ.
ಪೂರ್ತಿ ಓದಿಅಮೆರಿಕ ಏರ್ಪೋರ್ಟ್‌ನಲ್ಲಿ ಭಾರತೀಯ ಮಹಿಳಾ ಉದ್ಯಮಿಗೆ ಅಧಿಕಾರಿಗಳ ಕಿರುಕುಳ 8 ಗಂಟೆ ಬಂಧನ! ಕಾರಣ ಇದು
ಭಾರತೀಯ ಉದ್ಯಮಿ ಶ್ರುತಿ ಚತುರ್ವೇದಿ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ 8 ಗಂಟೆಗಳ ಕಾಲ ಬಂಧಿಸಿ ಅವಮಾನಿಸಲಾಗಿದೆ. ಪವರ್ ಬ್ಯಾಂಕ್ ನೆಪದಲ್ಲಿ ಎಫ್‌ಬಿಐ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೂರ್ತಿ ಓದಿನನ್ನ ತಂಗಿಯದ್ದು ಆತ್ಮಹತ್ಯೆಯಲ್ಲ, ಕೊಲೆ: ಬಾಹರ್ ಆಸ್ಮಾ ಸಹೋದರಿ ಸಂಕಟ!
ಬೆಂಗಳೂರಿನಲ್ಲಿ ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ, ಪತಿ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದನೆಂದು ಹೇಳಿದ್ದಾರೆ.
ಪೂರ್ತಿ ಓದಿ