ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಸಸ್ಯಾಹಾರಿ ಬಿರಿಯಾನಿಯಲ್ಲಿ ಚಿಕನ್ ಬಂದಿದೆ. ಬ್ರಾಹ್ಮಣ ಮಹಿಳೆ ಛಾಯಾ ಶರ್ಮಾ ತಿಂದ ನಂತರ ಇದು ಮಾಂಸಾಹಾರಿ ಎಂದು ತಿಳಿದುಬಂದಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಅವರು ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರೆಸ್ಟೋರೆಂಟ್‌ನಿಂದ ಮಾದರಿಗಳನ್ನು ಪಡೆದು, ತನಿಖೆ ಮುಗಿಯುವವರೆಗೆ ಸೀಲ್ ಮಾಡಲಾಗಿದೆ.

ಆನ್​ಲೈನ್​ನಲ್ಲಿ ಮಾಡಿರುವ ಆರ್ಡರ್​ಗಳಲ್ಲಿ ಎಡವಟ್ಟಾಗುವುದು ಸಾಕಷ್ಟು ಇದೆ. ಆದರೆ ಇದೀಗ ತೀರಾ ಧಾರ್ಮಿಕ ಭಾವನೆಗೆ ಕುಂದು ಬರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಇಲ್ಲಿಯ ಬಿಸ್ರಾಖ್ ಪೊಲೀಸ್ ಠಾಣೆ ಪ್ರದೇಶದ ಬ್ರಾಹ್ಮಣ ಮಹಿಳೆಯೊಬ್ಬರು ಹಬ್ಬದಂದು ನಾನ್​ವೆಜ್​ ತಿನಿಸಿರುವ ಘಟನೆ ನಡೆದಿದೆ. ಸ್ವಿಗ್ಗಿಯಲ್ಲಿ ಆಗಿರುವ ಎಡವಟ್ಟು ಇದಾಗಿದ್ದು, ಇದರ ಬಗ್ಗೆ ಮಹಿಳೆ ಸಿಡಿದೆದ್ದಿದ್ದಾರೆ. ಛಾಯಾ ಶರ್ಮಾ ಎನ್ನುವವರು ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 
ಏಪ್ರಿಲ್ 4 ರಂದು ಈ ಘಟನೆ ನಡೆದಿದೆ. ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ 'ಸಸ್ಯಾಹಾರಿ ಬಿರಿಯಾನಿ' ಆರ್ಡರ್ ಮಾಡಿದ್ದೆ. ಆದರೆ ಚಿಕನ್​ ಬಿರಿಯಾನಿ ಬಂದಿದೆ. ಇದರ ಅರಿವು ಇಲ್ಲದೇ ಅದನ್ನು ತಿಂದೆ. ನಾಲ್ಕಾರು ತುತ್ತು ತಿಂದಾಗ ಅದು ನಾನ್​ವೆಜ್​ ಎಂದು ತಿಳಿಯಿತು ಎಂದು ಬರೆದಿಕೊಂಡಿದ್ದಾರೆ. ಸ್ವಿಗ್ಗಿ ಆ್ಯಪ್ ಮೂಲಕ ಲಖನೌ ಕಬಾಬ್ ಪರಂತ ರೆಸ್ಟೋರೆಂಟ್‌ನಿಂದ ಸಸ್ಯಾಹಾರಿ ಬಿರಿಯಾನಿ ಆರ್ಡರ್ ಮಾಡಿದ್ದಾಗಿ ಛಾಯಾ ಶರ್ಮಾ ಹೇಳಿದ್ದಾರೆ. ಆದರೆ ಬಿರಿಯಾನಿ ಪ್ಯಾಕೆಟ್ ಪಡೆದಾಗ ಅದು ಮಾಂಸಾಹಾರಿ ಅಂದರೆ ಚಿಕನ್ ಬಿರಿಯಾನಿಯಾಗಿತ್ತು. ಆದರೆ ಬಿರಿಯಾನಿ ತಿಂದಾಗ ನನಗೆ ಅದು ತಿಳಿಯಿತು. ಅನುಮಾನ ಬಂದು ತನಿಖೆ ನಡೆಸಿದಾಗ, ಅದು ಚಿಕನ್​ ಬಿರಿಯಾನಿ ಎಂದು ತಿಳಿಯಿತು ಎಂದಿದ್ದಾರೆ.

ಭಾರತದ ಈ ಗ್ರಾಮದ ಜನರಿಗೆ ಹೆಸ್ರೇ ಇಲ್ಲ! ಹಾಡು, ಶಿಳ್ಳೆಗಳಿಂದಲೇ ಸಂವಹನ... ವಿಚಿತ್ರ ಊರಿನ ವಿಡಿಯೋ ನೋಡಿ...

ತಾವು ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದು, ಸ್ವಿಗ್ಗಿಯಿಂದ ಆಗಿರುವ ಈ ಎಡವಟ್ಟಿನಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದಿದ್ದಾರೆ. ಈ ಘಟನೆಯ ವಿಡಿಯೋವನ್ನು ಛಾಯಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ, ನಂತರ ಪೊಲೀಸರು ಸಂಬಂಧಪಟ್ಟ ರೆಸ್ಟೋರೆಂಟ್‌ನ ಉದ್ಯೋಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ರಾರಂಭಿಸಿದರು. ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ (ಡಿಸಿಪಿ-ಸೆಂಟ್ರಲ್ ನೋಯ್ಡಾ) ಶಕ್ತಿ ಮೋಹನ್ ಅವಸ್ಥಿ, ಪೊಲೀಸರು ಈ ವಿಷಯವನ್ನು ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ರೆಸ್ಟೋರೆಂಟ್ ಮಾಲೀಕ ರಾಹುಲ್ ಅವರು ಪ್ರಸ್ತುತ ಡೆಹ್ರಾಡೂನ್‌ನಲ್ಲಿದ್ದಾರೆ ಎಂದು ಹೇಳಿದರು. ಇಲ್ಲಿ ಮಾಂಸಾಹಾರಿ ಬಿರಿಯಾನಿ (ಚಿಕನ್ ಬಿರಿಯಾನಿ) ಮಾತ್ರ ತಯಾರಿಸಲಾಗುತ್ತದೆ. ಸಸ್ಯಾಹಾರಿ ಬಿರಿಯಾನಿ ಮಾಡುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಈ ತಪ್ಪು ಹೇಗೆ ಸಂಭವಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಈ ವಿಷಯ ವೈರಲ್ ಆದ ನಂತರ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ತಂಡವೂ ರೆಸ್ಟೋರೆಂಟ್‌ಗೆ ತಲುಪಿತು. ಆಹಾರ ಸುರಕ್ಷತಾ ಅಧಿಕಾರಿ ಡಾ. ಓಂಪಾಲ್ ಸಿಂಗ್ ಅವರು ರೆಸ್ಟೋರೆಂಟ್‌ನಿಂದ ಮಾದರಿಗಳನ್ನು ತೆಗೆದುಕೊಂಡು ತನಿಖೆ ಪೂರ್ಣಗೊಳ್ಳುವವರೆಗೆ ರೆಸ್ಟೋರೆಂಟ್‌ಗೆ ಸೀಲ್ ಹಾಕಿದರು. ಈ ಸಂಬಂಧ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇದು ತಪ್ಪೋ ಅಥವಾ ಇನ್ನೇನೋ ಎಂದು ಪೊಲೀಸರು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯು ಆನ್‌ಲೈನ್ ಆಹಾರ ವಿತರಣಾ ಸೇವೆಗಳನ್ನು ಬಳಸುವವರಿಗೆ, ವಿಶೇಷವಾಗಿ ಧಾರ್ಮಿಕ ಮತ್ತು ಆಹಾರದ ಭಾವನೆಗಳಿಗೆ ಬಂದಾಗ ಒಂದು ಎಚ್ಚರಿಕೆಯಾಗಿದೆ. ಇದೇ ವೇಳೆ ಕುಳಿತಲ್ಲಿಯೇ ಆಹಾರಗಳನ್ನು ತರಿಸಿಕೊಂಡು ತರುವವರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ. ಅದರಲ್ಲಿಯೂ ಹಬ್ಬದ ದಿನಗಳಲ್ಲಿಯೂ ಆನ್​ಲೈನ್​ ಮೂಲಕ ಆಹಾರ ತರಿಸಿಕೊಂಡಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗುತ್ತಿವೆ.

ಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆವ ಸಾತ್ವಿಕ ಕೋಳಿಯಿದು! ಕೆ.ಜಿ ಚಿಕನ್​ಗೆ 11 ಸಾವಿರ ರೂ...