ಬೆಂಗಳೂರಿನಲ್ಲಿ ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ, ಪತಿ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದನೆಂದು ಹೇಳಿದ್ದಾರೆ.

ಬೆಂಗಳೂರು (ಏ.8): ಬೇರೆ ಯುವತಿಯರ ಜೊತೆ ಪತಿ ಅನೈತಿಕ ಸಂಬಂಧ ಹೊಂದಿದ್ದರಿಂದ ಮನನೊಂದು ಹೆಬ್ಬಾಳದ ಕನಕನಗರದಲ್ಲಿ29 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ವರ್ಷದ ಹಿಂದೆ ಬಾಹರ್‌ ಆಸ್ಮಾ ನೇಣಿಗೆ ಶರಣಾಗಿದ್ದಾಳೆ. ಎರಡು ವರ್ಷಗಳ ಹಿಂದೆ ಬಾಹರ್ ಅಸ್ಮಾ, ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆದರೆ ಪತಿ ಬಶೀರ್ ವುಲ್ಲಾ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಬೇಸರಗೊಂಡ ಪತ್ನಿ ಬಾಹರ್ ಅಸ್ಮಾ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಬಾಹರ್‌ ಆಸ್ಮಾ ಸಹೋದರಿ ಅಮೀನಾ, 'ನನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಡಬಲ್ ಡಿಗ್ರಿ ಮಾಡಿ 50 ಸಾವಿರ ಸಂಬಳ ಪಡೆಯುತ್ತಿದ್ದಳು. ಮಿನಿಸ್ಟರ್ ಜಮೀರ್ ಗೂ ಸಹ ನನ್ನ ಸಹೋದರಿ ಗೊತ್ತಿದೆ. ವಿದ್ಯಾವಂತಳಾದ ಆಕೆಯನ್ನು ಪತಿಯೇ ಕೊಲೆ ಮಾಡಿದ್ದಾನೆ' ಎಂದು ಆರೋಪ ಮಾಡಿದ್ದಾರೆ.

'ಕಳೆದ ಎರಡು ವರ್ಷದ ಹಿಂದೆ ಹುಡುಕಿ ಮದುವೆ ಮಾಡಲಾಗಿತ್ತು. ಆತ ದೆಹಲಿಯ ಖಾಸಗಿ ಏರ್‌ಲೈನ್ಸ್‌ವೊಂದರಲ್ಲಿ ಕೆಲಸ ಮಾಡುತಿದ್ದ. ಅಲ್ಲಿ ಟ್ರೈನಿಂಗ್ ಬರುವವರ ಜೊತೆ ಲಿವಿಂಗ್ ರಿಲೇಷನ್‌ಷಿಪ್‌ನಲ್ಲಿದ್ದರು. ಅಲ್ಲಿನ ಮೂರು ಹುಡುಗಿರ ಜೊತೆ ಸಂಬಂಧ ಇತ್ತು. ಮದುವೆಯಾದ ಎರಡು ತಿಂಗಳಿಗೆ ದೆಹಲಿಗೆ ಹೋಗಿ ಬಿಟ್ಟಿದ್ದ. ಅದಾದ ಬಳಿಕ ಆತ ವಾಪಾಸ್ ಬಂದಿರಲಿಲ್ಲ' ಎಂದು ದೂರಿದ್ದಾರೆ.

ಇದರಿಂದ ತಂಗಿಯೂ ಸಹ ದೆಹಲಿಗೆ ತೆರಳಿ ಗಂಡನ ಜೊತೆ ಇದ್ದರು. ಆಗ ಆತನ ಲ್ಯಾಪ್ ಟಾಪ್ ನಲ್ಲಿ ಗಂಡನ ಜೊತೆ ಬೇರೆ ಸಂಬಂಧಗಳ ಫೋಟೊ ಇತ್ತು. ಇದನ್ನು ನೋಡಿ ಪ್ರಶ್ನಿಸಿದಾಗ ಅದೆಲ್ಲವೂ ಈಗ ಇಲ್ಲ ಬದಲಾಗುತ್ತೇನೆ ಎಂದು ಹೇಳಿದ್ದ. ಅದಾದ ಬಳಿಕ ಸಹ ಹಳೇ ಚಾಳಿ ಮುಂದುವರೆಸಿದ್ದನ್ನು ನೋಡಿ ನಮಗೆ ತಿಳಿಸಿದ್ದಳು. ನಾವು ಕೇಳಿದಾಗ ನಮ್ಮ ಕ್ಷಮೆ ಕೇಳಿ ಇನ್ನು ಮುಂದೆ ಹಾಗೆ ಮಾಡಲ್ಲ ಎಂದಿದ್ದ. ಆದರೇ ನಿನ್ನೆ ಗಲಾಟೆ ಮಾಡಿದ್ದಾರೆ. ಮನೆಯ ವಸ್ತುಗಳೆಲ್ಲವನ್ನೂ ಎಸೆದು ಹೋಗಿದ್ದಾನೆ. ಆ ಮೇಲೆ ಅಪ್ಪ ಮನೆಗೆ ಹೊದಾಗ ತಂಗಿ ಮೃತಪಟ್ಟಿರೋದು ಗೊತ್ತಾಗಿದೆ. ಗಂಡನೇ ಕೊಲೆ ಮಾಡಿ ತಾನೇ ಠಾಣೆಗೆ ಹೊಗಿ ನಾಟಕವಾಡಿದ್ದಾನೆ. ನನ್ನ ತಂಗಿ ಡಬಲ್ ಡಿಗ್ರಿ ಮಾಡಿದ್ದಾಳೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅಕ್ರಮ ಸಂಬಂಧಕ್ಕಾಗಿ ಗಂಡನೇ ಕೊಲೆ ಮಾಡಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ಪತ್ನಿ ಪರಮಸುಂದರಿಯಾಗಿದ್ದರೂ, ಪರ ಯುವತಿಯೊಂದಿಗೆ ಗಂಡನ ಸಲ್ಲಾಪ; ಪ್ರಾಣ ಬಿಟ್ಟ ಹೆಂಡತಿ!

ಬಾಹರ್ ಅಸ್ಮಾ ತಂದೆ ಜಮೀರ್ ಬುರ್ಹಾನ್ ಕೂಡ ಮಾತನಾಡಿದ್ದು, 'ಖಾಸಗಿ ಏರ್ಲೈನ್ಸ್‌ನಲ್ಲಿ ಬಶೀರ್‌ವುಲ್ಲಾ ಕೆಲಸ ಮಾಡುತ್ತಿದ್ದ.ತಿಂಗಳಿಗೆ 80 ಸಾವಿರ ಸಂಬಳ ಪಡೀತಿದ್ದ.ಆದರೆ, ಒಂದು ರೂಪಾಯಿ ಮನೆಗೆ ಖರ್ಚು ಮಾಡುತ್ತಿರಲಿಲ್ಲ. ಹಣ ಎಲ್ಲಿ ಅಂದ್ರೆ ಸಾಕು ಮನೆಯಲ್ಲಿಗಲಾಟೆ ಮಾಡುತಿದ್ದ. ನಾವೆಲ್ಲಾ ತುಂಬಾ ಸಲ ವಾರ್ನ್ ಮಾಡಿದ್ದೆವು. ಆದರೂ ಆತ ಬುದ್ದಿ ಕಲೀಲಿಲ್ಲ. ಆತನಿಗೆ ಶಿಕ್ಷೆ ಆಗಬೇಕು. ನನ್ನ ಮಗಳನ್ನ ಸಂತೋಷವಾಗಿ ನೋಡಿಕೊಳ್ಳುತ್ತಿರಲಿಲ್ಲ. ಬೇರೆ ಯಾವ ಹೆಣ್ಮಕ್ಕಳಿಗೂ ಈತರ ಆಗಬಾರದು ಎಂದು ಕಣ್ಣೀರು ಹಾಕಿದ್ದಾರೆ.

ಬೆಂಗಳೂರಿನ ಬಾಲಕಿ ಮೇಲೆ ಬ್ಯಾಡ್ಮಿಂಟನ್‌ ಟ್ರೈನರ್‌ ರೇಪ್‌! ಐದಾರು ಬಾಲಕಿಯರ ನಗ್ನ ವಿಡಿಯೋ ಸಂಗ್ರಹ