ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ, ಐಪಿಎಲ್‌ನಲ್ಲಿ 4 ಪಂದ್ಯಗಳಲ್ಲಿ 3 ಗೆದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈನಲ್ಲಿ ಗೆಲುವು ಸಾಧಿಸಿದ್ದು ತಂಡದ ವಿಶ್ವಾಸ ಹೆಚ್ಚಿಸಿದೆ. ಟೂರ್ನಿ ಆರಂಭದಲ್ಲಿ ಆರ್‌ಸಿಬಿಯನ್ನು ಟ್ರೋಲ್ ಮಾಡಿದ್ದ ಸಿಎಸ್‌ಕೆ ಮಾಜಿ ಆಟಗಾರ ಅಂಬಟಿ ರಾಯುಡು, ಈ ಬಾರಿ ಆರ್‌ಸಿಬಿ ಐಪಿಎಲ್ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆರ್‌ಸಿಬಿ ಮುಂದಿನ ಪಂದ್ಯವನ್ನು ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.
ಮುಂಬೈ: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ಹುರುಪಿನೊಂದಿಗೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಆಡಿದ 4 ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಒಂದು ಸೋಲಿನೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ.
ಕಳೆದೊಂದು ದಶಕದಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಆರ್‌ಸಿಬಿ ತಂಡವು ಗೆಲುವು ದಾಖಲಿಸಲು ಪರದಾಡುತ್ತಾ ಬಂದಿತ್ತು. ಆದರೆ ಮುಂಬೈ ಇಂಡಿಯನ್ಸ್ ಎದುರು ಆರ್‌ಸಿಬಿ ತಂಡವು ವಾಂಖೆಡೆ ಮೈದಾನದಲ್ಲಿ 12 ರನ್ ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತಿದೆ. ಇನ್ನು ಇದೆಲ್ಲದರ ನಡುವೆ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಇದೀಗ ಉಲ್ಟಾ ಹೊಡೆದಿದ್ದಾರೆ.
ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಯಾವ ಭಾರತೀಯನೂ ಮಾಡದ ಸಾಧನೆ ಈಗ ವಿರಾಟ್ ಪಾಲು!
ಆರ್‌ಸಿಬಿ-ಸಿಎಸ್‌ಕೆ ನಡುವಿನ ಪಂದ್ಯಕ್ಕೂ ಮೊದಲು ಬೆಂಗಳೂರು ತಂಡವನ್ನು ಸಿಎಸ್‌ಕೆ ಮಾಜಿ ಕ್ರಿಕೆಟಿಗರು ಕಾಲೆಳೆದಿದ್ದರು, ಯೂಟ್ಯೂಬ್ ಚಾನೆಲ್‌ನಲ್ಲಿ ಎಸ್ ಭದ್ರಿನಾಥ್ ಈ ಸಲನಾದ್ರೂ ಆರ್‌ಸಿಬಿ ಕಪ್ ಗೆಲ್ಲುತ್ತಾ ಎಂದು ರಾಯುಡರನ್ನು ಪ್ರಶ್ನಿಸಿದ್ರು, ಆಗ ರಾಯುಡು, ಆರ್‌ಸಿಬಿ ಕಪ್ ಗೆಲ್ಲುವುದಕ್ಕೆ ಮಾಡುವ ಹೋರಾಟವನ್ನು ಎಂಜಾಯ್ ಮಾಡುತ್ತೇನೆ. ಅವರು ಕಪ್ ಗೆಲ್ಲಲಿ ಎಂದು ಬಯಸುತ್ತೇನೆ, ಆದ್ರೇ ಈ ವರ್ಷ ಗೆಲ್ಲೋದು ಬೇಡ, ಈ ವರ್ಷ ಸಿಎಸ್‌ಕೆ ಕಪ್ ಗೆಲ್ಲಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದರು.
ಇದೀಗ ESPNcricinfo ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯುಡು, ಆರ್‌ಸಿಬಿ ಈಗಿನ ತಂಡವನ್ನು ಗಮನಿಸಿದ್ರೆ, ಕಾಂಬಿನೇಷನ್ ಸೆಟ್ ಆದಂತೆ ಕಾಣುತ್ತಿದೆ. ಈಗಲೇ ಆರ್ಸಿಬಿ ಬಗ್ಗೆ ಏನೂ ಹೇಳೋಕೆ ಆಗಲ್ಲ, ಆದ್ರೆ ನನಗನಿಸುತ್ತೆ ಈ ಸಲ ಆರ್‌ಸಿಬಿ ಐಪಿಎಲ್ ಗೆಲ್ಲುತ್ತೆ. ಈ ಸಲ ಕಪ್ ಆರ್‌ಸಿಬಿದೇ ಎಂದು ರಾಯುಡು ಹೇಳಿದ್ದಾರೆ.
IPL 2025 ಮುಂಬೈನಲ್ಲಿ ಹೊಸ ಇತಿಹಾಸ ನಿರ್ಮಿಸಲು ರೆಡಿಯಾದ ಆರ್‌ಸಿಬಿ! ಇದು ಸಾಧ್ಯನಾ?
ಆರ್‌ಸಿಬಿ ತಂಡವು ಇದೀಗ ಏಪ್ರಿಲ್ 10ರಂದು ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ತಂಡವು ತವರಿನಾಚೆ ಮೂರು ಪಂದ್ಯ ಗೆದ್ದಿದ್ದು ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಿದೆ.
