ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ ಕೋಣೆಗೆ ಕರೆಸುತ್ತಿದ್ದ. ಹಲವು ವಿಡಿಯೋಗಳು ಬಹಿರಂಗವಾಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಲಖನೌ(ಏ.08) ಕಾಲೇಜು ಉಪನ್ಯಾಸಕನ ಅಸಲಿ ಬುದ್ದಿ ಬಯಲಾಗಿದೆ. ಪ್ರತಿ ದಿನ ಒಬ್ಬೊಬ್ಬ ವಿದ್ಯಾರ್ಥಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಈತ, ಕೋಣೆಗೆ ಕರೆಸುತ್ತಿದ್ದ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಹಲವು ಅಪ್ರಾಪ್ತ ವಿದ್ಯಾರ್ಥಿನಿಯರು ಈತನ ವ್ಯಾಘ್ರ ನಡೆಗೆ ಮರುಗಿದ್ದಾರೆ, ನರಳಿದ್ದಾರೆ. ಈತನೆ ವಿಡಿಯೋ ರೆಕಾರ್ಡ್ ಮಾಡಿ ಹಲವರು ವಿದ್ಯಾರ್ಥಿಯನ್ನು ಬೆದರಿಸಿ ಬಾಯಿ ಮುಚ್ಚಿಸಿದ್ದಾನೆ. ಆದರೆ ರಹಸ್ಯ ವಿಡಿಯೋಗಳು ಸೋಶಿಯಲ್ ಮೀಡಿಯಾ ಮೂಲಕ ಹೊರಬಿದ್ದಿದೆ. ಪರಿಣಾಮ ಪೋಷಕರು ಕಾಲೇಜಿಗೆ ಆಗಮಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಉಪನ್ಯಾಸಕನ ಬಂಧಿಸಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಮಲೌದಿ ಕೃಶಕ್ ಇಂಟರ್ ಕಾಲೇಜಿನ ಉಪನ್ಯಾಸ ಮೈನುದ್ದೀನ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಭಾಗದಲ್ಲಿ ಪ್ರಮುಖ ಹಾಗೂ ಏಕೈಕ ಕಾಲೇಜು ಆಗಿರುವ ಕಾರಣ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿದ್ದಾರೆ. ಇದೀಗ ಈ ಮೈನುದ್ದಿನ್ ಅನ್ಸಾರಿ ವಿರುದ್ದ ಹಲವು ಆರೋಪ ಕೇಳಿಬಂದಿದೆ. ಈತ ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಬಳಸಿಕೊಳ್ಳುತ್ತಿದ್ದ ಎಂದು ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ.

ಬೆಂಗಳೂರಿನ ಅತ್ಯಂತ ದುಬಾರಿ ಮುತ್ತು; ಒಂದು ಕಿಸ್ಸಿಗೆ 50 ಸಾವಿರ ರೂ. ಚಾರ್ಜ್ ಮಾಡುವ ಕಿಸ್ಸಿಂಗ್ ಟೀಚರ್!

ಕಾಲೇಜಿನಲ್ಲಿ ಶಿಕ್ಷಕನಾಗಿರುವ ಮೈನುದ್ದೀನ್ ಅನ್ಸಾರಿ ವಿದ್ಯಾರ್ಥಿಗಳಿಗೆ ಪಾಠ ಬಿಟ್ಟು ಉಳಿದಿದ್ದೆಲ್ಲವನ್ನು ಮಾಡುತ್ತಿದ್ದ. ಈತ ಪ್ರತಿ ದಿನ ಒಬ್ಬೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುತ್ತಿದ್ದ. ಉಪನ್ಯಾಸಕನಾಗಿದ್ದ ಕಾರಣ ವಿದ್ಯಾರ್ಥಿನಿಯರು ಹೊರಗಡೆ ಹೇಳಲು ಆಗದೆ, ಆತನ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಆಗದೆ ನರಳಿದ್ದಾರೆ. ಈತನ ಅಸಲಿ ತರಗತಿ ಪಾಠದ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯ ಮೂಲಕ ಹೊರಬಂದಿದೆ. 

ಈ ವಿಡಿಯೋಗಳು ಖುಷಿನಗರ ಜಿಲ್ಲೆಯಲ್ಲಿ ಹರಿದಾಡಿದೆ. ವಿದ್ಯಾರ್ಥಿನಿಗಳ ಪೋಷಕರು ಈ ವಿಡಿಯೋ ನೋಡಿ ಆತಂಕಗೊಂಡಿದ್ದಾರೆ. ನೇರವಾಗಿ ಕಾಲೇಜು ಬಳಿ ಜಮಾಯಿಸಿದ್ದಾರೆ. ಕಾಲೇಜು ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಆರೋಪಿ ಉಪನ್ಯಾಸಕ ಪರಾರಿಯಾಗಿದ್ದಾನೆ. ಕಾಲೇಜು ಮುಂದೆ ಪೋಷಕರು ಪ್ರತಿಭಟನೆಗೆ ಹಲವು ಹಿಂದೂಪರ ಸಂಘಟನೆಗಳು ಸಾಥ್ ನೀಡಿದೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರೆ. ಇದೇ ವೇಳೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪ್ರತಿಭಟನಕಾರರಿಗೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. 

Scroll to load tweet…

ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದೀಗ ಕಾಲೇಜಿನ ಎಲ್ಲಾ ಶಿಕ್ಷಕ ಹಾಗೂ ಇತರ ಸಿಬ್ಬಂದಿಗಳ ಕರೆಯಿಸಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಹಿಂದೂ ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳನ್ನು ಬೇರೆ ಕಾಲೇಜಿಗೆ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಾರೆ.