ಮೇಘಾಲಯದ ಕಾಂಗ್‌ಥಾಂಗ್ ಗ್ರಾಮದಲ್ಲಿ ವಿಶಿಷ್ಟ ಸಂಸ್ಕೃತಿಯಿದೆ. ಇಲ್ಲಿನ ಜನರು ಹೆಸರಿಗಿಂತ ಹೆಚ್ಚಾಗಿ ಹಾಡು, ಶಿಳ್ಳೆಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಇದನ್ನು "ಜಿಂಗ್ರವೈ ಲಾಬೆಯ್" ಎನ್ನುತ್ತಾರೆ. ಅರಣ್ಯದಲ್ಲಿರುವಾಗ ಪ್ರಕೃತಿಯ ಶಬ್ದಗಳಿಂದ ಪ್ರೇರಿತವಾದ ಸಂಗೀತದ ಧ್ವನಿಯನ್ನು ಹೊರಡಿಸುತ್ತಾರೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಖಾಸಿ ಬುಡಕಟ್ಟು ಜನಾಂಗದವರು ಪೊರಕೆ ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಈ ಪದ್ಧತಿ ಐದು ಶತಮಾನಗಳಿಂದ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ.
ಭಾರತದ ವೈವಿಧ್ಯತೆಯ ತವರು ಎನ್ನುವ ಮಾತಿದೆ. ಇಲ್ಲಿರುವ ಆಚಾರ, ವಿಚಾರ, ಸಂಪ್ರದಾಯಗಳು ಪ್ರತಿ ಕ್ಷೇತ್ರಕ್ಕೂ ಬದಲಾಗುತ್ತದೆ. ಅದರಲ್ಲಿಯೂ ಗ್ರಾಮೀಣ ಭಾಗಗಳಲ್ಲಿನ ಸಂಸ್ಕೃತಿಗಳು, ಆಚರಣೆಗಳು ಕುತೂಹಲವು, ಕೆಲವೊಂದು ಸಲ ವಿಚಿತ್ರವೂ ಎನ್ನಿಸುವುದು ಉಂಟು. ಅಂಥದ್ದೇ ಒಂದು ವಿಚಿತ್ರ ಕಥೆ ಇದು. ಮೇಘಾಲಯದ ಹಚ್ಚ ಹಸಿರಿನ ಬೆಟ್ಟಗಳಲ್ಲಿ, ಕಾಂಗ್‌ಥಾಂಗ್ ಮತ್ತು ಇತರ ಕೆಲವು ಹಳ್ಳಿಗಳ ಹೆಚ್ಚಿನ ಜನರಿಗೆ ಹೆಸರೇ ಇಲ್ಲ. ಕೆಲವರಿಗೆ ಹೆಸರು ಇಟ್ಟಿದ್ದರೂ ಅದನ್ನು ಕರೆಯುವುದಿಲ್ಲ. ಬದಲಿಗೆ ಕುಕುಕುಕು ಎಂದೋ ಎನ್ನೇನೋ ವಿಚಿತ್ರ ಸೌಂಡ್ ಮಾಡಿ, ಹಾಡಿನ ರೀತಿಯೋ, ಶಿಳ್ಳೆಗಳ ರೀತಿಯೋ ಹಾಡಿ ಜನರು ಪರಸ್ಪರ ಸಂವಹನ ನಡೆಸುತ್ತಾರೆ. ಇಲ್ಲಿ ಹೋದರೆ, ಕುತೂಹಲಕಾರಿ ಶಿಳ್ಳೆಗಳು ಮತ್ತು ಚಿಲಿಪಿಲಿಗಳು ಪ್ರತಿಧ್ವನಿಸುತ್ತವೆ, ಆದರೆ ಇದು ಪಕ್ಷಿಗಳ ಹಾಡಲ್ಲ. ಬದಲಿಗೆ ಜನರು ಹೀಗೆ ಒಬ್ಬರನ್ನೊಬ್ಬರು ಕರೆಯುತ್ತಲೇ ಇರುವ ಕಾರಣ!
ಈ ಹಳ್ಳಿಯನ್ನು ಹೊಕ್ಕರೆ ಒಂದು ಕಡೆ ತಾಯಿ ತನ್ನ ಮಗನನ್ನು ಊಟಕ್ಕೆ ಮನೆಗೆ ಬರಲು ಕರೆಯುತ್ತಿರುತ್ತಾಳೆ, ಮತ್ತೊಂದೆಡೆ ಮಕ್ಕಳು ಆಟವಾಡುತ್ತಾರೆ ಮತ್ತು ಇನ್ನೊಂದು ತುದಿಯಲ್ಲಿ ಸ್ನೇಹಿತರು ಹರಟೆ ಹೊಡೆಯುತ್ತಿರುತ್ತಾರೆ. ಆದರೆ ಇಲ್ಲಿ ಕೂಡ ಮಾತಿಗಿಂತಲೂ ಹೆಚ್ಚಾಗಿ ಸಂಗೀತದ ದನಿಗಳೇ ಕೇಳಿಬರುತ್ತವೆ. ಕೆಲವರಿಗೆ ಹೆಸರು ಇಟ್ಟಿದ್ದರೂ ಅದನ್ನು ಬಳಸುವುದೇ ಇಲ್ಲ. ಒಂದು ವೇಳೆ ಒಬ್ಬರ ಮೇಲೊಬ್ಬರಿಗೆ ಕೋಪ ಬಂದರೆ, ಉದಾಹರಣೆಗೆ ತಾಯಿಗೆ ಮಕ್ಕಳ ಮೇಲೆ ಅಥವಾ ಅಣ್ಣ-ತಮ್ಮಂದಿರು ಜಗಳವಾಡುವಾಗ ಹೆಸರು ಇರುವ ವ್ಯಕ್ತಿಗಳು ಆ ಹೆಸರುಗಳಿಂದ ಕರೆಯುವುದು ಉಂಟು. ಆದರೆ ಇದು ತೀರಾ ಅಪರೂಪ ಎನ್ನುತ್ತಾರೆ ಇಲ್ಲಿಯ ಜನರು. ಅಷ್ಟಕ್ಕೂ ಕಾಂಗ್‌ಥಾಂಗ್ ಬಹಳ ಹಿಂದಿನಿಂದಲೂ ಪ್ರಪಂಚದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ, ಹತ್ತಿರದ ಪಟ್ಟಣದಿಂದ ಹಲವಾರು ಗಂಟೆಗಳ ಕಠಿಣ ಪ್ರಯಾಣ ಮಾಡಿ ಇಲ್ಲಿಗೆ ತಲುಪಬೇಕು. ಈ ಜನರು ಕರೆಂಟ್ ನೋಡಿದ್ದೇ 2000ನೇ ಸಾಲಿನಲ್ಲಿ. ಕಾಡಿನ ಜಾಗದಲ್ಲಿ ಮಣ್ಣಿನ ರಸ್ತೆ ಬಂದದ್ದು 2013 ರಲ್ಲಿ. ಇಲ್ಲಿಯ ಜನರು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಖಾಸಿ ಬುಡಕಟ್ಟು ಜನಾಂಗದವರು. ಪೊರಕೆ ಮಾರಿ ಜೀವನ ಸಾಗಿಸುತ್ತಾರೆ. ಪೊರಕೆ ಹುಲ್ಲಿಗಾಗಿ ಕಾಡಿನಲ್ಲಿ ದಿನ ಕಳೆಯುವುದೇ ಇವರ ಕಾಯಕ. ಇದೇ ಅವರ ಕಸುಬು ಕೂಡ.
ಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆವ ಸಾತ್ವಿಕ ಕೋಳಿಯಿದು! ಕೆ.ಜಿ ಚಿಕನ್ಗೆ 11 ಸಾವಿರ ರೂ...
ಕಾಡಿನಲ್ಲಿದ್ದಾಗ ಪರಸ್ಪರ ಕರೆಯಲು, ಗ್ರಾಮಸ್ಥರು ಸಂಗೀತದ ದನಿಯನ್ನು ಹೊರಡಿಸುತ್ತಾರೆ. ಸುಮಾರು 30 ಸೆಕೆಂಡುಗಳ ಕಾಲ ಇದು ಇದುತ್ತದೆ. ಕಾಡಿನ ಮನುಷ್ಯರಾಗಿರುವ ಅರಣ ಪ್ರಕೃತಿಯ ಜೊತೆ ಬೆರೆತಿರುವ ಹಿನ್ನೆಲೆಯಲ್ಲಿ, ಇವರು ಕೂಗುವ ಹೆಸರುಗಳು ಕೂಡ ಸುತ್ತಮುತ್ತಲಿನ ಪ್ರಕೃತಿಯ ಶಬ್ದಗಳಿಂದ ಪ್ರೇರಿತವಾಗಿದೆ. "ನಾವು ದೂರದ ಹಳ್ಳಿಗಳಲ್ಲಿ ವಾಸಿಸುತ್ತಿದ್ದೇವೆ, ನಾವು ದಟ್ಟವಾದ ಕಾಡಿನಿಂದ, ಬೆಟ್ಟಗಳಿಂದ ಸುತ್ತುವರೆದಿದ್ದೇವೆ. ಆದ್ದರಿಂದ ನಾವು ಪ್ರಕೃತಿಯೊಂದಿಗೆ ಸಂಪರ್ಕದಲ್ಲಿದ್ದೇವೆ, ದೇವರು ಸೃಷ್ಟಿಸಿದ ಎಲ್ಲಾ ದಯೆಯ ಜೀವಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ" ಎನ್ನುತ್ತಾರೆ ಸ್ಥಳೀಯ ನಿವಾಸಿ ಖೊಂಗ್ಸಿತ್. ಇವರಿಗೆ ಈ ಹೆಸರು ಇಟ್ಟಿದ್ದರೂ ಕರೆಯುವುದು ಕುಕುಕುಕೂ ಎಂದೇ.
ಅಂದಹಾಗೆ ಈ ರೀತಿ ಸಂಗೀತದಿಂದ ಸಂವಹನ ನಡೆಸುವ ಪದ್ಧತಿಯನ್ನು "ಜಿಂಗ್ರವೈ ಲಾಬೆಯ್" ಎಂದು ಕರೆಯಲಾಗುತ್ತದೆ, ಇದರರ್ಥ "ಕುಲದ ಮೊದಲ ಮಹಿಳೆಯ ಹಾಡು", ಇದು ಖಾಸಿ ಜನರ ಪೌರಾಣಿಕ ಮೂಲ ತಾಯಿಯ ಉಲ್ಲೇಖವಾಗಿದೆ. ಈ ಜನಾಂಗವು ಮಾತೃಪ್ರಧಾನ ಆಗಿದೆ. ಆಸ್ತಿ ಮತ್ತು ಭೂಮಿಯನ್ನು ತಾಯಿಯಿಂದ ಮಗಳಿಗೆ ವರ್ಗಾಯಿಸಲಾಗುತ್ತದೆ, ಆದರೆ ಗಂಡ ತನ್ನ ಹೆಂಡತಿಯಿಂದ ಅದನ್ನು ತೆಗೆದುಕೊಳ್ಳಬಹುದು. "ಜಿಂಗ್ರವೈ ಲಾಬೆ" ಯ ಮೂಲ ತಿಳಿದಿಲ್ಲ, ಆದರೆ ಸ್ಥಳೀಯರು ಇದು ಐದು ಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದ ಹಳ್ಳಿಯಷ್ಟು ಹಳೆಯದು ಎಂದು ಭಾವಿಸುತ್ತಾರೆ.
ಅಮೆಜಾನ್ನಿಂದ ಏನೇನೋ ಆರ್ಡರ್ ಮಾಡಿದ ಕಿತಾಪತಿ ಆಫ್ರಿಕನ್ ಗಿಳಿ! ಮಹಿಳೆ ಸುಸ್ತೋ ಸುಸ್ತು- ಏನಾಯ್ತು ನೋಡಿ
