ಭಾರತೀಯ ಉದ್ಯಮಿ ಶ್ರುತಿ ಚತುರ್ವೇದಿ ಅಮೆರಿಕದ ವಿಮಾನ ನಿಲ್ದಾಣದಲ್ಲಿ ಅನುಭವಿಸಿದ ಕಿರುಕುಳವನ್ನು ವಿವರಿಸಿದ್ದಾರೆ. ಪವರ್ ಬ್ಯಾಂಕ್ ನೆಪದಲ್ಲಿ ಎಫ್‌ಬಿಐ ಅಧಿಕಾರಿಗಳು 8 ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಟ್ಟೆ ಬಿಚ್ಚಿಸಿ, ಶೌಚಾಲಯ ಬಳಸಲು ಮತ್ತು ಫೋನ್ ಮಾಡಲು ಅನುಮತಿ ನೀಡಲಿಲ್ಲ. ಈ ಘಟನೆಯು ಅಮೆರಿಕದ ಕಠಿಣ ವಲಸೆ ನೀತಿಗಳನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಉದ್ಯಮಿ ಶ್ರುತಿ ಚತುರ್ವೇದಿ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಎಂಟು ಗಂಟೆಗಳ ಕಾಲ ಬಂಧನದಲ್ಲಿಟ್ಟುಕೊಂಡ ಅವರನ್ನು ನಡೆಸಿಕೊಂಡ ರೀತಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲ ತನ್ನ ದೇಹವನ್ನು ಬೆಚ್ಚಗಿಡಲು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ, ಫೋನ್ ಕೂಡ ಕೊಡದೆ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ವಿಚಾರಣೆ ನಡೆಸಿದರು. ಅಲ್ಲಿ ಓರ್ವ ಪುರುಷ ಅಧಿಕಾರಿ ತನ್ನನ್ನು ದೈಹಿಕವಾಗಿ ತಪಾಸಣೆ ಮಾಡಿದರು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕಾರಣ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಮ್ಮ ಲಗೇಜ್‌ನಲ್ಲಿ ಪವರ್ ಬ್ಯಾಂಕ್ ಅನ್ನು "ಅನುಮಾನಾಸ್ಪದ" ವಸ್ತುವಾಗಿ ಕಂಡುಕೊಂಡ ಕಾರಣ ಪುರುಷ ಅಧಿಕಾರಿ ದೈಹಿಕವಾಗಿ ಪರಿಶೀಲಿಸಿದರು ಎಂದು ಹೇಳಿದ್ದಾರೆ.
ಶ್ರುತಿ ಚತುರ್ವೇದಿ ಹಂಚಿಕೊಂಡಿರುವ ಎಕ್ಸ್ ಪೋಸ್ಟ್‌ನಲ್ಲಿ ಅಲಾಸ್ಕಾದ ಆಂಕಾರೇಜ್ ವಿಮಾನ ನಿಲ್ದಾಣದಲ್ಲಿ ತಮಗಾದ "ಕೆಟ್ಟ" ಅನುಭವದ ಬಗ್ಗೆ ಬಹಿರಂಗಪಡಿಸಿದರು. ಜಾಕೆಟ್‌ಗಳನ್ನು ಬಿಚ್ಚಿ, ತಣ್ಣನೆಯ ಕೋಣೆಯಲ್ಲಿ ಗಂಟೆಗಟ್ಟಲೆ ಇರುವಂತೆ ಮಾಡಲಾಯಿತು, ಪೊಲೀಸರು ಮತ್ತು ಎಫ್‌ಬಿಐ ಅಧಿಕಾರಿಗಳು ಅವರನ್ನು ಪ್ರಶ್ನಿಸಿದರು. ಮಾತ್ರವಲ್ಲ ಕೈಚೀಲದಲ್ಲಿದ್ದ ಪವರ್ ಬ್ಯಾಂಕ್ ನಿಂದಾಗಿ ಫೋನ್ ಕರೆಯನ್ನು ಕೂಡ ನಿರಾಕರಿಸಲಾಯಿತು.
Trump tarrif: ಭಾರತದಿಂದ ಅಮೆರಿಕಕ್ಕೆ ಐದು ವಿಮಾನ ಭರ್ತಿ ಐಫೋನ್ ರಫ್ತು!
ಮಾತ್ರವಲ್ಲ ಇಂಡಿಯಾ ಆಕ್ಷನ್ ಪ್ರಾಜೆಕ್ಟ್ ಮತ್ತು ಚಾಯ್ಪಾನಿ ಸಂಸ್ಥಾಪಕಿ ಚತುರ್ವೇದಿ ಅವರಿಗೆ ಶೌಚಾಲಯ ಬಳಸಲು ಕೂಡ ಅನುಮತಿ ನಿರಾಕರಿಸಲಾಯಿತು ಮತ್ತು ವಿಮಾನ ಪ್ರಯಾಣವನ್ನು ಕೂಡ ತಪ್ಪಿಸಲಾಯಿತು ಎಂದು ಹೇಳಿದ್ದಾರೆ. ತನಗೆ ನೀಡಲಾದ ಟಾರ್ಚರ್‌ನಿಂದ ತನ್ನ ಹತಾಶೆಯನ್ನು ವ್ಯಕ್ತಪಡಿಸಲು ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ
ಪೊಲೀಸರು ಮತ್ತು ಎಫ್‌ಬಿಐ ಅಧಿಕಾರಿಗಳು 8 ಗಂಟೆಗಳ ಕಾಲ ವಶದಲ್ಲಿಟ್ಟುಕೊಂಡಿರುವುದು ಅತ್ಯಂತ ಹಾಸ್ಯಾಸ್ಪದ ವಿಷಯಗಳನ್ನು ಪ್ರಶ್ನಿಸಿರುವುದನ್ನು, ಕ್ಯಾಮೆರಾದಲ್ಲಿ ಪುರುಷ ಅಧಿಕಾರಿಯೊಬ್ಬರು ದೈಹಿಕವಾಗಿ ಪರಿಶೀಲಿಸಿರುವುದನ್ನು, ಬೆಚ್ಚಗಿನ ಬಟ್ಟೆಗಳನ್ನು ಬಿಚ್ಚಿ, ಮೊಬೈಲ್ ಫೋನ್, ಕೈಚೀಲವನ್ನು ಬಿಚ್ಚಿ, ಶೀತಲ ಕೋಣೆಯಲ್ಲಿ ಇರಿಸಿ, ಶೌಚಾಲಯ ಬಳಸಲು ಅಥವಾ ಒಂದೇ ಒಂದು ಫೋನ್ ಕರೆ ಮಾಡಲು ಅನುಮತಿಸದೆ, ನಿಮ್ಮ ವಿಮಾನವನ್ನು ತಪ್ಪಿಸಿಕೊಳ್ಳುವಂತೆ ಮಾಡಿರುವುದನ್ನು ಕಲ್ಪಿಸಿಕೊಳ್ಳಿ. ಇದಕ್ಕೆ ಕಾರಣ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನಿಮ್ಮ ಪವರ್‌ಬ್ಯಾಂಕ್ ಅನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ 'ಅನುಮಾನಾಸ್ಪದ' ವಾಗಿ ನೋಡಿದ ಕಾರಣ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಜೊತೆಗೆ ಈ ಟ್ವೀಟ್ ಅನ್ನು ವಿದೇಶಾಂಗ ಸಚಿವಾಲಯಕ್ಕೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
ಹೇರ್ ಕಟ್ಟಿಂಗ್‌ಗೆ ಲಂಡನ್ ಕ್ಷೌರಿಕನನ್ನು ವಿಮಾನದಲ್ಲಿ ಕರೆಸುವ ರಾಜ! ಈತನ ಐಷಾರಾಮಿ ಸಂಪತ್ತಿನ ರಹಸ್ಯವೇನು?
ಅಧ್ಯಕ್ಷ ಟ್ರಂಪ್ ಆಡಳಿತ ಮತ್ತು ನೀತಿ ಬದಲಾವಣೆಗಳ ಅಡಿಯಲ್ಲಿ ಅಮೆರಿಕದ ವಲಸೆ ನೀತಿಗಳು ಹೇಗೆ ಹೆಚ್ಚು ಕಠಿಣವಾಗಿವೆ ಎಂಬುದನ್ನು ಶ್ರುತಿ ಚತುರ್ವೇದಿ ಪ್ರಕರಣವು ಎತ್ತಿ ತೋರಿಸುತ್ತದೆ. ಈ ವಾತಾವರಣವು ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ, ಪ್ರವಾಸಿಗರು ಮತ್ತು ವೀಸಾ ಹೊಂದಿರುವವರನ್ನು ದೀರ್ಘಕಾಲದವರೆಗೆ ಬಂಧಿಸಲಾಗಿದೆ ಎಂಬ ವರದಿಗಳು ಜರ್ಮನಿ ಮತ್ತು ಕೆನಡಾದಂತಹ ದೇಶಗಳು ತಮ್ಮ ಪ್ರಯಾಣ ಸಲಹೆಗಳನ್ನು ಅಮೆರಿಕಕ್ಕೆ ನವೀಕರಿಸಲು ಪ್ರೇರೇಪಿಸಿವೆ.
