ಸ್ಟಾರ್ಟ್ಅಪ್ ಬಿಸ್ನೆಸ್ ಕುರಿತು ಪಿಯೂಷ್ ಗೋಯಲ್ ನೀಡಿದ ವಿವಾದಿತ ಹೇಳಿಕೆಯನ್ನು ಸುಹೇಲ್ ಸೇಠ್ ಸಮರ್ಥಿಸಿದ್ದಾರೆ. ಅಷ್ಟಕ್ಕೂ ಸುಹೇಲ್ ಸೇಠ್ ಈ ಹೇಳಿಕೆ ಸಮರ್ಥಿಸಿದ್ದೇಕೆ? 

ನವದೆಹಲಿ(ಏ.08) ಭಾರತದಲ್ಲಿ ಸ್ಟಾರ್ಟ್ಅಪ್ ಬಿಸ್ನೆಸ್‌ಗಳ ಒಟ್ಟಾರೆ ಸ್ಥಿಗತಿಗತಿ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ಟಾರ್ಟ್ಅಪ್ ರ್ಯಾಕೆಟ್ ಆಗಿದೆ, ಮಾಲೀಕರು ಮೊದಲು ಲ್ಯಾಂಬೋರ್ಗಿನಿ ಕಾರು ಅಪಾರ್ಟ್‌ಮೆಂಟ್ ಖರೀದಿಸುತ್ತಾರೆ ಎಂದು ಪಿಯೂಷ್ ನೀಡಿದ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಈ ಹೇಳಿಕೆಯನ್ನು ಭಾರತದ ಉದ್ಯಮಿ, ಕಾಲೋಮಿಸ್ಟ್ ಸುಹೇಲ್ ಸೇಠ್ ಬೆಂಬಲಿಸಿದ್ದಾರೆ. ತಾನು ಪಿಯೂಷ್ ಗೋಯೆಲ್ ಹೇಳಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.

ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಹೇಲ್ ಸೇಠ್, ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಭಾರತ ನಿಜವಾದ ಕೊಡುಗೆ ನೀಡುತ್ತಿದೆ ಎಂದಾದರೆ ನಾವೀನ್ಯತೆ, ಹೊಸ ಸಂಶೋಧನೆಗಳು ಇರಬೇಕು. ಆದರೆ ಭಾರತದ ಸ್ಟಾರ್ಟ್ಅಪ್‌ನಲ್ಲಿ ಇವೆಲ್ಲಿದೆ? ಅಂದರೆ ಹೊಸತನ ಎಲ್ಲಿದೆ ಎಂದು ಸುಹೇಲ್ ಸೇಠ್ ಪ್ರಶ್ನಿಸಿದ್ದಾರೆ. ಸ್ಟಾರ್ಟ್ಅಪ್ ಬಿಸ್ನೆಸ್ ಸಾಫ್ಟ್‌ವೇರ್ ಕುರಿತು ಮಾತನಾಡುತ್ತದೆ. ತಂತ್ರಜ್ಞಾನದ ಕುರಿತು ಮಾತನಾಡುತ್ತದೆ. ಆದರೆ ಭಾರತ ಫೇಸ್‌ಬುಕ್ ಅಭಿವೃದ್ಧಿಪಡಿಸಿತಾ? ಗೂಗಲ್ ಅಭಿವೃದ್ಧಿಪಡಿಸಿತಾ? ಯಾವುದಾದರೂ ಒಂದು ಜಾಗತಿಕ ಬ್ರ್ಯಾಂಡ್ ಭಾರತದಿಂದ ಅಭಿವೃದ್ಧಿಯಾಗಿದೆಯಾ? ಇದ್ಯಾವುದು ಆಗಿಲ್ಲ ಎಂದು ಸುಹೇಲ್ ಸೇಠ್ ಹೇಳಿದ್ದಾರೆ.

ಫುಡ್‌ ಡೆಲಿವರಿಯಲ್ಲೇ ನಿಂತ ಸ್ಟಾರ್ಟ್‌ಅಪ್‌, ಕೇಂದ್ರ ಸಚಿವ ಪೀಯುಷ್‌ ಗೋಯೆಲ್‌ ಹೇಳಿಕೆಗೆ ವ್ಯಾಪಕ ಟೀಕೆ!

ಭಾರತದ ಸುಮಾರು 80% ಸ್ಟಾರ್ಟಪ್‌ಗಳು ಕೇವಲ ದಂಧೆಗಳಾಗಿವೆ ಮತ್ತು ಅವುಗಳಲ್ಲಿ ನಿಜವಾದ ನಾವೀನ್ಯತೆ ಇಲ್ಲ ಎಂದು ಗೋಯಲ್ ಇತ್ತೀಚೆಗೆ ಹೇಳಿದ್ದರು.ನಾವು ನಮ್ಮನ್ನು ನಾವೀನ್ಯತೆಯ ಕೇಂದ್ರ ಎಂದು ಕರೆದುಕೊಳ್ಳುತ್ತೇವೆ ಆದರೆ ನಾವು ಇಲ್ಲಿಯವರೆಗೆ ಯಾವುದೇ ಜಾಗತಿಕ ಬ್ರ್ಯಾಂಡ್ ಅನ್ನು ರಚಿಸಿಲ್ಲ. ಹಾಗಾದರೆ ನಾವು ಯಾವುದರ ಬಗ್ಗೆ ಹೆಮ್ಮೆ ಪಡಬೇಕು? ಎಂದು ಸುಹೇಲ್ ಸೇಠ್ ಪ್ರಶ್ನಿಸಿದ್ದಾರೆ.

ದೊಡ್ಡ ಮನೆ, ದುಬಾರಿ ಕಾರುಗಳು ಮತ್ತು ಕೋಟಿ ನಷ್ಟ
ಅನೇಕ ಸ್ಟಾರ್ಟಪ್‌ಗಳು ಮೊದಲು ಐಷಾರಾಮಿ ಕಾರುಗಳು ಮತ್ತು ದುಬಾರಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸುತ್ತಾರೆ, ಆದರೆ ಅವರ ಸ್ಟಾರ್ಟಪ್‌ಗಳು ಸಾವಿರಾರು ಕೋಟಿ ನಷ್ಟವನ್ನು ಅನುಭವಿಸುತ್ತಿವೆ ಎಂದು ಸೇಠ್ ಆರೋಪಿಸಿದ್ದಾರೆ. ನೀವು ದೊಡ್ಡ ಕೆಲಸಗಳನ್ನು ಮಾಡುವ ಬಗ್ಗೆ ಮಾತನಾಡುತ್ತೀರಿ, ನಂತರ ನಿಮ್ಮ ಪ್ರತಿಮೆಗಳನ್ನು ನೀವೇ ನಿರ್ಮಿಸಿಕೊಳ್ಳುತ್ತೀರಿ ಎಂದು ಅವರು ವ್ಯಂಗ್ಯವಾಡಿದರು. ಆದರೆ ನಿಜವಾಗಿ ನೀವು ಜಗತ್ತನ್ನು ಏನು ಬದಲಾಯಿಸುತ್ತಿದ್ದೀರಿ?

ಸ್ಟಾರ್ಟಪ್ ಬಬಲ್ ಅಥವಾ ನಿಜವಾದ ಕ್ರಾಂತಿ?
ಪಿಯೂಷ್ ಗೋಯಲ್ ಅವರ ಹೇಳಿಕೆ ಮತ್ತು ಸುಹೇಲ್ ಸೇಠ್ ಅವರ ಬೆಂಬಲವು ಭಾರತದ ಸ್ಟಾರ್ಟಪ್ ಕ್ರಾಂತಿಯು ನಿಜವಾಗಿಯೂ ಸುಸ್ಥಿರ ಮತ್ತು ನವೀನವಾಗಿದೆಯೇ ಅಥವಾ ಇದು ತಾತ್ಕಾಲಿಕ ಗುಳ್ಳೆಯಾಗಿದೆಯೇ ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ, ಇದರಲ್ಲಿ ಪ್ರದರ್ಶನ ಹೆಚ್ಚಾಗಿದೆ ಮತ್ತು ನಿಜವಾದ ನಾವೀನ್ಯತೆ ಕಡಿಮೆಯಾಗಿದೆ.

ಈ ಪ್ರಶ್ನೆಗಳು ಏಕೆ ಉದ್ಭವಿಸುತ್ತಿವೆ?
ಭಾರತದಲ್ಲಿ ಯುನಿಕಾರ್ನ್ ಆಗುವ ವೇಗ ಹೆಚ್ಚಾಗಿದೆ, ಆದರೆ ಹೆಚ್ಚಿನ ಕಂಪನಿಗಳು ಇನ್ನೂ ನಷ್ಟದಲ್ಲಿವೆ.
ವಿಶೇಷವಾಗಿ 2024 ರ ನಂತರ ಅನೇಕ ಸ್ಟಾರ್ಟಪ್‌ಗಳ ಮೌಲ್ಯ ಕುಸಿದಾಗ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗುತ್ತಿದೆ.
ನಾವೀನ್ಯತೆಯ ವಿಷಯದಲ್ಲಿ ಭಾರತವು ಇನ್ನೂ ಅಮೆರಿಕ, ಚೀನಾ ಮತ್ತು ಯುರೋಪ್‌ಗಿಂತ ಹಿಂದುಳಿದಿದೆ ಎಂದು ಪರಿಗಣಿಸಲಾಗಿದೆ.
ಅಂಕಿಅಂಶಗಳು ಏನು ಹೇಳುತ್ತವೆ?
Statista ಮತ್ತು Tracxn ನಂತಹ ಪ್ಲಾಟ್‌ಫಾರ್ಮ್‌ಗಳ ಪ್ರಕಾರ, ಭಾರತದ 100 ಕ್ಕೂ ಹೆಚ್ಚು ಯುನಿಕಾರ್ನ್‌ಗಳಲ್ಲಿ 70% ಕ್ಕಿಂತ ಹೆಚ್ಚು ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆಯ ನಷ್ಟದಲ್ಲಿದೆ. ಅದೇ ಸಮಯದಲ್ಲಿ, ಪೇಟೆಂಟ್ ಮತ್ತು R&D ಹೂಡಿಕೆಯ ವಿಷಯದಲ್ಲಿ ಭಾರತದ ಕೊಡುಗೆ ಜಾಗತಿಕ ಮಟ್ಟದಲ್ಲಿ ಸೀಮಿತವಾಗಿದೆ.

ಕೇಂದ್ರ ಸಚಿವ ಪಿಯೂಷ್‌ ವಿರುದ್ಧ ಮುಗಿಬಿದ್ದ ರಾಜ್ಯ ಸರ್ಕಾರ: ಅವರೇನು ಮಾವನ ಮನೆಯಿಂದ ಹಣ ತಂದು ಕೊಡ್ತಾರಾ?