ಅಮೆರಿಕ ಹಾಗೂ ಇರಾನ್ ನಡುವಿನ ವೈಮನಸ್ಸು ಹೆಚ್ಚಾಗುತ್ತಿದ್ದಂತೆ ಹಲವು ಸುತ್ತಿನ ಮಾತುಕಗಳು ಮುರಿದು ಬಿದ್ದಿತ್ತು. ಹೀಗಾಗಿ ಪರಮಾಣು ಆತಂಕ, ಯುದ್ಧ ಭೀತಿ ಹೆಚ್ಚಾಗಿತ್ತು. ಇದೀಗ ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮಾತುಕತೆಗೆ ಒಪ್ಪಿದೆ. 

ಒಮನ್(ಏ.08) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಂದೆಡೆ ತೆರಿಗೆ ನೀತಿ ಮೂಲಕ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ನಡುವೆ ಡೋನಾಲ್ಡ್ ಟ್ರಂಪ್ ಮೊದಲೇ ಘೋಷಿಸಿದಂತೆ ಕೆಲ ಒಪ್ಪಂದ ಮಾತುಕತೆಗೆ ಶೀಘ್ರದಲ್ಲೇ ಮುಗಿಸಲು ತರಾತುರಿ ಕೆಲಸಗಳನ್ನು ಮಾಡಿದ್ದಾರೆ. ಇದರ ನಡುವೆ ಉದ್ವಿಘ್ನ ಪರಿಸ್ಥಿತಿಯಲ್ಲಿ ಇರಾನ್ ಸಂಬಂಧದ ನಡುವೆ ಅಮೆರಿಕ ಮಹತ್ವದ ಮೇಲುಗೈ ಸಾಧಿಸಿದೆ. ಇರಾನ್ ಜೊತೆ ಪರಾಮಾಣ ಮಾತುಕತೆ ಇಂದಿನಿಂದ ಆರಂಭಗೊಳ್ಳುತ್ತಿದೆ. ಅಮೆರಿಕ ಹಾಗೂ ಇರಾನ್ ಪರಮಾಣು ಒಪ್ಪಂದ ಒಮನ್‌ನಲ್ಲಿ ನಡೆಯಲಿದೆ. ಅಮೆರಿಕದ ಸ್ಟೀವ್ ವಿಟ್ಕಾಪ್ ಹಾಗೂ ಓಮನ್ ವಿದೇಶಾಂಗ ಸಚಿವ ಅಬ್ಬಾಸ್ ಅರ್ಗಚ್ಚಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಮೆರಿಕಾ ಮತ್ತು ಇರಾನ್ ನಡುವೆ ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ನೇರ ಮಾತುಕತೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಇರಾನ್ ಅಮೆರಿಕಾದಿಂದ ನೇರ ಮಾತುಕತೆ ಪ್ರಾರಂಭಿಸುವ ಪ್ರಯತ್ನಗಳನ್ನು ತಿರಸ್ಕರಿಸಿತ್ತು.

ತೆರಿಗೆ ಕಡಿತಕ್ಕೆ ಟ್ರಂಪ್‌ಗೆ 50 ದೇಶಗಳ ದುಂಬಾಲು; ಇತ್ತ ಚೀನಾಗೆ ಎಚ್ಚರಿಕೆ ನೀಡಿದ ಅಮೆರಿಕ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್ ವೈಟ್ ಹೌಸ್‌ನಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು. ಬಳಿಕ ಓವಲ್ ಕಚೇರಿಯಲ್ಲಿ ನೆತನ್ಯಾಹು ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದರು. ನಾವು ಇರಾನ್ ಜೊತೆ ನೇರ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಮಾತುಕತೆ ನಡೆಯಲಿದೆ. ಏನಾಗಬಹುದು ಎಂದು ನೋಡೋಣ. ಒಪ್ಪಂದ ಮಾಡಿಕೊಳ್ಳುವುದು ಉತ್ತಮ ಎಂದು ಎಲ್ಲರೂ ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.

ಅಮೆರಿಕಾ-ಇರಾನ್ ನಡುವೆ ಹೆಚ್ಚಿದ ಉದ್ವಿಘ್ನತೆ
ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕಾ-ಇರಾನ್ ನಡುವೆ ಉದ್ವಿಘ್ನತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್ 5 ರಂದು ಅಧ್ಯಕ್ಷ ಟ್ರಂಪ್ ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಖಮೇನಿಗೆ ಪತ್ರ ಬರೆದಿದ್ದರು. ಟ್ರಂಪ್ ಮಾತುಕತೆಗೆ ಆಗ್ರಹಿಸಿದರು ಮತ್ತು ಮಿಲಿಟರಿ ಕ್ರಮದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರು. ಟಿವಿ ಸಂದರ್ಶನದಲ್ಲಿ ಟ್ರಂಪ್, "ನಾನು ಅವರಿಗೆ ಪತ್ರ ಬರೆದಿದ್ದೇನೆ, ಮಾತುಕತೆ ನಡೆಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ರು. ನಾವು ಮಿಲಿಟರಿಯಾಗಿ ಮುಂದುವರಿಯುವುದು ಭೀಕರತೆ ಕಾರಣವಾಗಲಿದೆ ಎಂದುು ಎಚ್ಚರಿಸಿದ್ದರು.

ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ಆಗಬಹುದು
ವಾಸ್ತವವಾಗಿ, ಇರಾನ್ ಅನ್ನು ಮಾತುಕತೆಯ ಮೇಜಿನ ಬಳಿಗೆ ತರಲು ಟ್ರಂಪ್ ಅದರ ಮೇಲೆ ಹೇರಲಾದ ನಿರ್ಬಂಧಗಳನ್ನು ಬಿಗಿಗೊಳಿಸಿದ್ದಾರೆ. ಇದರೊಂದಿಗೆ ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕಾ ಅಥವಾ ಇಸ್ರೇಲ್ ದಾಳಿ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಇದರೊಂದಿಗೆ ಮಾತುಕತೆಯಿಂದ ಈ ಬಿಕ್ಕಟ್ಟನ್ನು ಪರಿಹರಿಸಲು ವಕಾಲತ್ತು ವಹಿಸಲಾಗುತ್ತಿದೆ.

ಇರಾನ್ ಅಧ್ಯಕ್ಷ ಮಸೂದ್ ಪೇಜೆಷ್ಕಿಯನ್ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕಾದೊಂದಿಗೆ ನೇರ ಮಾತುಕತೆಯನ್ನು ನಿರಾಕರಿಸಿದ್ದಾರೆ. ಕ್ಯಾಬಿನೆಟ್ ಸಭೆಯ ಸಂದರ್ಭದಲ್ಲಿ ಟಿವಿಯಲ್ಲಿ ನೀಡಿದ ಹೇಳಿಕೆಯಲ್ಲಿ, “ನಾವು ಮಾತುಕತೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಇದು ವಾಗ್ದಾನ ಉಲ್ಲಂಘನೆಯಾಗಿದ್ದು, ಇದುವರೆಗೆ ನಮಗೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಅವರು ನಂಬಿಕೆಯನ್ನು ಉಳಿಸಿಕೊಳ್ಳಬಹುದು ಎಂದು ಸಾಬೀತುಪಡಿಸಬೇಕು ಎಂದಿದ್ದಾರೆ.

ಟ್ರಂಪ್‌ನಿಂದಾಗಿ ಭಾರತದ 4 ಅಗ್ರ ಶ್ರೀಮಂತರಿಗೆ 85 ಸಾವಿರ ಕೋಟಿ ರು. ನಷ್ಟ