11:48 PM (IST) Nov 08

Karnataka News Live 8 November 2026 'ಪ್ರೇಮದ ಊರಲಿ' ಹೀರೋ ಶ್ರೀರಾಮ್ ಹೆಸರು ಈ ಮೊದಲು ಏನಿತ್ತು? ಕಿರುತೆರೆಯಲ್ಲೂ ಮಿಂಚಿದ್ರಾ ಈ ನಟ?

ಸದ್ಯಕ್ಕೆ, 'ಪ್ರೇಮದ ಊರಲಿ ಚಿತ್ರದ ಮೂಲಕ 'ಶ್ರೀರಾಮ್' ಎಂದು ಗುರುತಿಸಿಕೊಂಡಿರುವ ಈ ನಟನ ಇದಕ್ಕೂ ಮೊದಲಿನ ಬೇರೆ ಇತ್ತು. ಆದರೆ, ಆ ಎರಡೂ ಹೆಸರುಗಳಿಂದ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಈ ನಟ ಗುರುತಿಸಿಕೊಂಡಿದ್ದರು. ಅದರೆ, ಈಗ 'ಪ್ರೇಮದ ಊರಲಿ ಶ್ರೀರಾಮ್' ಎಂದರೆ ಸಖತ್ ಫೇಮಸ್.

Read Full Story
11:21 PM (IST) Nov 08

Karnataka News Live 8 November 2026 ದೇವಿರಮ್ಮ ದೇವಿ ದರ್ಶನ ವೇಳೆ ಅವಘಡ, ಬೆಟ್ಟ ಹತ್ತುವಾಗ ಕಂಬಿ ಮುರಿದು 25 ಭಕ್ತರಿಗೆ ಗಾಯ

ಚಿಕ್ಕಮಗಳೂರಿನ ದೇವಿರಮ್ಮ ಜಾತ್ರೆಯಲ್ಲಿ ಅವಘಡ ಸಂಭವಿಸಿದೆ. ಬೆಟ್ಟ ಹತ್ತಲು ಹಾಕಿದ್ದ ಕಂಬಿ ಮುರಿದ ಪರಿಣಾಮ 25 ಭಕ್ತರಗೆ ಗಾಯವಾಗಿದೆ. ಕಂಬಿ ಹಿಡಿದು ನಿಂತಿದ್ದ ವೇಳೆ ಮುರಿದು ಅವಘಡ ಸಂಭವಿಸಿದೆ.

Read Full Story
10:39 PM (IST) Nov 08

Karnataka News Live 8 November 2026 ಕರ್ನಾಟಕದ ಹೋಟೆಲ್ ಒಂದಕ್ಕೆ ಕೇರಳ ಗ್ರಾಹಕ ಆಯೋಗ ಭಾರೀ ದಂಡ, ಸಣ್ಣ ಕೂದಲು ಪತ್ತೆ ಪ್ರಕರಣದ ಕಾನೂನು ಹೋರಾಟ ಹೇಗಿತ್ತು?

ಉಪಹಾರದಲ್ಲಿ ಕೂದಲು ಬಂದಿದ್ದಕ್ಕೆ ಮತ್ತು ಗ್ರಾಹಕರನ್ನು ನಿಂದಿಸಿದ್ದಕ್ಕೆ ಕರ್ನಾಟಕದ ಹೋಟೆಲ್ ಒಂದಕ್ಕೆ ಕಾಸರಗೋಡು ಗ್ರಾಹಕ ಆಯೋಗ 8 ಸಾವಿರ ರೂ. ದಂಡ ವಿಧಿಸಿದೆ. ಆಹಾರದ ಗುಣಮಟ್ಟ ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಈ ತೀರ್ಪು ಮಹತ್ವದ್ದಾಗಿದೆ.
Read Full Story
10:34 PM (IST) Nov 08

Karnataka News Live 8 November 2026 ಕರ್ನಾಟಕದಲ್ಲೂ ಹೊಸ ದಾಖಲೆ ಬರೆದ ಯಶ್ 'ರಾಮಾಯಣ'.. 'ಡಬ್ಬಿಂಗ್ ಚಿತ್ರ' ಹೆಸರೇಕೆ ಬಂತು?

'ರಾಮಾಯಣ' ಚಿತ್ರದ ಕರ್ನಾಟಕದ ಗಳಿಕೆಯಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯಲ್ಲಿಯೇ ಭಾರೀ ಗಳಿಕೆ ಬಂದಿದೆ. ಪರಭಾಷೆಯ ಡಬ್ ಆಗಿರುವ ಸಿನಿಮಾವೊಂದು ಕರ್ನಾಟಕದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಕೋಟಿಿ ಗಳಿಸಿರುವುದು ಹೊಸ ದಾಖಲೆ. ಈ ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆ ಈ ಯಶಸ್ಸಿಗೆ ದೊಡ್ಡ ಶಕ್ತಿಯಾಗಿದೆ.

Read Full Story
09:47 PM (IST) Nov 08

Karnataka News Live 8 November 2026 ಕನ್ನಡದ ಮೊದಲ ದೀರ್ಘ ವೆಬ್ ಸರಣಿ ‘ಕಾರ್ಪೊರೇಟ್ ಲವ್ ಸ್ಟೋರಿ’.. ಪ್ರಿಯಾಂಕಾ ಉಪೇಂದ್ರ ಎಂಟ್ರಿ

ಪನ್ನಗ ಭರಣ ನಿರ್ದೇಶನದ ಕನ್ನಡದ ಮೊದಲ ದೀರ್ಘ ಸ್ವರೂಪದ ವೆಬ್ ಸರಣಿ ‘ಕಾರ್ಪೊರೇಟ್ ಲವ್ ಸ್ಟೋರಿ’ ನವೆಂಬರ್ 20ರಿಂದ ZEE5ನಲ್ಲಿ ಪ್ರಸಾರವಾಗಲಿದೆ. ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ…

Read Full Story
09:25 PM (IST) Nov 08

Karnataka News Live 8 November 2026 ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆಯ ವಿಶೇಷತೆಯೇನು? ಇದರ ಹಿಂದಿದೆ ಅವರ ನೆನಪು!

‘ರಾಮಾಯಣ’ ನಟಿ ಸಾಯಿ ಪಲ್ಲವಿ ಸದಾ ಕೈಯಲ್ಲಿ ಧರಿಸುವ ರುದ್ರಾಕ್ಷ ಜಪಮಾಲೆಯ ಹಿಂದಿದೆ ವಿಶೇಷ ಕಥೆ. ಈ ಮಾಲೆಯ ಭಾವನಾತ್ಮಕ ಮಹತ್ವ, ಪ್ರಾರ್ಥನೆ ಮತ್ತು ಧ್ಯಾನದೊಂದಿಗಿನ ನಂಟಿನ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದೇನು?

Read Full Story
08:50 PM (IST) Nov 08

Karnataka News Live 8 November 2026 ದೀಪಾವಳಿಯಂದು ಪಟಾಕಿ ಸಿಡಿಸುವಾಗ ಈ ತಪ್ಪುಗಳನ್ನು ಮಾಡಿದ್ರೆ ಕಣ್ಣಿನ ದೃಷ್ಟಿಗೆ ಅಪಾಯ ಗ್ಯಾರಂಟಿ!

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದು ಖುಷಿಯ ವಿಚಾರವೇ ಆದರೂ, ಸಣ್ಣ ನಿರ್ಲಕ್ಷ್ಯವೂ ಕಣ್ಣಿಗೆ ಅಪಾಯ ತರಬಹುದು. ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಪಾಲಿಸಬೇಕಾದ ಕೆಲವು ಮುಖ್ಯ ಸುರಕ್ಷತಾ ಕ್ರಮಗಳನ್ನು ನೋಡೋಣ.

Read Full Story
08:25 PM (IST) Nov 08

Karnataka News Live 8 November 2026 ದೇವಿರಮ್ಮನ ದರ್ಶನದ ಬಳಿಕ ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಅಮೂಲ್ಯ - 20 ವರ್ಷವಾದರೂ ಅಭಿಮಾನಿಗಳ ಪ್ರೀತಿ ಅದೇ ರೀತಿ!

ದೇವಿರಮ್ಮನ ದರ್ಶನ ಪಡೆದ ನಟಿ ಅಮೂಲ್ಯ ತಮ್ಮ ಜೀವನದ ಮರೆಯಲಾಗದ ದಿನವೆಂದು ಬಣ್ಣಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ದೇವಿರಮ್ಮನ ಭಕ್ತರಿಗೆ ಧನ್ಯವಾದ ತಿಳಿಸಿರುವ ಅವರು, ಸಿನಿಮಾ ಬಿಡುಗಡೆಯಾಗಿ 20 ವರ್ಷಗಳಾದರೂ ಅಭಿಮಾನಿಗಳ ಪ್ರೀತಿ ಅದೇ ರೀತಿ ಉಳಿದಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Read Full Story
08:18 PM (IST) Nov 08

Karnataka News Live 8 November 2026 ಅನಂತ್‌ ನಾಗ್‌ರ ಈ ಭಯಾನಕ ಚಿತ್ರ ನೋಡಿದ್ದಿರಾ - ಆಗಿನ ಕಾಲಕ್ಕೇ ಇಷ್ಟೊಂದು ಕೋಟಿ ಕಲೆಕ್ಷನ್ ಆಗಿತ್ತಾ?

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಕನ್ನಡದ ನಟ ಅನಂತ್‌ನಾಗ್ ಹಾಗೂ ಲಕ್ಷ್ಮೀ ನಟನೆಯಲ್ಲಿ 1979ರಲ್ಲಿ ಬಿಡುಗಡೆಯಾದ ಈ ಹಾರರ್ ಸಿನಿಮಾ ಸೂಪರ್ ಹಿಟ್ ಆಗಿ ಭಾರೀ ಕಲೆಕ್ಷನ್ ಮಾಡಿತ್ತು. ಈ ಕನ್ನಡ ಸಿನಿಮಾವನ್ನು ಹಿಂದಿಯಲ್ಲಿ ಕೂಡ ರೀಮೇಕ್ ಮಾಡಲಾಗಿತ್ತು. ಈ ಸಿನಿಮಾದ ವಿಶೇಷತೆ ಏನು?

Read Full Story
07:03 PM (IST) Nov 08

Karnataka News Live 8 November 2026 50ರೂ. ಗೆ ಬಣ್ಣ ಹಚ್ಚಿದೆ, ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶ - ಉಮಾಶ್ರೀ ಭಾವುಕ

1977ರಲ್ಲಿ ಮುಖಕ್ಕೆ ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ 'ದರ್ಬಾರ್ ಡ್ಯಾನ್ಸ್' ಮೂಲಕ ಕಲಾರಂಗ ಪ್ರವೇಶಿಸಿದ ಈ ನಟಿಗೆ ಸಿಕ್ಕ ಮೊದಲ ಸಂಭಾವನೆ ಕೇವಲ 50 ರೂಪಾಯಿ. ಆರಂಭದಲ್ಲಿ ಪೌರಾಣಿಕ ಪಾತ್ರದಲ್ಲಿ ನಟಿಸಿದಾಗ ಅವರ ಮಗನಿಗೆ ಕೇವಲ ಎರಡು ತಿಂಗಳಾಗಿತ್ತು. ಇನ್ನೂ ಏನೆಲ್ಲಾ ಇದೆ ನೋವಿನ ಕಥೆ?

Read Full Story
06:42 PM (IST) Nov 08

Karnataka News Live 8 November 2026 ಮಹಿಳೆಯರ ಆರೋಗ್ಯದ ಬಗ್ಗೆ ಮಹತ್ವದ ಅಭಿಯಾನಕ್ಕೆ ಮುಂದಾದ ಮೋಹಕ ತಾರೆ ರಮ್ಯಾ - ಏನದು ಪ್ಲ್ಯಾನ್?

ಮಹಿಳೆಯರ ಆರೋಗ್ಯಕ್ಕಾಗಿ ನಟಿ ರಮ್ಯಾ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಬಗ್ಗೆ ಜಾಗೃತಿ ಮೂಡಿಸಲು ವೈದ್ಯಕೀಯ ತಜ್ಞರು ಹಾಗೂ IISc ಜೊತೆಗೂಡಿ ಹೊಸ ಪ್ರಯತ್ನ ಆರಂಭಿಸಿದ್ದಾರೆ.

Read Full Story
06:07 PM (IST) Nov 08

Karnataka News Live 8 November 2026 ಸಿಎಂ ಡಿ.ಕೆ.ಶಿವಕುಮಾರ್ ಹಾಸನಾಂಬೆ ದರ್ಶನ ಪಡೆಯುತ್ತಿರುವ ವಿಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ!

ಹಾಸನಾಂಬೆ ದರ್ಶನೋತ್ಸವದಲ್ಲಿ ವಿಐಪಿ ಸಂಸ್ಕೃತಿಯಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ದರ್ಶನ ಪಡೆಯುವಾಗ ಗಂಟೆಗಟ್ಟಲೆ ಕಾದ ಭಕ್ತರು ಎಲ್‌ಇಡಿ ಪರದೆಗೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
05:18 PM (IST) Nov 08

Karnataka News Live 8 November 2026 ಪ್ರೇಮದ ಊರಲಿ ಮತ್ತೆ ಟ್ರೆಂಡಿಂಗ್ ಆಗುತ್ತಾ? 'ಪ್ರೀತಿ ಬೇಡಿತು ಹೃದಯ' ಹಾಡಿದ ಸಂತು-ವಸಂತಾ

'ಪ್ರೇಮದ ಊರಲಿ' ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಒಟಿಟಿ ಬಿಡುಗಡೆ ಕುರಿತು ಪ್ರೇಕ್ಷಕರಲ್ಲಿ ಕುತೂಹಲವಿದೆ. ಈ ಹಿಂದೆ ಡಿಜಿಟಲ್ ಬಿಡುಗಡೆಯ ಬಗ್ಗೆ ವದಂತಿಗಳು ಹರಿದಾಡಿದ್ದವು. ಆದರೆ ನಾಯಕ ನಟ ಶ್ರೀರಾಮ್, ‘ಚಿತ್ರವನ್ನು ಯಾವುದೇ ಒಟಿಟಿ ವೇದಿಕೆಗೆ ಇನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಮುಂದೆ?

Read Full Story
04:50 PM (IST) Nov 08

Karnataka News Live 8 November 2026 ಚೆನ್ನೈ ಏರ್ಪೋರ್ಟ್‌ಗೆ ಕಂಪೇರಿಂಗ್ ರಿಪೋರ್ಟ್ ಮಾಡಿದ ಬೆನ್ನಲ್ಲೇ ಕನ್ನಡಿಗರ ಉದ್ಯೋಗಕ್ಕೆ ಕಂಫರ್ಟ್ ಎಂದ ಬಿಐಎಎಲ್!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಬಿಐಎಎಲ್ ಸ್ಪಷ್ಟನೆ ನೀಡಿದೆ. ಕನ್ನಡಿಗರಿಗೆ ಅರ್ಥಪೂರ್ಣ ಉದ್ಯೋಗಾವಕಾಶ ಸೃಷ್ಟಿಸಲು ನಾವು ಸದಾ ಬದ್ಧ ಎಂದು ಸಂಸ್ಥೆ ತಿಳಿಸಿದೆ.

Read Full Story
04:15 PM (IST) Nov 08

Karnataka News Live 8 November 2026 ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾಗೆ ಏನಾಯ್ತು? ಆರೋಗ್ಯದ ಸಮಸ್ಯೆ ಬಗ್ಗೆ ಬರೆದ ಪತ್ರದಲ್ಲೇನಿದೆ?

ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದಾರೆ. 'ಪಬ್ಬಾರ್' ಸಿನಿಮಾ ಇವೆಂಟ್‌ನಲ್ಲಿ ಕೂಲಿಂಗ್ ಗ್ಲಾಸ್ ಧರಿಸಿದ್ದ ಹಿಂದಿನ ಕಾರಣ, ತೀವ್ರ ಅಲರ್ಜಿ ಮತ್ತು ಚೇತರಿಕೆಯ ಬಗ್ಗೆ ನಟಿ ಹಂಚಿಕೊಂಡಿದ್ದೇನು?

Read Full Story
03:55 PM (IST) Nov 08

Karnataka News Live 8 November 2026 ಒಂದು ತಿಂಗಳಿನಿಂದ ಶೈನ್ ಶೆಟ್ಟಿ ಬಸ್ಸಿನಲ್ಲೇ ವಾಸ, ಮತ್ತೆ ಬಿಗ್‌ ಬಾಸ್ ವೇದಿಕೆ ನೆನಪಿಸಿ ಭಾವುಕರಾಗಿ ಹೇಳಿದ್ದೇನು?

ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟ್ 'ಶಂಕರಾಭರಣ' ಬಿಡುಗಡೆಗೆ ಸಿದ್ಧವಾಗಿದೆ. ಇದೇ ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಪ್ರಚಾರದ ವೇಳೆ ಅವರು ಮತ್ತು ಬಸ್ಸಿನ ಬಗ್ಗೆ ರೋಚಕ ಕಥೆಯನ್ನ ಹೇಳಿದ್ದಾರೆ.

Read Full Story
03:34 PM (IST) Nov 08

Karnataka News Live 8 November 2026 'ಪ್ರೇಮದ ಊರಲಿ' ವಸಂತ ಆಗಿ ಮಿಂಚ್ತಿರೋ ರಮಿಕಾ ಶಿವು 'ನೀನಾದೆ ನಾ' ವೇದಾ ಅಂತ ಗೊತ್ತಿದ್ಯಾ?

'ಪಾರು', 'ನಮ್ಮನೆ ಯುವರಾಣಿ', 'ನೀನಾದೆ ನಾ' ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ ಖುಷಿ ಶಿವು ಈಗ ರಮಿಕಾ ಶಿವು ಆಗಿ ಬೆಳ್ಳಿತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ನಟಿಯ ಆಸಕ್ತಿದಾಯಕ ಸಿನಿ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
03:21 PM (IST) Nov 08

Karnataka News Live 8 November 2026 Tumakuru - ಮಂಗಳ ಎಕ್ಸ್ ಪ್ರೆಸ್ ರೈಲು ಪುನರಾರಂಬಿಸುವಂತೆ ಸಚಿವ ಸೋಮಣ್ಣಗೆ ಮನವಿ

ಕೇಂದ್ರ ಸಚಿವ ವಿ. ಸೋಮಣ್ಣ ತಿಪಟೂರಿಗೆ ಭೇಟಿ ನೀಡಿದಾಗ ಮಹಿಳೆಯರು ಮಂಗಳ ಎಕ್ಸ್ ಪ್ರೆಸ್ ರೈಲು ಮರುಪ್ರಾರಂಭಿಸಲು ಮನವಿ ಮಾಡಿದರು. ಅಲ್ಲದೆ, ಬಡ ರೈತನಿಗೆ ಸಂಸದರ ಮತ್ತು ಶಾಸಕರ ಅನುದಾನದಡಿ ಖರೀದಿಸಿದ ಟ್ರ್ಯಾಕ್ಟರ್ ಕೀಯನ್ನು ಸಚಿವರು ಹಸ್ತಾಂತರಿಸಿದರು.
Read Full Story
03:19 PM (IST) Nov 08

Karnataka News Live 8 November 2026 ಹೃದಯಾಘಾತದ ಲಕ್ಷಣ ಕಂಡರೆ ತಕ್ಷಣ ಈ ಕೆಲಸ ಮಾಡಿ; ಈ ಗೋಲ್ಡನ್ ಟಿಪ್ಸ್‌ ಜೀವ ಕಾಪಾಡುತ್ತೆ!

ಹೃದಯಾಘಾತದ ಅನುಮಾನ ಬಂದ ತಕ್ಷಣ ನೋವು ಕಡಿಮೆಯಾಗುವವರೆಗೆ ಕಾಯಬೇಡಿ. ವ್ಯಕ್ತಿಯನ್ನು ಸ್ವತಃ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕಿಂತ ಆಂಬ್ಯುಲೆನ್ಸ್‌ಗೆ ಕರೆ ಮಾಡುವುದು ಉತ್ತಮ. ವ್ಯಕ್ತಿಯನ್ನು ನಡೆಯಲು ಬಿಡದೆ ಆರಾಮವಾಗಿ ಕುಳ್ಳಿರಿಸಿ, ಈ ಕೆಲವು ಗೋಲ್ಡನ್ ಟಿಪ್ಸ್ ಫಾಲೋ ಮಾಡಿ!

Read Full Story
02:46 PM (IST) Nov 08

Karnataka News Live 8 November 2026 ಪರ್ವತ ಹತ್ತಿದಾಗ, ವಿಮಾನ ಮೇಲೇರಿದಾಗ, ಬಾವಿಯಲ್ಲಿ ಇಳಿದಾಗ ಕಿವಿ ಒಮ್ಮಲೇ ಕಟ್ಟಿಕೊಳ್ಳುವುದೇಕೆ?

ಕೆಲವೊಮ್ಮೆ ಎಂಜಲು ನುಂಗಿದಾಗ ಅಥವಾ ಆಕಳಿಸಿದಾಗ ಕಿವಿಯೊಳಗೆ ಪಟಾಕಿ ಸಿಡಿದಂತೆ ಶಬ್ದ ಕೇಳಿಸಬಹುದು. ಇದು ಕಿವಿಯೊಳಗಿನ ಒತ್ತಡ ಸರಿಹೊಂದುವ ಪ್ರಕ್ರಿಯೆಯ ಭಾಗವಾಗಿದೆ. ಆದರೆ ಅತಿ ಎತ್ತರದ ಪ್ರದೇಶಗಳಲ್ಲಿ ಏಕೆ ಕಿವಿ ಬ್ಲಾಕ್ ಆಗುತ್ತೆ? ನೋಡಿ ಈ ಸ್ಟೋರಿ..

Read Full Story