ಸದ್ಯಕ್ಕೆ, 'ಪ್ರೇಮದ ಊರಲಿ ಚಿತ್ರದ ಮೂಲಕ 'ಶ್ರೀರಾಮ್' ಎಂದು ಗುರುತಿಸಿಕೊಂಡಿರುವ ಈ ನಟನ ಇದಕ್ಕೂ ಮೊದಲಿನ ಬೇರೆ ಇತ್ತು. ಆದರೆ, ಆ ಎರಡೂ ಹೆಸರುಗಳಿಂದ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಈ ನಟ ಗುರುತಿಸಿಕೊಂಡಿದ್ದರು. ಅದರೆ, ಈಗ 'ಪ್ರೇಮದ ಊರಲಿ ಶ್ರೀರಾಮ್' ಎಂದರೆ ಸಖತ್ ಫೇಮಸ್.
ಸದ್ಯಕ್ಕೆ, 'ಪ್ರೇಮದ ಊರಲಿ ಚಿತ್ರದ ಮೂಲಕ 'ಶ್ರೀರಾಮ್' ಎಂದು ಗುರುತಿಸಿಕೊಂಡಿರುವ ಈ ನಟನ ಇದಕ್ಕೂ ಮೊದಲಿನ ಬೇರೆ ಇತ್ತು!
'ಪ್ರೇಮದ ಊರಲಿ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್ ನೀಡಿದೆ. ಬಿಡುಗಡೆಯಾಗಿ ಕೇವಲ ಒಂದು ತಿಂಗಳಲ್ಲಿ (31 ದಿನಗಳು) ಬರೋಬ್ಬರಿ ರೂ. 100 ಕೋಟಿಗಿಂತಲೂ (100 ಕೋಟಿ ಕ್ಲಬ್) ಹೆಚ್ಚು ಕಲೆಕ್ಷನ್ ದಾಖಲಿಸಿ 2026ರಲ್ಲಿ ಹೊಸ ಇತಿಹಾಸ ಬರೆದಿದೆ. ಈ ಸಿನಿಮಾ ಇದೀಗ 150 ಕೋಟಿ ಗಳಿಸಿ ಇನ್ನೂ ಥಿಯೇಟರ್ಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಹಾಡುಗಳು, ಹೀರೋ ಶ್ರೀರಾಮ್ (Shree Raam), 2 ಇಬ್ಬರು ಹೀರೋಯಿನ್ಸ್-ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ, ಜೊತೆಗೆ ಹಿರಿಯ ಪೋಷಕ ನಟರ ರಂಗಾಯಣ ರಘು ಸೇರಿದಂತೆ ಎಲ್ಲಾ ಕಲಾವಿದರು ಇಂದು ಹೊಸ ಹುಮ್ಮಸ್ಸಿನಲ್ಲಿ, ಹೊಸ ಚಿತ್ರಗಳ ಅವಕಾಶಗಳೊಂದಿಗೆ ಮಿಂಚುತ್ತಿದ್ದಾರೆ. ಅವರಲ್ಲಿ 'ಪ್ರೇಮದ ಊರಲಿ' ಸಿನಿಮಾದ ನಾಯಕ ನಟ ಶ್ರೀರಾಮ್ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ.
ಪ್ರೇಮದ ಊರಲಿ ನಟ ಶ್ರೀರಾಮ್ ಮೊದಲು ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದರು? ಯಾವ ಸೀರಿಯಲ್?
ಪ್ರೇಮದ ಊರಲಿ ನಟ ಶ್ರೀರಾಮ್ ಮೊದಲು ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದರು? ಯಾವ ಸೀರಿಯಲ್? ಅದೆಷ್ಟು ಶಾರ್ಟ್ ಮೂವೀಸ್? ಕನ್ನಡ ಹೊರತುಪಡಿಸಿ ಯಾವೆಲ್ಲಾ ಭಾಷೆಯ ಸಿನಿಮಾ ಹಾಗೂ ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದಾರೆ? ಎಷ್ಟು ಸಿನಿಮಾ & ಸೀರಿಯಲ್ಗಳಲ್ಲಿ ನಾಯಕ? ಎಷ್ಟರಲ್ಲಿ ಪೋಷಕ ಪಾತ್ರ? ಈ ಎಲ್ಲಾ ಮಾಹಿತಿಗಳನ್ನು ಮುಂದೆ ನೀಡಲಾಗಿದೆ. ನೋಡಿ ಈ ಸ್ಟೋರಿ..
ಈಗ ಯುವ ಸೂಪರ್ ಸ್ಟಾರ್
ಹೌದು, ಸ್ಯಾಂಡಲ್ವುಡ್ನ ಸೂಪರ್ ಹಿಟ್ 'ಪ್ರೇಮದ ಊರಲಿ' ಸಿನಿಮಾದ ನಾಯಕ ನಟ ಶ್ರೀರಾಮ್ ಈಗ (ಯುವ) ಸೂಪರ್ ಸ್ಟಾರ್. ಅವರ ಕೆರಿಯರ್ನಲ್ಲಿ ಸಾಕಷ್ಟು ಸಿನಿಮಾಗಳು, ಸೀರಿಯಲ್ಗಳು ಇವೆ.
ಕನ್ನಡ ಸಿನಿಮಾಗಳು:
2018- ಸಿನಿಮಾ -ಇರುವುದೆಲ್ಲವ ಬಿಟ್ಟು -ಪಾತ್ರದ ಹೆಸರು-ಆಕಾಶ್, ಮೊಟ್ಟಮೊದಲ ಸಿನಿಮಾ
2021- ಸಿನಿಮಾ -ಕೋಟಿಗೊಬ್ಬ- ಪಾತ್ರದ ಹೆಸರು -ಸತ್ಯನ ಸ್ನೇಹಿತ, ಅತಿಥಿ ಪಾತ್ರ
2022- ಸಿನಿಮಾ -ಗಜಾನನ ಅಂಡ್ ಗ್ಯಾಂಗ್ -ಪಾತ್ರದ ಹೆಸರು-ಗಜೇಂದ್ರ (ಗಜ)
2023- ಸಿನಿಮಾ -ಹೊಂದಿಸಿ ಬರೆಯಿರಿ- ಪಾತ್ರದ ಹೆಸರು-ಕುಮಾರ್
2026-ಪ್ರೇಮದ ಊರಲಿ -ಪಾತ್ರದ ಹೆಸರು-ಸಂತು -ನಾಯಕ ನಟ
ಕಿರುತೆರೆ ಧಾರಾವಾಹಿಗಳು
2013–2015 -ಚಿಟ್ಟೆ ಹೆಜ್ಜೆ -ಈಟಿವಿ ಕನ್ನಡ/ ಕಲರ್ಸ್ ಕನ್ನಡ
2016- ಶ್ರೀರಸ್ತು ಶುಭಮಸ್ತು -ಶ್ರೀನಿಧಿ (ಶ್ರೀ) ಜೀ ಕನ್ನಡ-ಪ್ರಮುಖ ಪಾತ್ರ
2016–2018- ನೀಲಿ -ವಿಷ್ಣು -ಸ್ಟಾರ್ ಸುವರ್ಣ -ಪ್ರಮುಖ ಪಾತ್ರ
2018- ಅವಳುಂ ನಾನೂ (ತಮಿಳು) ಪಾತ್ರ-ವಿಜಯ್ ರವಿಶಂಕರ್ -ಸ್ಟಾರ್ ವಿಜಯ್ -ಅತಿಥಿ ಪಾತ್ರ
2019–2020 - ಇಷ್ಟದೇವತೆ -ಪಾತ್ರ- ಶ್ರೀರಾಮ್ -ಕಲರ್ಸ್ ಕನ್ನಡ -ಪ್ರಮುಖ ಪಾತ್ರ
2021- ಕನ್ಯಾಕುಮಾರಿ- ಪಾತ್ರ-ಅರ್ಜುನ್ -ಕಲರ್ಸ್ ಕನ್ನಡ -ಅತಿಥಿ ಪಾತ್ರ
ಕಿರುಚಿತ್ರಗಳು
2017- ಹೆಸರು- ರಿಷಭಪ್ರಿಯ - ಪಾತ್ರದ ಹೆಸರು-ರಿಷಭ್
2022- ಹೆಸರು-ಸಂಗಮ ಸಮಾಗಮ ಪಾತ್ರದ ಹೆಸರು-ಶ್ರವಣ್
ಸದ್ಯಕ್ಕೆ, 'ಪ್ರೇಮದ ಊರಲಿ ಚಿತ್ರದ ಮೂಲಕ 'ಶ್ರೀರಾಮ್' ಎಂದು ಗುರುತಿಸಿಕೊಂಡಿರುವ ಈ ನಟನ ಇದಕ್ಕೂ ಮೊದಲಿನ ಹೆಸರು ಶ್ರೀ ಮಹಾದೇವ್ ಅಥವಾ ಶ್ರೀ.. ಈ ಎರಡೂ ಹೆಸರುಗಳಿಂದ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಈ ನಟ ಗುರುತಿಸಿಕೊಂಡಿದ್ದರು. ಅದರೆ, ಈಗ 'ಪ್ರೇಮದ ಊರಲಿ ಶ್ರೀರಾಮ್' ಎಂದರೆ ಸಖತ್ ಫೇಮಸ್. ಶ್ರೀರಾಮ್ ಎಂದರೆ ಸಾಕು, ಓ 'ಪ್ರೇಮದ ಊರಲಿ ಹೀರೋ' ಎಂಬಷ್ಟು ಅಥವಾ 'ಪ್ರೇಮದ ಊರಲಿ' ಎಂದರೆ ಸಾಕು, ಸಂತು ಅಂದ್ರೆ ಶ್ರೀರಾಮ್ ಎಂಬಷ್ಟು ಕನ್ನಡನಾಡಿನಲ್ಲಿ ಹಾಗೂ ಇಡೀ ಸೌತ್ ಹಾಗೂ ನಾರ್ತ್ ಇಂಡಿಯಾಗಳಲ್ಲಿ ಚಿರಪರಿಚಿತ. ಅದಕ್ಕೇ ಹೋಳೋದು- 'ಯಾರ ಟೈಂ ಯಾವಾಗ ಬರುತ್ತೋ, ಯಾರು ಯಾವಾಗ ಎಲ್ಲಿ ಯಶಸ್ಸು ಪಡೆಯುತ್ತಾರೋ ಹೇಳಲಾಗದು' ಎಂದು. ಅದಕ್ಕೆ ತಕ್ಕ ಹಾಗೂ ತಾಜಾ ಉದಾಹರಣೆ ಎಂದರೆ ಅದು 'ಪ್ರೇಮದ ಊರಲಿ' ಸಿನಿಮಾ ಹಾಗೂ ಶ್ರೀರಾಮ್ ಸೇರಿದಂತೆ ಅದರಲ್ಲಿ ನಟಿಸಿರುವ ಎಲ್ಲಾ ಕಲಾವಿದರು!














