ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟ್ 'ಶಂಕರಾಭರಣ' ಬಿಡುಗಡೆಗೆ ಸಿದ್ಧವಾಗಿದೆ. ಇದೇ ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಪ್ರಚಾರದ ವೇಳೆ ಅವರು ಮತ್ತು ಬಸ್ಸಿನ ಬಗ್ಗೆ ರೋಚಕ ಕಥೆಯನ್ನ ಹೇಳಿದ್ದಾರೆ.
ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟ್ 'ಶಂಕರಾಭರಣ' ಬಿಡುಗಡೆಗೆ ಸಿದ್ಧವಾಗಿದೆ. ಇದೇ ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶೈನ್ ಶೆಟ್ಟಿ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ವಿಶೇಷ ಅಂದ್ರೆ ಒಂದು ಬಸ್ ಮೂಲಕ ಅವರು ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಸ್ಸೇ ಮನೆ, ಅದುವೇ ಪ್ರಪಂಚ
ಇಡೀ ಕರ್ನಾಟಕವನ್ನು ಚಿತ್ರೀಕರಿಸಿದ ಬಸ್ಸಿನ ಮೇಲೆಯೇ ಸುತ್ತಿ ಬರುತ್ತಿದ್ದಾರೆ. ಹೀಗಾಗಿ ಅವರು ಇಡೀ ಬಸ್ ಅನ್ನೇ ತಮ್ಮ ಮನೆಯನ್ನಾಗಿ ಮಾಡ್ಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ.. ಹೌದು, ನಾನು ಸಿನಿಮಾ ಪ್ರಚಾರಕ್ಕಾಗಿ ಕರ್ನಾಟಕ ಟೂರ್ ಆರಂಭಿಸಿದ್ದೇನೆ. ಈಗಾಗಲೇ ಒಂಬತ್ತು ಜಿಲ್ಲೆಗಳನ್ನ ಸುತ್ತಿ 10ನೇ ಜಿಲ್ಲೆಯ ಟೂರ್ನಲ್ಲಿದ್ದೇನೆ.
ನಿಜ ಹೇಳಬೇಕು ಅಂದರೆ ನನಗೆ ತುಂಬಾ ಖುಷಿ ಆಗತ್ತಿದೆ. ನನಗೆ ಇಂಥ ಜರ್ನಿ ಬೇಕಿತ್ತು. ಅದೇ ಕಾರಣಕ್ಕೆ ನಾನು ಇಡೀ ಕರ್ನಾಟಕ ಟೂರ್ ಮಾಡುತ್ತಿದ್ದೇನೆ. ಆ ಮೂಲಕ ನನಗೆ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಲು ಒಂದೊಳ್ಳೆ ಅವಕಾಶ ಸಿಕ್ಕಿದೆ. ಕರ್ನಾಟಕದ ಜನತೆಗೆ, ಕನ್ನಡದ ಅಭಿಮಾನಿಗಳಿಗೆ ಸಿನಿಮಾ ಪ್ರಚಾರ ಅನ್ನೋದು ಒಂದು ದಿಕ್ಕಿನಲ್ಲಿದ್ದರೆ.. ಇನ್ನೊಂದು ನನಗೆ ಸಿಕ್ಕಿರೋ (ಬಿಗ್ಬಾಸ್) ಗೆಲುವು. ಅದು ಕರ್ನಾಟದ ಜನತೆ ಕೊಟ್ಟಿರೋದು. ಬಿಗ್ ಬಾಸ್ನಲ್ಲಿ ಜನ ನನ್ನನ್ನು ತಾಯಂದಿರೋ ನೋಡಿರೋದಾಗಿರಬಹುದು, ಅವರ ಗಂಡದಿರು ಅನಿವಾರ್ಯದಿಂದಾಗಿ ನನ್ನ ನೋಡಿರೋದಾಗಿರಬಹುದು ಕೊನೆಗೆ ಎಲ್ಲರೂ ಬೆಂಬಲ ನೀಡಿ ಆ ಒಂದು ದೊಡ್ಡ ವೇದಿಕೆಯಲ್ಲಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದಕ್ಕೆ ಧನ್ಯವಾದ ಹೇಳಲು ಅವಕಾಶ ಸಿಕ್ಕಿದೆ. ಅದೇ ಕಾರಣಕ್ಕೆ ಇಡೀ ಕರ್ನಾಟಕವನ್ನು ಸುತ್ತುತ್ತಿರೋದು. ಈಗ ಎಲ್ಲರಿಗೂ ಧನ್ಯವಾದ ತಿಳಿಸಲು ನನಗೆ ಒಂದೊಳ್ಳೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.
ಯಾಕೆಂದರೆ..ಬಿಗ್ ಬಾಸ್ ಮುಗಿದ ಮೇಲೆ ನನ್ನ ಅಭಿಮಾನಿಗಳು ಶೈನ್ ಮುಂದೇನು ಮಾಡ್ತಾನೆ? ನಾವೆಲ್ಲ ಅವನಿಗೆ ಗೆಲ್ಲಿಸಿಕೊಟ್ಟಿದ್ದೀವಿ, ನಮ್ಮೆಲ್ಲರರನ್ನೂ ರಂಜಿಸಲು ಜವಾಬ್ದಾರಿ ನೀಡಿದ್ದೀವಿ. ಹಾಗಿದ್ದ ಮೇಲೆ ಶೈನ್ ಶೆಟ್ಟಿ ಇನ್ನೇನು ಮಾಡ್ತಾನೆ ಎಂದು ಹೇಳೋರಿಗೆಲ್ಲ ಇದು ಒಂದು ಉತ್ತರ. ಈ ರೀತಿಯ ಒಂದು ಸಿನಿಮಾ ಮಾಡಿದ್ದೀನಿ ಎನ್ನುತ್ತಿದ್ದೇನೆ. ಶಂಕರಾಭರಣ ಸಿನಿಮಾ ಮಾಡಿದ್ದೀನಿ. ನೋಡಿ, ಬೆಂಬಲಿಸಿ ಎಂದು ಕೇಳಿಕೊಂಡಿದ್ದೇನೆ ಎಂದರು.
ಅದೇ ಕಾರಣಕ್ಕೆ ನಾನು ಇಡೀ ಕರ್ನಾಟಕ ಟೂರ್ ಮಾಡುತ್ತಿದ್ದೇನೆ. ಇದೇ ವೇಳೆ ತಮ್ಮ ಸಿನಿಮಾಗೆ ಶಂಕರಾಭರಣ ಎಂದು ನಾಮಕರಣ ಮಾಡಿರುವ ಗುಟ್ಟನ್ನು ಶೈನ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ. ನನ್ನ ಸಿನಿಮಾ ಇಡೀ ಬಸ್ಸಿನ ಸುತ್ತ ಇದೆ. ಹಾಗಾಗಿ ಆ ಬಸ್ಸಿಗೆ ಒಂದು ಹೆಸರು ಬೇಕಿತ್ತು. ಆ ಬಸ್ಸಿಗೆ ಏನು ಹೆಸರು ಇಡ್ತೀನೋ, ಅದೇ ಸಿನಿಮಾ ಹೆಸರು ಆಗಿರಬೇಕು ಅಂದುಕೊಂಡಿದ್ದೆ. ಬೇರೆ ಬೇರೆ ಹೆಸರುಗಳನ್ನು ಹುಡುಕುತ್ತಿದ್ದೆ. ಇರುವ ಹೆಸರನ್ನು ಇಡುವ ಹಾಗಿಲ್ಲ. ಹಾಗಾಗಿ ಎಲ್ಲೂ ಇಲ್ಲದ ಹೆಸರನ್ನು ಇಡಬೇಕಾಗಿತ್ತು. ಯಾಕೆಂದರೆ ನನ್ನ ತಂದೆ ತಾಯಿ ನನಗೆ ಶೈನ್ ಎಂಬ ಹೆಸರನ್ನು ಇಟ್ಟಿದ್ದಾರೆ. ಅದು ತುಂಬಾ ಚೆನ್ನಾಗಿದೆ. ಅದೇ ರೀತಿ ನಾನೂ ಕೂಡ ಚೆನ್ನಾಗಿರುವ ಹೆಸರನ್ನು ಹುಡುಕುತ್ತಿದ್ದೆ. ಕೊನೆಗೆ ನನಗೆ ಶಂಕರಾಭರಣ ತುಂಬಾ ಆಪ್ತ ಹೆಸರು ಅನಿಸಿತು ಎಂದಿದ್ದಾರೆ.














