10:38 PM (IST) Feb 04

Karnataka News Live 4 February 2026 ಟ್ರಂಪ್ ವೀಸಾ ನೀತಿಗೆ ಗೂಗಲ್ ಚೆಕ್-ಮೇಟ್; ಬೆಂಗಳೂರಿನಲ್ಲಿ 20,000 ಉದ್ಯೋಗಿಗಳಿಗೆ ಹೊಸ ಕಚೇರಿ!

ಅಮೆರಿಕದ ವೀಸಾ ನಿಯಮಗಳು ವಿದೇಶಗಳಲ್ಲಿ ತಾಂತ್ರಿಕ ನೇಮಕಾತಿಗಳನ್ನು ಬಿಗಿಗೊಳಿಸುತ್ತಿರುವುದರಿಂದ, ಬೆಂಗಳೂರಿನಲ್ಲಿ 20,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಬಹುದಾದ ಹೊಸ ಕಚೇರಿ ಸ್ಥಳದೊಂದಿಗೆ ಆಲ್ಫಾಬೆಟ್ ಭಾರತದಲ್ಲಿ ಪ್ರಮುಖ ವಿಸ್ತರಣೆಯನ್ನು ಯೋಜಿಸುತ್ತಿದೆ.

 

Read Full Story
10:13 PM (IST) Feb 04

Karnataka News Live 4 February 2026 Bhagyalakshmi Serial - 2 ನೇ ಮದುವೆಯಾಗೋ ಖುಷಿಯಲ್ಲಿದ್ದ ಭಾಗ್ಯಗೆ ಭೂಮಿ ಇಬ್ಭಾಗವಾಗುವಂಥ ನ್ಯೂಸ್‌ ಸಿಕ್ಕಿತು!

Bhagyalakshmi Serial: 'ಭಾಗ್ಯಲಕ್ಷ್ಮಿ' ಈಗ ರೋಚಕ ಘಟ್ಟ ತಲುಪಿದೆ. ಭಾಗ್ಯಳ ಬದುಕಿಗೆ ಹಳೆಯ ಪತಿ ತಾಂಡವ್ ಕೂಡ ಬಂದಿದ್ದಾನೆ, ಇಷ್ಟುದಿನಗಳ ಕಾಲ ಕಷ್ಟದಲ್ಲಿ ಜೊತೆಗಿದ್ದು, ಆಕೆಯನ್ನು ಗೌರವಿಸುವ ಆದೀಶ್ವರ್ ಕಾಮತ್ ಇದ್ದಾನೆ. ಆದೀಶ್ವರ್‌ ಜೊತೆ ಮದುವೆ ಆಗಬೇಕು ಎಂದುಕೊಂಡ ಭಾಗ್ಯಗೆ ಧರ್ಮಸಂಕಟ ಬಂದಿದೆ.

 

Read Full Story
09:36 PM (IST) Feb 04

Karnataka News Live 4 February 2026 Photos - 8 ವರ್ಷ ಕಾದು ಮದುವೆಯಾಗಿರೋ ನಟ ಮಂಡ್ಯ ರಮೇಶ್‌ ಮಗಳು ದಿಶಾ; ಈಗ ಆ ರಹಸ್ಯ ಬಿಚ್ಚಿಟ್ರು

Actor Mandya Ramesh Daughter Disha: ನಟ ಮಂಡ್ಯ ರಮೇಶ್‌ ಮಗಳು ದಿಶಾ ಅವರು ಮದುವೆಯ ಫೋಟೋಗಳನ್ನು ಶೇರ್‌ ಮಾಡಿದ್ದಲ್ಲದೆ, ಲವ್‌ಸ್ಟೋರಿ ರಹಸ್ಯದ ಬಗ್ಗೆ ಫಸ್ಟ್‌ ಟೈಮ್‌ ರಿವೀಲ್‌ ಮಾಡಿದ್ದಾರೆ. ಸುಂದರ ಫೋಟೋಗಳನ್ನು ನೋಡಿ.

 

Read Full Story
08:14 PM (IST) Feb 04

Karnataka News Live 4 February 2026 ಹೃದಯಕ್ಕೆ ಹೊಸ ಕವಾಟ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿನೂತನ ಯಶಸ್ವಿ ಟಿಎಂವಿಆರ್‌ ಚಿಕಿತ್ಸೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ದಕ್ಷಿಣ ಕರ್ನಾಟಕದ ಮೊದಲ  ಟಿಎಂವಿಆರ್  ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಅಪಾಯದಲ್ಲಿದ್ದ 72ವರ್ಷದ ರೋಗಿಗೆ ಈ ಅತ್ಯಾಧುನಿಕ,ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಚಿಕಿತ್ಸೆ ನೀಡಿ, ಮೂರೇ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.

Read Full Story
07:56 PM (IST) Feb 04

Karnataka News Live 4 February 2026 ಬೆಂಗಳೂರು ಮೆಟ್ರೋ ಟಿಕೆಟ್ ದರ ಹೆಚ್ಚಳ - ಫೆಬ್ರವರಿ 9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ - ಇಲ್ಲಿದೆ ಹೊಸ ದರಪಟ್ಟಿ!

ಬೆಂಗಳೂರಿನ 'ನಮ್ಮ ಮೆಟ್ರೋ' ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆ.9, ಸೋಮವಾರದಿಂದ ಹೊಸ ದರಗಳು ಜಾರಿಗೆ ಬರಲಿದ್ದು, ನಿರ್ವಹಣಾ ವೆಚ್ಚದ ಹೆಚ್ಚಳವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ದರ ಏರಿಕೆಗೆ ಮೆಟ್ರೋ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

Read Full Story
07:53 PM (IST) Feb 04

Karnataka News Live 4 February 2026 Serial BTS - ಕೆನ್ನೆಗೆ ಹೊಡೆಯುವ ದೃಶ್ಯಕ್ಕೆ ಎಷ್ಟೊಂದು ಸರ್ಕಸ್​ ಮಾಡ್ತಾರೆ ನೋಡಿ ಸೀರಿಯಲ್​ಗಳಲ್ಲಿ!

'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್‌ನ ಶೂಟಿಂಗ್ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ನಟಿ ರಕ್ಷಿತಾ ಭಾಸ್ಕರ್, ಸಹನಟ ಅಥರ್ವ ಅವರ ಕೆನ್ನೆಗೆ ಹೊಡೆಯುವ ದೃಶ್ಯದ ಚಿತ್ರೀಕರಣದ ಹಿಂದಿನ ಸವಾಲುಗಳು ಮತ್ತು ತಮಾಷೆಯ ಕ್ಷಣಗಳನ್ನು ತೋರಿಸಲಾಗಿದೆ.

Read Full Story
07:47 PM (IST) Feb 04

Karnataka News Live 4 February 2026 ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ

ಸೈನಿಕರ ಅನುಕೂಲಕ್ಕಾಗಿ ಘಟಪ್ರಭಾ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಸಂಸದ ಈರಣ್ಣ ಕಡಾಡಿ ಮನವಿ ಸಲ್ಲಿಸಿದ್ದಾರೆ. ಹಾಗೆಯೇ, ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲನ್ನು ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
Read Full Story
07:17 PM (IST) Feb 04

Karnataka News Live 4 February 2026 ಹಾಟ್​ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ - ಥಹರೇವಾರಿ ಕಮೆಂಟ್ಸ್​

ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ನಟನೆ ಮಾತ್ರವಲ್ಲದೆ 'ಕೋಣ' ಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ತಮ್ಮ ಹಾಟ್​ ಫೋಟೋಶೂಟ್​ ಮೂಲಕವೂ ಅವರು ಸದ್ದು ಮಾಡುತ್ತಿದ್ದಾರೆ.

Read Full Story
07:15 PM (IST) Feb 04

Karnataka News Live 4 February 2026 ಜ್ಯೋತಿಷಿ ಕಮಲಾಕರ್‌ ಭಟ್‌ & ಸುಚಿತ್ರಾ ಆಂಟಿ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌!

Kamalakar Bhat Case: 7 Accused Sent to Judicial Custody Till Feb 11 ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Read Full Story
07:09 PM (IST) Feb 04

Karnataka News Live 4 February 2026 ಬಿಜೆಪಿಗೆ ಮಾನ ಮರ್ಯಾದೆ ಇಲ್ಲ, ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ, ನಾಯಿಗಿಂತ ಕಡೆ ನೀವು, ಕೆಟ್ಟ RSS - ಶಿವಲಿಂಗೇಗೌಡ ಕೆಂಡಾಮಂಡಲ

ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ್ದರಿಂದ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ಈ ವೇಳೆ ಶಾಸಕ ಶಿವಲಿಂಗೇಗೌಡ, ವಿಪಕ್ಷಗಳ ವಿರುದ್ಧ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ, ವೈಯಕ್ತಿಕ ನಿಂದನೆ ನಡೆಸಿದ್ದು ಸದನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
Read Full Story
07:04 PM (IST) Feb 04

Karnataka News Live 4 February 2026 Bigg Boss Gilli Nata - ಭೇಟಿ ಮಾಡಿಲ್ಲವೆಂದು ಮುನಿಸಿಕೊಂಡ ಟ್ಯಾಟೋ ಕುಮಾರಣ್ಣನಿಗೆ ಕ್ಷಮೆ ಕೇಳಿದ ಗಿಲ್ಲಿ ನಟ!

ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ, ತನ್ನ ಟ್ಯಾಟೋ ಹಾಕಿಸಿಕೊಂಡಿದ್ದ ಮಂಡ್ಯದ ಅಭಿಮಾನಿಯನ್ನು ಭೇಟಿಯಾಗದ ಕಾರಣ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಗೆದ್ದ ನಂತರ ಅಭಿಮಾನಿಗಳನ್ನು ಮರೆತಿದ್ದಾರೆ ಎಂದು ಅಭಿಮಾನಿ ಕುಮಾರ್ ಬೇಸರ ವ್ಯಕ್ತಪಡಿಸಿದ್ದು, ಈ ಘಟನೆಯಿಂದ ನೊಂದ ಗಿಲ್ಲಿ ನಟ ಕ್ಷಮೆಯಾಚಿಸಿದ್ದಾರೆ.

Read Full Story
06:17 PM (IST) Feb 04

Karnataka News Live 4 February 2026 ಓಡಿ ಹೋದ ಆಟೋರಾಜನ ಹೆಂಡತಿ, ಬಂದು ಬಿಡು ಶೀಲಾ ಅಂತ ಗೋಗರೆದಾಗ ಬರ್ತಾಳಾ?

ನೀನು ನನ್ನ ಪ್ಲೇವರ್, ಬಂದು ಬಿಡು ಬಂಗಾರಿ, ನಿನ್ನ ರಾಣಿ ಥರ ನೋಡ್ಕೋತೀನಿ ಬಂದು ಬಿಡು ಲೀಲಾ ಹೀಗೆ ಮಂಜು ಗೋಳಾಡಿದ್ದು ನೀವೆಲ್ಲರೂ ನೋಡಿದ್ದೀರ. ಇದೀಗ ಅದೇ ರೀತಿಯ ಸನ್ನಿವೇಷ ಶಾಂತಂ ಪಾಪಂನಲ್ಲಿ ಮೂಡಿ ಬಂದಿದೆ. ಆಟೋ ರಾಜ ಬಂದು ಬಿಡು ಶೀಲಾ ಅಂದ್ರೆ ಬರ್ತಾಳಾ?

 

Read Full Story
05:40 PM (IST) Feb 04

Karnataka News Live 4 February 2026 ಕಂಡೋರ ಹೆಂಡ್ತಿ ರೀಲ್ಸ್ ಮಾಡೋದನ್ನ ಕದ್ದು ನೋಡಿದ ಕ(ಮ)ಲಾಕರ ಗುರೂಜಿ ಈಗ ಕಂಬಿ ಹಿಂದೆ!

ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್ ಭಟ್, ರೀಲ್ಸ್ ಮಾಡುವ ವಿವಾಹಿತೆ ಸುಚಿತ್ರಾಳ ವ್ಯಾಮೋಹಕ್ಕೆ ಬಿದ್ದು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಈ ಸಂಬಂಧವು ಘೋರ ದುರಂತಕ್ಕೆ ಕಾರಣವಾಗಿ, ಮಹಿಳೆಯ ಸಂಬಂಧಿಕರ ಮೇಲೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಕೊಲೆಯಾಗಿದ್ದು, ಇದೀಗ ಜ್ಯೋತಿಷಿ ಕಂಬಿ ಎಣಿಸುತ್ತಿದ್ದಾರೆ.

Read Full Story
05:14 PM (IST) Feb 04

Karnataka News Live 4 February 2026 ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳಿಂದಲೇ ಬರೋಬ್ಬರಿ 23 ಲಕ್ಷ ರೂ ಗುಳುಂ! ವೈಯಕ್ತಿಕ ಯುಪಿಐ ಪಾವತಿ ಕೋಡ್ ಬಳಕೆ!

ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿ 23 ಲಕ್ಷಕ್ಕೂ ಅಧಿಕ ಹಣದ ವಂಚನೆ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿಗಳು ವೈಯಕ್ತಿಕ ಕೋಡ್ ಬಳಸಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ವೈದ್ಯಕೀಯ ಅಧೀಕ್ಷಕರು ದೂರು ದಾಖಲಿಸಿದ್ದಾರೆ.

Read Full Story
05:11 PM (IST) Feb 04

Karnataka News Live 4 February 2026 ZEE Kannada ಹೊಸ ಸೀರಿಯಲ್ಸ್​​ ಕೃಷ್ಣ ರುಕ್ಕು, ಜಗದ್ಧಾತ್ರಿ ಶೀಘ್ರದಲ್ಲಿ - ಯಾವ ಧಾರಾವಾಹಿಗಳ ಅಂತ್ಯ?

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, 'ಕೃಷ್ಣ ರುಕ್ಕು' ಮತ್ತು 'ಜಗದ್ಧಾತ್ರಿ' ಎಂಬ ಹೊಸ ಸೀರಿಯಲ್‌ಗಳು ಬರಲಿವೆ. ಇದರಿಂದಾಗಿ, 'ಅಮೃತಧಾರೆ' ಅಥವಾ 'ಬ್ರಹ್ಮಗಂಟು' ಧಾರಾವಾಹಿ ಅಥವಾ ಬೇರೆ ಸೀರಿಯಲ್​ ಯಾವುದು ಅಂತ್ಯವಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.  

Read Full Story
05:08 PM (IST) Feb 04

Karnataka News Live 4 February 2026 ಟಾಕ್ಸಿಕ್ ಸಿನಿಮಾ 'ಧುರಂಧರ್-2' ಸಿನಿಮಾವನ್ನು ನುಂಗಿ ಹಾಕಿದೆ.. ಹೀಗಂತ ಮುಂಬೈ ಮುಂದಿ ಹೇಳ್ತಿರೋದು ಯಾಕೆ?

‘ಟಾಕ್ಸಿಕ್’ ಸಿನಿಮಾ ಈಗಾಗಲೇ ‘ಧುರಂಧರ್ 2’ ಚಿತ್ರವನ್ನು ನುಂಗಿ ಹಾಕಿಯಾಗಿದೆ. ಮತ್ತೆ ಈ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಟಾಕ್ಸಿಕ್ ಸಿನಿಮಾ ಮುಂದೆ ಹೋಗುತ್ತದೆ' ಎಂದು ಹಿಂದಿಯ ಕೆಲವು ಫ್ಯಾನ್ಸ್ ಹೇಳಿಕೊಂಡಿದ್ದಾರೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಚಿತ್ರಗಳು ಮಾರ್ಚ್ 19ರಂದು ತೆರೆಗೆ ಬರಲಿವೆ.

Read Full Story
04:57 PM (IST) Feb 04

Karnataka News Live 4 February 2026 ಬೆಳಗಾವಿ ಅಪರಾಧ ಸುದ್ದಿ - ಕೇವಲ ಎರಡು ಸಿಗರೇಟ್ ಹಣಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ!

ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ, ಕೇವಲ ಎರಡು ಸಿಗರೇಟ್ ಮತ್ತು ನೀರಿನ ಬಾಟಲಿ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ ಅವರನ್ನು ಯುವಕರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story
04:39 PM (IST) Feb 04

Karnataka News Live 4 February 2026 ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್‌ ಭಟ್‌ ಇರೋ ಫೋಟೋ ಟ್ವೀಟ್‌ ಮಾಡಿದ ಶಾಸಕ ಸುರೇಶ್‌ಕುಮಾರ್‌!

ಕೊಲೆ ಪ್ರಕರಣದ ಆರೋಪಿ ಕಮಲಾಕರ್ ಭಟ್ ಜೊತೆಗಿನ ಸಂಬಂಧದ ಬಗ್ಗೆ ಶಾಸಕ ಸುರೇಶ್ ಕುಮಾರ್‌ ಮೇಲೆ ಬಿ.ಕೆ. ಹರಿಪ್ರಸಾದ್ ಆರೋಪ ಮಾಡಿದ್ದರು. ಇದಕ್ಕೆ ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಸಿದ್ದರಾಮಯ್ಯ ಜೊತೆಗಿನ ಭಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.

Read Full Story
04:19 PM (IST) Feb 04

Karnataka News Live 4 February 2026 ಬೆಂಗಳೂರು ಕಾಮಗಾರಿ ನಡೆಯುತ್ತಿರುವಾಗಲೇ 20 ಅಡಿ ಕುಸಿದ ರಸ್ತೆ; ಸುತ್ತಲಿನ ಏರಿಯಾದಲ್ಲಿ ಭಾರೀ ಟ್ರಾಫಿಕ್ ಜಾಮ್!

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಹಳೇ ಚಂದಾಪುರದ ಬಳಿ ನಡೆಯುತ್ತಿದ್ದ ಅಂಡರ್ ಪಾಸ್ ಕಾಮಗಾರಿಯಿಂದಾಗಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

Read Full Story
04:18 PM (IST) Feb 04

Karnataka News Live 4 February 2026 ದತ್ತಪೀಠದಲ್ಲಿ ಹೊಸ ವಿವಾದ, ಸುಪ್ರೀಂ ಆದೇಶ ಉಲ್ಲಂಘಿಸಿ ಗುಹೆಯೊಳಗೆ ಹೊಸ ಆಚರಣೆ, ಮುಜಾವರ್‌ಗಳು ವಿವಾಹಿತರಾಗಿರಬಾರದು!

ಚಿಕ್ಕಮಗಳೂರಿನ ವಿವಾದಿತ ದತ್ತಪೀಠದ ಗುಹೆಯೊಳಗೆ 'ಕಲಮೆ ತಯ್ಯಬಾ' ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ನಿಯಮಬಾಹಿರವಾಗಿ ಮುಜಾವರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿವೆ.

Read Full Story