ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ್ದರಿಂದ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ಈ ವೇಳೆ ಶಾಸಕ ಶಿವಲಿಂಗೇಗೌಡ, ವಿಪಕ್ಷಗಳ ವಿರುದ್ಧ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ, ವೈಯಕ್ತಿಕ ನಿಂದನೆ ನಡೆಸಿದ್ದು ಸದನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಗಂಭೀರ ರಾಜಕೀಯ ಚರ್ಚೆ ತೀವ್ರ ಗದ್ದಲ, ಆರೋಪ–ಪ್ರತ್ಯಾರೋಪ ಹಾಗೂ ಅಸಭ್ಯ ಭಾಷೆಯ ಬಳಕೆಯಿಂದ ಸಂಪೂರ್ಣ ನಿಯಂತ್ರಣ ತಪ್ಪಿದಂತಾಯಿತು. ನೂರು ಪ್ರತಿಶತ ಹಣ ಲೂಟಿ ನಡೆದಿದೆ ಎಂದು ಆರೋಪಿಸಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ ಬೆನ್ನಲ್ಲೇ, ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು.
“ನೂರಕ್ಕೆ ನೂರರಷ್ಟು ಹಣ ಹೊಡೆದಿರೋದು ಸತ್ಯ. ಆ ಮಂತ್ರಿ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತನಿಖೆ ಮುಗಿದು ಆರು ತಿಂಗಳ ಬಳಿಕ ನಿರ್ದೋಷಿಯಾಗಿ ಹೊರಬರಲಿ. ಅಲ್ಲಿವರೆಗೆ ಆರ್.ಬಿ. ತಿಮ್ಮಾಪುರ ಸಚಿವ ಸ್ಥಾನದಲ್ಲಿ ಕುಳಿತುಕೊಳ್ಳಬಾರದು” ಎಂದು ಅಶೋಕ್ ಸದನದಲ್ಲಿ ಆಗ್ರಹಿಸಿದರು.
ಈ ಹೇಳಿಕೆಗೆ ಶಾಸಕ ಶಿವಲಿಂಗೇಗೌಡ ತೀವ್ರ ಪ್ರತಿಕ್ರಿಯೆ ನೀಡಿದ್ದು, “ನೀವು ಬರೀ ಸುಳ್ಳು ಹೇಳ್ತಿದ್ದೀರಿ. ನಿಮಗೆ ಇದನ್ನೆಲ್ಲ ಹೇಳೋಕೆ ಏನು ಹಕ್ಕು?” ಎಂದು ಪ್ರಶ್ನಿಸಿದರು. ಇದರಿಂದ ಸದನದಲ್ಲಿ ವಿಪಕ್ಷದ ಸದಸ್ಯರು ಏಕಕಾಲಕ್ಕೆ ಘೋಷಣೆ ಕೂಗಲಾರಂಭಿಸಿ ಗದ್ದಲ ಉಂಟಾಯಿತು.
‘ಮೊದಲು ಇವರನ್ನು ಹೊರ ಹಾಕಿ’ – ಸ್ಪೀಕರ್ ಪೀಠದ ಮುಂದೆ ಆಕ್ರೋಶ
ವಿಪಕ್ಷದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಧರಣಿಗೆ ಇಳಿದಾಗ, ಶಿವಲಿಂಗೇಗೌಡ ಅವರು “ಮೊದಲು ಇವರನ್ನು ಸದನದಿಂದ ಹೊರ ಹಾಕಿ” ಎಂದು ಸ್ಪೀಕರ್‌ಗೆ ಆಗ್ರಹಿಸಿದರು. ಈ ಸಂದರ್ಭ ಸ್ಪೀಕರ್, “ನೀವು ಹೀಗೆ ಗದ್ದಲ ಮಾಡುತ್ತಿದ್ದರೆ ಸದನವನ್ನು ರಾತ್ರಿ 12 ಗಂಟೆವರೆಗೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. ಆದರೂ ಗದ್ದಲ ಶಮನವಾಗಲಿಲ್ಲ.
ಶಿವಲಿಂಗೇಗೌಡ ಅಸಭ್ಯ ಪದ ಬಳಕೆ, ಸದನದಲ್ಲಿ ತೀವ್ರ ಉದ್ವಿಗ್ನತೆ
ವಿಪಕ್ಷದ ಘೋಷಣೆಗಳಿಗೆ ಪ್ರತಿಯಾಗಿ ಶಾಸಕ ಶಿವಲಿಂಗೇಗೌಡ ಅವರು ಏಕವಚನದಲ್ಲಿ ಬಿಜೆಪಿ–ಜೆಡಿಎಸ್ ಶಾಸಕರನ್ನು ಉದ್ದೇಶಿಸಿ ಅಸಭ್ಯ ಮತ್ತು ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದರು. ನಿಯಂತ್ರಣ ತಪ್ಪಿದ ಶಾಸಕರ ಮಾತು, ಬಾಯಿಗೆ ಬಂದಂತೆ ಮಾತನಾಡಿದ ಶಿವಲಿಂಗೇಗೌಡ. ವಿಪಕ್ಷ ಶಾಸಕರ ಧರಣಿ, ಘೋಷಣೆಗೆ ಪ್ರತಿಯಾಗಿ ಮನಸೋ ಇಚ್ಛೆ ಮಾತನಾಡಿ ಬಿಜೆಪಿ ಜೆಡಿಎಸ್ ಶಾಸಕರ ವಿರುದ್ಧ ಶಿವಲಿಂಗೇಗೌಡ ಕೆಂಡಾಮಂಡಲವಾದರು. ಥೂ ಎಂದು ಉಗಿದರು. ಕೋತಿಗಳ ತರ ಕೂಗ್ತಿರೋರು ನೀವು, ನಿಮಗೆ ಮಾನ ಮರ್ಯಾದೆ ಇದೆಯಾ..? ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ. ಅಯೋಗ್ಯರು ನೀವು ಥೂ ಎಂದು ಶಿವಲಿಂಗೇಗೌಡ ಉಗಿದರು. ಶಾಸಕ ಶರಣ ಸಲಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೀನು ಹೆಂಡ್ತಿಯನ್ನ ತಹಶಿಲ್ದಾರ್ ಹತ್ತಿರ ಬಿಟ್ಟು ದುಡ್ಡು ಹೊಡೆದಿದ್ದಿಯಾ ಎಂದು ಆರೋಪಿಸಿದರು.
ಥೂ ನಿಮ್ಮ ಜನಕ್ಕೆ ಬೆಂಕಿ ಹಾಕ ಎಂದು ಆಕ್ರೋಶ ಹೊರಹಾಕಿದಾಗ, ಜೆಡಿಎಸ್ ಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದ ಎಂದು ವಿಪಕ್ಷ ಶಾಸಕರು ಕೂಗಿದರು. ಇದಕ್ಕೆ ಪ್ರತಿಕ್ರಯಿಸಿದ ಶಿವಲಿಂಗೇಗೌಡ ನಿಮ್ಮ ಅಪ್ಪನಿಗೆ ಹಾಕಿದ್ದೆ, ನಿಮ್ ಅಪ್ಪ.. ನಿಮ್ ಅಪ್ಪ.. ನಿಮ್ ಅಪ್ಪ. ಮಾನ ಮಾರ್ಯಾದೆ ಇದೆಯಾ ಅಯೋಗ್ಯರು. ನಾಯಿಗಳಿಗಿಂತ ಕಡೆ ನೀವು.. ನಾಯಿಗಳು ನೀವು . ಅವುಗಳಿಗಾದರೂ ನಿಯತ್ತು ಇದೆ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ.
ಅಸಭ್ಯ ಪದ ಬಳಕೆ
ಮುಂದುವರಿದು ಸದನದಲ್ಲಿ ಶಿವಲಿಂಗೇಗೌಡ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು. ಬಿಜೆಪಿ ಶಾಸಕರಿಗೆ ಏಕವಚನದಲ್ಲಿ ಬೈದು ಸದನದಲ್ಲಿ ಅಸಭ್ಯ ಪದ ಬಳಸಿದರು. ಈ ವೇಳೆ ನಕಲಿ ಕೊಬ್ಬರಿ ಹೋರಾಟಗಾರ ಅಂತ ಶಿವಲಿಂಗೇಗೌಡ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಏಕವಚನದಲ್ಲಿ ಬಿಜೆಪಿ ಸದಸ್ಯರಿಗೆ ಬಾಯಿಗೆ ಬಂದಂತೆ ಬೈದ ಶಿವಲಿಂಗೇಗೌಡ. ಹೇಯ್ ಮಾನಗೆಟ್ಟವರೆ. ನಿಮ್ಮಪ್ಪನಿಗೆ ಚೂರಿ ಹಾಕಿದ್ದೆ. ನೀವು ಇಲ್ಲಿ ಇದನ್ನ ಕುಡಿಯೋಕೆ ಬಂದಿದ್ದೀರಾ.? ಕೊಬ್ಬರಿ ಹೋರಾಟ ಏನು ಅಂತ ಅರಸೀಕೆರೆಗೆ ಬಂದು ಕೇಳು. ನಿನ್ ಹೆಂಡ್ತಿ ತಹಶೀಲ್ದಾರ್ ಇಟ್ಕೊಂಡು ಎಷ್ಟು ದುಡ್ಡು ಹೊಡ್ದಿದ್ದಾರೆ ಗೊತ್ತಾ.? ನಿಮ್ಮಂತ ಕೆಟ್ಟ ಕೆರ ಹಿಡಿದವರನ್ನ ನಾನು ನೋಡಿಲ್ಲ. ಕಾನೂನನ್ನ ರಾಜ್ಯಪಾಲರು ತಡೆ ಹಿಡಿದ್ರು, ಇಲ್ಲದಿದ್ರೆ ನಿಮಗೆ ಆಗ್ತಿತ್ತು. ಥೂ.. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ವಿಪಕ್ಷ ಆಗೋಕೆ ನೀವು ಲಾಯಕ್ ಇದ್ದೀರಾ.? ಒಬ್ಬನ್ನೇ ಟಾರ್ಗೆಟ್ ಮಾಡ್ತೀರಾ.? ಕೆಟ್ಟ RSS ಅಂತ ಬೈದ ಶಿವಲಿಂಗೇಗೌಡ. ಬಿಜೆಪಿಯವರಿಗೆ ಬೈಯ್ಯೋ ಬರದಲ್ಲಿ RSS ಎಳೆದು ತಂದ ಶಿವಲಿಂಗೇಗೌಡ.
ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶಿಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಅಂತಾ ಗೊತ್ತು. ಈ ಬಿಜೆಪಿಯವರನ್ನು ಮುಂದೆ ದೇಶದಲ್ಲೇ ಕಿತ್ತೊಗೆಯುತ್ತಾರೆ. ಈ ಪೋಲಿ ಕೆಲಸ ಮಾಡ್ತಿರುವುದು ಅಶೋಕಣ್ಣನ ನಾಯಕತ್ವದಲ್ಲಿ, ಯಾರು ಈ ಮೂವರನ್ನ ಒಬ್ಬ ಆರ್‌ಎಸ್‌ಎಸ್ ಮಂಗಳೂರಿನವನು. ಇನ್ನೊಬ್ಬ ಹೆಂಡತಿ ತಹಶಿಲ್ದಾರ್ ಬಿಟ್ಟುಕೊಂಡು ದುಡ್ಡು ಹೊಡೆಯುತ್ತಿರೋದು. ಇವನು ಮಹಾನ್ ಭ್ರಷ್ಟ, ಕೆಟ್ಟ ಪ್ರವೃತ್ತಿಯನ್ನು ಎಲ್ಲಿಯು ನೋಡಿಲ್ಲ. ಇಂತಹ ಕೆಟ್ಟವರನ್ನು ಹೊರಗೆ ಹಾಕೋಕೆ ಯಾಕ್ರೀ ಅಧ್ಯಕ್ಷರೇ ಹೆದರುತ್ತೀರಾ..? ಎಂದು ಸ್ಪೀಕರ್ ವಿರುದ್ಧವೂ ಶಿವಲಿಂಗೇಗೌಡ ಆಕ್ರೋಶ. ನಾನು ಯಾವ ಪಕ್ಷಕ್ಕೆ ಆದರೂ ಹೋಗ್ತೀನಿ. ನಿನಗೆ ಯಾಕೇ ಬೇಕು ಹೋಗಲೇ ಎಂದು ಶಿವಲಿಂಗೇಗೌಡ ರಾಂಗ್. ಏಕ ವಚನದಲ್ಲೇ ಶರಣ ಸಲಗಾರ್ ಹಾಗೂ ವೇದವ್ಯಾಸ್ ಕಾಮತ್ ನಿಂದಿಸಿದ ಶಿವಲಿಂಗೇಗೌಡ.
ಹಳ್ಳಿಯಿಂದ ಕಾನೂನು ಬರಬೇಕೇ ವಿನಹ ಡೆಲ್ಲಿಯಿಂದ ಬರೋದಲ್ಲ. ವಿಬಿ ಜಿ ರಾಮ್ ಜಿ ಯೋಜನೆ ತಂದಿದ್ದಕ್ಕೆ ನಾಚಿಕೆ ಆಗಬೇಕು. ಗ್ರಾಮಸ್ಥರ ಶಾಪ ನಿಮಗೆ ಒಂದು ದಿನ ತಟ್ಟೆ ತಟ್ಟುತ್ತದೆ. ದೇಶವನ್ನು ಹಾಳು ಮಾಡೋಕೆ ಹೊರಟಿದ್ದೀರಾ. ನಿಮ್ಮ ಯೋಗ್ಯತೆಗೆ ಬದಲಾವಣೆ ಮಾಡಿ ಪ್ರತಿಭಟನೆ ಮಾಡ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ಇಲ್ಲಿ ಒಂದು ಅಷ್ಟ ಜನರು ಆರ್ ಎಸ್ ಎಸ್ ನವರು ಇದ್ದೀರಿ. ಕೂಗೋದೇ ನಿಮ್ಮ ಬಂಡವಾಳ ಆಗಿದೆ ಎಂದು ಆಕ್ರೋಶ ಈ ವೇಳೆ ದೇವೇಗೌಡರಿಗೆ ದೋಖಾ ಮಾಡಿದ ಶಿವಲಿಂಗೇಗೌಡರಿಗೆ ಧಿಕ್ಕಾರ ಧಿಕ್ಕಾರ ಎಂದ ಶರಣ ಸಲಗಾರ್. ದೇವೇಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಶಿವಲಿಂಗೇಗೌಡ ಎಂದು ಕೂಗಿದ ವೇದವ್ಯಾಸ ಕಾಮತ್
ಸದನದ ಗೌರವಕ್ಕೆ ಧಕ್ಕೆ – ವ್ಯಾಪಕ ಟೀಕೆ
ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ಬಳಸಿದ ಅಸಭ್ಯ ಪದಗಳು, ವೈಯಕ್ತಿಕ ನಿಂದನೆಗಳು ಮತ್ತು ಅವಾಚ್ಯ ಆರೋಪಗಳು ವಿಧಾನಸಭೆಯ ಗೌರವಕ್ಕೆ ಧಕ್ಕೆ ತಂದಿವೆ ಎಂದು ವಿಪಕ್ಷ ಮಾತ್ರವಲ್ಲದೆ ಆಡಳಿತ ಪಕ್ಷದ ಕೆಲ ಸದಸ್ಯರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಧಾನಸಭೆ ಚರ್ಚೆಗೆ ವೇದಿಕೆ, ನಿಂದನೆಗೆ ಅಲ್ಲ” ಎಂಬ ಅಭಿಪ್ರಾಯಗಳು ಹೊರಬಂದಿವೆ. ಒಟ್ಟಾರೆ, ಗಂಭೀರ ವಿಚಾರಗಳ ಚರ್ಚೆಗಿಂತ ಆರೋಪ–ಪ್ರತ್ಯಾರೋಪ, ವೈಯಕ್ತಿಕ ನಿಂದನೆ ಮತ್ತು ಅಸಭ್ಯ ವಾಗ್ದಾಳಿಯೇ ಮೇಲುಗೈ ಸಾಧಿಸಿದ ದಿನವೊಂದಾಗಿ ಇಂದಿನ ವಿಧಾನಸಭಾ ಕಲಾಪ ಗುರುತಿಸಲ್ಪಟ್ಟಿದೆ.


