- Home
- Entertainment
- Sandalwood
- ಹಾಟ್ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ತರೇಹವಾರಿ ಕಾಮೆಂಟ್ಸ್
ಹಾಟ್ ಅವತಾರದಲ್ಲಿ ಪಡ್ಡೆಗಳ ನಶೆ ಏರಿಸಿದ Bigg Boss ತನಿಷಾ ಕುಪ್ಪಂಡ: ತರೇಹವಾರಿ ಕಾಮೆಂಟ್ಸ್
ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ನಟನೆ ಮಾತ್ರವಲ್ಲದೆ 'ಕೋಣ' ಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ತಮ್ಮ ಹಾಟ್ ಫೋಟೋಶೂಟ್ ಮೂಲಕವೂ ಅವರು ಸದ್ದು ಮಾಡುತ್ತಿದ್ದಾರೆ.

ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ
ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದರು.
ಪೆನ್ಡ್ರೈವ್ನಲ್ಲಿ ನಟನೆ
‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಇದೀಗ ಪೆನ್ಡ್ರೈವ್ ಸಿನಿಮಾದಲ್ಲಿಯೂ ಸಕತ್ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕಿಯಾಗಿ ಸಕ್ಸಸ್
ಇದೀಗ ನಿರ್ಮಾಣ ಹಂತಕ್ಕೂ ಇಳಿದು ಸಕ್ಸಸ್ ಕಂಡಿದ್ದಾರೆ. ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕ ಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನವಿದ್ದು, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್ ಹಾಗೂ ನೃತ್ಯ ನಿರ್ದೇಶನವನ್ನು ಮುರುಗನ್ ಮಾಡಿದ್ದಾರೆ. ತನಿಷಾ ಕುಪ್ಪಂಡ ಈಚೆಗೆ ಪೈರಸಿ ವಿರುದ್ಧ ಜಗ್ಗೇಶ್ ಅವರ ಕೈಜೋಡಿಸಿದ್ದರು. ಅದರಲ್ಲಿ ಯಶಸ್ಸನ್ನೂ ಕಂಡಿದ್ದರು.
ಹಾಟ್ ಅವತಾರದಲ್ಲಿ
ಹೀಗೆ ಸಕತ್ ಬಿಜಿಯಾಗಿರೋ ತನಿಷಾ ಅವರು, ಇದೀಗ ಸಕತ್ ಹಾಟ್ ಅವತಾರದಲ್ಲಿ ಮತ್ತೊಮ್ಮೆ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಲಿಟ್ ಡ್ರೆಸ್ನಲ್ಲಿ ಈ ವಿಡಿಯೋಶೂಟ್ ಮಾಡಿಸಿಕೊಂಡಿದ್ದು, ಪಡ್ಡೆಗಳ ನಶೆ ಏರಿಸಿದ್ದಾರೆ. ಇವರ ಈ ವಿಡಿಯೋಗೆ ತರಹೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ.
ನಾನ್ವೆಜ್ ಬಿಟ್ಟಿದ್ದ ತನಿಷ್ಕಾ
ತನಿಷಾ ಅವರು ಸದ್ಯ ನಾನ್ವೆಜ್ ಬಿಟ್ಟು ಸದ್ದು ಮಾಡುತ್ತಿದ್ದಾರೆ. ಈ ಬಗ್ಗೆ ಅವರೇ ಖುದ್ದಾಗಿ ವಿಷಯ ತಿಳಿಸಿದ್ದಾರೆ. ಹಾಗೆಂದು ಅವರು ಪರ್ಮನೆಂಟ್ ಆಗೇನೂ ನಾನ್ವೆಜ್ ಬಿಟ್ಟಿಲ್ಲ. ಆದ್ರೆ ಕೆಲವು ದಿನಗಳ ಮಟ್ಟಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ಅಂದಹಾಗೆ ತನಿಷಾ ಅವರ ಕೋಣ ಚಿತ್ರ ಮುಂದಿನ ಚಿತ್ರ ನವೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಅದರ ಪ್ರಮೋಷನ್ ಶುರು ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಾಮುಂಡೇಶ್ವರಿ ದೇವಿಯಲ್ಲಿ ಪೂಜೆ ಸಲ್ಲಿಸಲು ಹೋಗಿದ್ದಾರೆ. ಆಗ ಅವರಿಗೆ ನಾನ್ ವೆಜ್ ಬಿಡಬೇಕು ಎನ್ನಿಸಿದೆಯಂತೆ. ಅದಕ್ಕಾಗಿ ಇದನ್ನು ಬಿಟ್ಟಿರುವುದಾಗಿ ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಪ್ರತಿಜ್ಞೆ
ನಾನು ಮೊದಲ ಸಲ ಚಾಮುಂಡಿ ಬೆಟ್ಟಕ್ಕೆ ಹೋದೆ. ಅಲ್ಲಿಗೆ ಹೋಗಿ ಬಂದಾಗ ನಾನ್ವೆಜ್ ಬಿಡಬೇಕು ಎನ್ನಿಸಿತು. ಆದ್ದರಿಂದ ದೇವಿಯ ಬಳಿ ಹೇಳಿಕೊಂಡಿದ್ದೇನೆ, ಆದ್ದರಿಂದ ನಾನ್ವೆಜ್ ತಿನ್ನುವುದಿಲ್ಲ ಎಂದಿದ್ದಾರೆ. ಹಾಗೆಂದು ದೇವಿಯ ಬಳಿ ಅವರು ಬೇಡಿಕೊಂಡದ್ದು ಅವರ ಮುಂಬರುವ ಚಿತ್ರ ರಿಲೀಸ್ ಆಗುವವರೆಗೂ ನಾನ್ವೆಜ್ ತಿನ್ನಲ್ಲ ಎಂದು ಅಷ್ಟೇ. ಅದೀಗ ರಿಲೀಸ್ ಆಗಿರುವುದರಿಂದ ನಾನ್ವೆಜ್ ತಿನ್ನುತ್ತಿದ್ದಾರೋ ಗೊತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

