12:06 AM (IST) Oct 03

Karnataka News Live 2nd October 2025 BBK 12 - ರಕ್ಷಿತಾ ಶೆಟ್ಟಿ ಎಲಿಮಿನೇಶನ್ ಬಳಿಕ, ಇನ್ನೋರ್ವ ಸ್ಪರ್ಧಿ ನಾಪತ್ತೆ, ಹಾಗಾದ್ರೆ ಅವರೆಲ್ಲಿ?

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕೆಲವರು ಜಗಳ ಆಡಿದರೆ ಮಾತ್ರ ಇಲ್ಲಿ ಉಳಿಯುತ್ತೇನೆ ಎಂದು ನಂಬಿಕೊಂಡು ಬಂದಹಾಗಿದೆ. ಕೆಲವರು ಫ್ಲರ್ಟ್‌ ಮಾಡಬೇಕು ಅಂತ ಅಂದುಕೊಂಡರೆ, ಮಲ್ಲಮ್ಮ ಜೊತೆಗಿದ್ದರೆ ನಾವು ಕ್ಯಾಮರಾ ಕಣ್ಣಿಗೆ ಬೀಳ್ತೀವಿ ಅಂದುಕೊಂಡಿದ್ದಾರೆ. ಹೀಗಿರುವಾಗ ಓರ್ವ ನಟಿ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ.

Read Full Story
11:41 PM (IST) Oct 02

Karnataka News Live 2nd October 2025 BBK 12 - ಯಪ್ಪಾ.. ಮೊದಲೇ ಪ್ಲ್ಯಾನ್‌ ಮಾಡ್ಕೊಂಡು ಬಂದು ಹೀಗ್‌ ಮಾಡ್ತಿದ್ದಾರಾ? ತಲೆ ಕೆಡೋದು ಬಾಕಿ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ನಾಲ್ಕನೇ ದಿನಕ್ಕೆ ದೊಡ್ಡ ಜಗಳ ಆಗಿದೆ. ವಿಷಯ ಸಣ್ಣದೇ ಆಗಿರಲಿ, ಎಲ್ಲರೂ ಜಗಳ ಆಡುತ್ತಿದ್ದಾರೆ. ಈ ದಿನ ಯಾಕೆ, ಯಾರೆಲ್ಲ ಜಗಳ ಆಡಿಕೊಂಡರು?

Read Full Story
10:56 PM (IST) Oct 02

Karnataka News Live 2nd October 2025 ರಾಜಕೀಯ ಹೇಳಿಕೆಗಳಿಗೆ 'ನೋ ಕಾಮೆಂಟ್ಸ್' - ದಸರಾ ಉದ್ಘಾಟನೆ ವಿವಾದ, ಬಾನು ಮುಷ್ತಾಕ್ ಬಗ್ಗೆ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ಹೇಳಿದ್ದೇನು?

ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ, ಕನ್ನಡ ಕೃತಿಗೆ ಅಂತರರಾಷ್ಟ್ರೀಯ ಗೌರವ ಸಿಕ್ಕಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ಮಾತನಾಡಿದ ಅವರು, ರಾಜಕೀಯ ವಿವಾದಗಳಿಂದ ದೂರವಿದ್ದು, ತಮ್ಮ ಗಮನ ಕೇವಲ ಕನ್ನಡ ಸಾಹಿತ್ಯದ ಮೇಲಿದೆ ಎಂದು ಸ್ಪಷ್ಟಪಡಿಸಿದರು.
Read Full Story
10:29 PM (IST) Oct 02

Karnataka News Live 2nd October 2025 ವಿಜಯದಶಮಿ ಹಬ್ಬದಂದೇ ರಕ್ತಸಿಕ್ತವಾದ ಶಿವಮೊಗ್ಗ; ಅಮ್ಜದ್ ಖಾನ್ ಮೇಲೆ ಡೆಡ್ಲಿ ಅಟ್ಯಾಕ್!

ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿ, ಅಮ್ಜದ್ ಖಾನ್ ಎಂಬ ವ್ಯಕ್ತಿಯ ಮೇಲೆ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಳೆಯ ದ್ವೇಷದ ಶಂಕೆಯ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
10:13 PM (IST) Oct 02

Karnataka News Live 2nd October 2025 kantara chapter 1 movie theater incident - ಹಾವೇರಿಯಲ್ಲಿ ಕಾಂತಾರ ವೀಕ್ಷಣೆ ವೇಳೆ ವಿಚಿತ್ರ ಘಟನೆ, ಮಹಿಳೆಗೆ ದೈವ ಆವಾಹನೆ?

ಹಾವೇರಿಯ ಚಿತ್ರಮಂದಿರದಲ್ಲಿ 'ಕಾಂತಾರ: ಚಾಪ್ಟರ್ 1' ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು, ರಿಷಬ್ ಶೆಟ್ಟಿಯವರ ದೈವದ ದೃಶ್ಯದ ವೇಳೆ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ತೀವ್ರ ಭಾವನಾತ್ಮಕ ಪ್ರಭಾವವನ್ನು ತೋರಿಸಿದೆ

Read Full Story
09:40 PM (IST) Oct 02

Karnataka News Live 2nd October 2025 ಭೀಮಾತೀರದ ಭೀಮನಗೌಡ ಹತ್ಯೆ ಪ್ರಕರಣ - ಇಂದು ಬನ್ನಿ ಕೊಡೋ ನೆಪದಲ್ಲಿ ಪುತ್ರನ ಅಪಹರಣ ಯತ್ನ!

ವಿಜಯಪುರದಲ್ಲಿ ಹತ್ಯೆಯಾದ ಭೀಮನಗೌಡ ಬಿರಾದಾರ್ ಅವರ ಪುತ್ರನನ್ನು, ಹತ್ಯೆಯ ಆರೋಪಿಯೇ ಅಪಹರಿಸಲು ಯತ್ನಿಸಿದ್ದಾನೆ. ಬನ್ನಿ ಕೊಡುವ ನೆಪದಲ್ಲಿ ಮನೆಗೆ ಬಂದ ಆರೋಪಿ ಸುನೀಲ್, 'ನಿನ್ನಪ್ಪನಂತೆ ನಿನ್ನನ್ನೂ ಕೊಲ್ಲುತ್ತೇವೆ' ಎಂದು ಬೆದರಿಸಿ ಅಪಹರಣಕ್ಕೆ ಯತ್ನಿಸಿದ್ದು, ಕುಟುಂಬಸ್ಥರು ಮಗುವನ್ನು ರಕ್ಷಿಸಿದ್ದಾರೆ.

Read Full Story
09:33 PM (IST) Oct 02

Karnataka News Live 2nd October 2025 ಗಂಡಸರು ಚಡ್ಡಿ ಖರೀದಿಸುವ ಸಾಮರ್ಥ್ಯದ ಮೇಲೆ ಒಂದು ದೇಶದ ಆರ್ಥಿಕತೆ ನಿರ್ಧಾರವಾಗುತ್ತದೆ!

ದೇಶದ ಆರ್ಥಿಕ ಸ್ಥಿತಿಯನ್ನು ಜಿಡಿಪಿಯಂತಹ ಗಂಭೀರ ಅಂಕಿಅಂಶಗಳಲ್ಲದೆ, ಮಹಿಳೆಯರ ಸ್ಕರ್ಟ್‌ನ ಉದ್ದ, ಕಸದ ಬುಟ್ಟಿ ಹಾಗೂ ಪುರುಷರು ಚಡ್ಡಿ ಖರೀದಿ ಮಾಡುವ ಸಾಮರ್ಥ್ಯದ ಮೂಲಕವೂ ಊಹಿಸಬಹುದು. ಈ ಲೇಖನವು ಆರ್ಥಿಕ ಹಿಂಜರಿತವನ್ನು ಸೂಚಿಸುವ 5 ಅಸಾಮಾನ್ಯ ಮತ್ತು ಆಘಾತಕಾರಿ ಸೂಚ್ಯಂಕಗಳನ್ನು ವಿವರಿಸುತ್ತದೆ.

Read Full Story
09:03 PM (IST) Oct 02

Karnataka News Live 2nd October 2025 Fact Check - ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ವೈರಲ್ ಸಂದೇಶದ ಸತ್ಯಾಸತ್ಯತೆ ಏನು?

Fact Check: ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡುತ್ತಿದೆ ಎಂದು ಹೇಳುವ ನಕಲಿ ಲಿಂಕ್‌ನೊಂದಿಗೆ ಒಂದು ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಫ್ಯಾಕ್ಟ್ ಚೆಕ್‌ನಲ್ಲಿ ಈ ಸಂದೇಶ ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಇಂತಹ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ. 

Read Full Story
08:35 PM (IST) Oct 02

Karnataka News Live 2nd October 2025 ಕೋಲಾರ ನಕಲಿ ವೈದ್ಯನ ಚಿಕಿತ್ಸೆ; ರಕ್ತ ವಾಂತಿ ಮಾಡುತ್ತಲೇ ಪ್ರಾಣಬಿಟ್ಟ 8 ವರ್ಷದ ಬಾಲಕಿ!

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಕಲಿ ವೈದ್ಯನೊಬ್ಬ ಜ್ವರಕ್ಕೆ ನೀಡಿದ ಹೈ ಡೋಸ್ ಇಂಜೆಕ್ಷನ್‌ನಿಂದ 8 ವರ್ಷದ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಈ ಘಟನೆಯು ಗ್ರಾಮೀಣ ಪ್ರದೇಶಗಳಲ್ಲಿನ ನಕಲಿ ವೈದ್ಯರ ಹಾವಳಿಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

Read Full Story
07:39 PM (IST) Oct 02

Karnataka News Live 2nd October 2025 ಭೂಮಿಯನ್ನು ಅಗೆಯುತ್ತಾ ಇನ್ನೊಂದು ಬದಿಗೆ ತಲುಪಲು ಸಾಧ್ಯವೇ? ರಷ್ಯಾದಲ್ಲಿ ನಡೆದ ಪ್ರಯತ್ನ ಏನಾಯ್ತು?

Kola Superdeep Borehole facts: ಭೂಮಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಅಗೆದು ಹೋಗುವುದು ಅಸಾಧ್ಯ. ಭೂಮಿಯ ಒಳರಚನೆ, ಅಧಿಕ ತಾಪಮಾನ ಮತ್ತು ಒತ್ತಡ ಇದಕ್ಕೆ ಪ್ರಮುಖ ಅಡೆತಡೆಗಳಾಗಿವೆ. ಕೋಲಾ ಸೂಪರ್‌ಡೀಪ್ ಬೋರ್‌ಹೋಲ್‌ನಂತಹ ಯೋಜನೆಗಳು ಸಹ ಸೀಮಿತ ಯಶಸ್ಸನ್ನು ಕಂಡಿವೆ. ತಾಂತ್ರಿಕ ಸವಾಲಾಗಿಯೇ ಉಳಿದಿದೆ

Read Full Story
07:38 PM (IST) Oct 02

Karnataka News Live 2nd October 2025 ಮನೆ ಮನೆಗೆ 'ಬಾವ' ಬರುವ ದಿನಾಂಕ ಫಿಕ್ಸ್ - 2025ರ ಬ್ಲಾಕ್ ಬಸ್ಟರ್ 'ಸು ಪ್ರೇಮ್ ಸೋ' ಕಿರುತೆರೆಗೆ!

2025ರ ಬ್ಲಾಕ್ ಬಸ್ಟರ್ ಚಿತ್ರ 'ಸು ಪ್ರೇಮ್ ಸೋ' ಇದೀಗ ಕಿರುತೆರೆಗೆ ಬರಲು ಸಿದ್ಧವಾಗಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ, ಕರಾವಳಿ ಸಂಸ್ಕೃತಿಯ ಹಾಸ್ಯಮಯ ಕಥೆಯುಳ್ಳ ಈ ಚಿತ್ರವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.

Read Full Story
07:08 PM (IST) Oct 02

Karnataka News Live 2nd October 2025 ಸ್ವರ್ಗ ಅಂದ್ರೆ ಇದಪ್ಪಾ ಅಂತೀರಿ; ಕೇರಳದ 5 ಅದ್ಭುತ ಟ್ರೆಕ್ಕಿಂಗ್ ಸ್ಪಾಟ್‌ಗಳು ಇಲ್ಲಿವೆ ನೋಡಿ!

ಕೇರಳದಲ್ಲಿ ಹಲವಾರು ರೋಮಾಂಚಕಾರಿ ಟ್ರೆಕ್ಕಿಂಗ್ ದಾರಿಗಳಿವೆ. ವೀಕೆಂಡ್ ಟ್ರಿಪ್‌ನ ಭಾಗವಾಗಿ ಸಾಹಸವನ್ನು ಇಷ್ಟಪಡುವವರನ್ನು ಆಕರ್ಷಿಸುವ ಕೆಲವು ಟ್ರೆಕ್ಕಿಂಗ್ ಕೇಂದ್ರಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Read Full Story
06:47 PM (IST) Oct 02

Karnataka News Live 2nd October 2025 ಈ ಹಿಂದಿ ಕಷ್ಟ ಕಣ್ರೀ.. ಗಂಡಸು, ಹೆಂಗಸು ಎಲ್ಲಾ ಕನ್​ಫ್ಯೂಸ್- ನಟ Yash ಏನ್ ಹೇಳಿದ್ರು ನೋಡಿ

ನಟ ಯಶ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಹಿಂದಿ ಭಾಷೆಯಲ್ಲಿನ ಲಿಂಗ ಸಂಬೋಧನೆಯ ಗೊಂದಲದಿಂದಾಗಿ ತಾನು ಹಿಂದಿ ಮಾತನಾಡಲು ಹಿಂಜರಿಯುವುದಾಗಿ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ಈಗ ವೈರಲ್​ ಆಗಿದೆ. 

Read Full Story
06:31 PM (IST) Oct 02

Karnataka News Live 2nd October 2025 ಬೆಂಗಳೂರು ಟ್ರಾಫಿಕ್ ಅಷ್ಟೇ ಅಲ್ಲ, ಮಾನವೀಯತೆಗೂ ಅದ್ಭುತವೆಂದ ಹಿಂದಿ ಭಾಷಿಕ ಟೆಕ್ಕಿ; ರಾಪಿಡೋ ಚಾಲಕನ ಸಹಾಯಕ್ಕೆ ಫಿದಾ!

ಬೆಂಗಳೂರು ಕೇವಲ ಟ್ರಾಫಿಕ್‌ಗೆ ಅಷ್ಟೇ ಅಲ್ಲ, ಮಾನವೀಯತೆಯಲ್ಲಿಯೂ ಅದ್ಭುತವೆಂದು ಹಿಂದಿ ಭಾಷಿಕ ಟೆಕ್ಕಿಯೊಬ್ಬರು ಹೇಳಿದ್ದಾರೆ. ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಪರದಾಡುತ್ತಿದ್ದ ಟೆಕ್ಕಿಗೆ, ಸಹಾಯ ಕೇಳದಿದ್ದರೂ ರಾಪಿಡೋ ಚಾಲಕ ತನ್ನ ಬೈಕ್‌ನಿಂದ ಪೆಟ್ರೋಲ್ ತೆಗದುಕೊಟ್ಟು, ಹಣ ಪಡೆಯದೇ ಸಹಾಯ ಮಾಡಿದ್ದಾರೆ. 

Read Full Story
06:29 PM (IST) Oct 02

Karnataka News Live 2nd October 2025 BBK 12 - ಬಿಗ್‌ ಬಾಸ್‌ಗೂ ಮುಂಚೆ ಮಲ್ಲಮ್ಮ ಫೇಮಸ್‌ ಆಗೋಕೆ ಕನ್ನಡ ಧಾರಾವಾಹಿ ನಟ ಕಾರಣ, ಯಾರದು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಲ್ಲಮ್ಮ ಅವರು ಸ್ಪರ್ಧಿ. 58ನೇ ವಯಸ್ಸಿನಲ್ಲಿಯೂ ಮಲ್ಲಮ್ಮ ಅವರು ಆಕ್ಟಿವ್‌ ಆಗಿದ್ದು, ಎಲ್ಲರಿಗೂ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದಾರೆ. ಇವರನ್ನು ಫೇಮಸ್‌ ಮಾಡಿದ್ದು ಕನ್ನಡ ಧಾರಾವಾಹಿ ನಟ ಅಂತೆ. ಯಾರದು?

Read Full Story
06:23 PM (IST) Oct 02

Karnataka News Live 2nd October 2025 Homeowner harasses maid in Honnavar - ಮನೆ ಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಡಿದ ಮನೆ ಮಾಲೀಕ! FIR

Homeowner harasses maid in Honnavar: ಹೊನ್ನಾವರದಲ್ಲಿ ಮನೆಗೆಲಸಕ್ಕೆ ಬಂದ ಮಹಿಳೆಗೆ ಮಾಲೀಕ ಪ್ರದೀಪ್ ನಾಯ್ಕ್ ಲೈ೧ಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನ ವಿಕೃತಿಗೆ ವಿರೋಧ, ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Read Full Story
05:56 PM (IST) Oct 02

Karnataka News Live 2nd October 2025 ಮೌಂಟ್‌ ಎವರೆಸ್ಟ್‌ ಮೇಲೆ ಲ್ಯಾಂಡ್‌ ಆದ ವಿಶ್ವದ ಏಕೈಕ ಹೆಲಿಕಾಪ್ಟರ್‌ ಈಗ ಕೋಲಾರದಲ್ಲೇ ನಿರ್ಮಾಣ, ಟಾಟಾ ಘೋಷಣೆ

H125 Helicopters in Kolar Karnataka ಏರ್‌ಬಸ್ ಕಂಪನಿಯ, ಮೌಂಟ್ ಎವರೆಸ್ಟ್‌ನಲ್ಲಿ ಲ್ಯಾಂಡ್ ಆದ ವಿಶ್ವದ ಮೊದಲ H125 ಹೆಲಿಕಾಪ್ಟರ್ ಅನ್ನು ಇನ್ನು ಮುಂದೆ ಕರ್ನಾಟಕದ ಕೋಲಾರದಲ್ಲಿ ತಯಾರಿಸಲಾಗುತ್ತದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಈ ಅಸೆಂಬ್ಲಿ ಲೈನ್ ಅನ್ನು ನಿರ್ಮಿಸಲಿದೆ.

Read Full Story
05:36 PM (IST) Oct 02

Karnataka News Live 2nd October 2025 Gadag Communal tension - ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಕಾರಣವಾಯ್ತು ಸಿಗರೇಟ್ ಬಾಕಿ ಹಣ!

Gadag Shirahatti group clash: ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಸಿಗರೇಟ್ ಬಾಕಿ ಹಣದ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘರ್ಷಣೆ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ತಿರುಗಿ, ಆರು ಜನರು ಗಾಯ.. ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

Read Full Story
05:25 PM (IST) Oct 02

Karnataka News Live 2nd October 2025 BBK 12 - 'ನಮ್ಮತ್ತೆ ಮಗಳಿಗೆ ಕಣ್ಣು ಹೊಡಿತೀನಿ'- ಅಶ್ವಿನಿ ಗೌಡ ಉರಿಸೋದ್ರಲ್ಲಿ PHD ಮಾಡಿರೋ ಗಿಲ್ಲಿ ನಟ

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಈಗ ಆಟ ಶುರು ಮಾಡಿದ್ದಾರೆ, ಮೊದಲ ದಿನ ಅಶ್ವಿನಿ ಗೌಡ ಕಾಲಿಗೆ ಬೀಳ್ತೀನಿ ಎಂದು ಹೇಳಿದ್ದ ಅವರೀಗ ಕಾಲೆಳೆಯೋಕೆ ಶುರು ಮಾಡಿದ್ದಾರೆ.

Read Full Story
05:17 PM (IST) Oct 02

Karnataka News Live 2nd October 2025 ರಾಜಸ್ಥಾನ ಬಳಿಕ ಮಧ್ಯಪ್ರದೇಶದಲ್ಲೂ ಕೆಮ್ಮಿನ ಸಿರಪ್ ದುರಂತ ಆರು ಮಕ್ಕಳು ಸಾವು

Cough Syrup Tragedy: ಮಧ್ಯಪ್ರದೇಶದ ಚಿಂದ್ವಾರದಲ್ಲಿ, ಕೆಮ್ಮಿನ ಸಿರಪ್ ಸೇವಿಸಿದ ನಂತರ ಆರು ಮಕ್ಕಳು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಎರಡು ನಿರ್ದಿಷ್ಟ ಸಿರಪ್‌ಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.

Read Full Story