- Home
- Entertainment
- TV Talk
- BBK 12: ಬಿಗ್ ಬಾಸ್‌ಗೂ ಮುಂಚೆ ಮಲ್ಲಮ್ಮ ಫೇಮಸ್ ಆಗೋಕೆ ಕನ್ನಡ ಧಾರಾವಾಹಿ ನಟ ಕಾರಣ, ಯಾರದು?
BBK 12: ಬಿಗ್ ಬಾಸ್‌ಗೂ ಮುಂಚೆ ಮಲ್ಲಮ್ಮ ಫೇಮಸ್ ಆಗೋಕೆ ಕನ್ನಡ ಧಾರಾವಾಹಿ ನಟ ಕಾರಣ, ಯಾರದು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಲ್ಲಮ್ಮ ಅವರು ಸ್ಪರ್ಧಿ. 58ನೇ ವಯಸ್ಸಿನಲ್ಲಿಯೂ ಮಲ್ಲಮ್ಮ ಅವರು ಆಕ್ಟಿವ್ ಆಗಿದ್ದು, ಎಲ್ಲರಿಗೂ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದಾರೆ. ಇವರನ್ನು ಫೇಮಸ್ ಮಾಡಿದ್ದು ಕನ್ನಡ ಧಾರಾವಾಹಿ ನಟ ಅಂತೆ. ಯಾರದು?

ಬೆಂಗಳೂರಿನಲ್ಲಿ ಕೆಲಸ
ಯಾದಗಿರಿ ಜಿಲ್ಲೆಯ ಮಲ್ಲಮ್ಮ ಇಂದು ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ. ಹತ್ತು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬ್ಯೂಟಿಕ್‌ನಲ್ಲಿ ಮಲ್ಲಮ್ಮ ಕೆಲಸ ಮಾಡುತ್ತಾರೆ.
ಮಾತು ಫೇಮಸ್ ಆಯ್ತು
ಮಲ್ಲಮ್ಮ ಅವರ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. Mallamma Talks ಎಂದು ಇನ್‌ಸ್ಟಾಗ್ರಾಮ್ ಅಕೌಂಟ್ ಒಪನ್ ಮಾಡಲಾಗಿದೆ. ಅಲ್ಲಿ ಮಲ್ಲಮ್ಮ ಅವರ ನಾರ್ಮಲ್ ಮಾತಿನ ವಿಡಿಯೋಗಳು ಕಾಣಸಿಗುತ್ತವೆ.
ಆ ನಟ ಯಾರು?
ಮೂರು ವರ್ಷಗಳ ಹಿಂದೆ ಮಲ್ಲಮ್ಮ ಹಾಗೂ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ನಟ ಮನೋಜ್ ಕುಮಾರ್ ಅವರ ಭೇಟಿಯಾಗಿದೆ. ಮಲ್ಲಮ್ಮ ಮಾತನ್ನು ಕೇಳಿ ಮನೋಜ್ ಅವರು Mallamma Talks ಎಂದು ಇನ್‌ಸ್ಟಾಗ್ರಾಮ್ ಅಕೌಂಟ್ ಆರಂಭಿಸಿದ್ದರು, ಅಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು.
ಮನೋಜ್‌ಗೆ ಖುಷಿ
ಮಲ್ಲಮ್ಮ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋಕೆ ಮನೋಜ್ ಕುಮಾರ್ ಅವರೇ ಕಾರಣ. ಅಂದಹಾಗೆ ಬಿಗ್ ಬಾಸ್ ಮನೆಗೆ ಮಲ್ಲಮ್ಮ ಸ್ಪರ್ಧಿಯಾಗಿ ಹೋಗಿರೋದು ಮನೋಜ್‌ಗೆ ತುಂಬ ಖುಷಿಯಾಗಿದೆ.
ಮಲ್ಲಮ್ಮರ ಕಷ್ಟದ ಜೀವನ
ಮಲ್ಲಮ್ಮ ಅವರು 15ನೇ ವಯಸ್ಸಿಗೆ ಮದುವೆಯಾಗಿದ್ದರು, ಗಂಡ ಕುಡುಕ, ಇಬ್ಬರು ಮಕ್ಕಳು. ಮದುವೆಯಾಗಿ ಹತ್ತನೇ ವರ್ಷಕ್ಕೆ ಮಲ್ಲಮ್ಮಳ ಗಂಡ ತೀರಿಕೊಂಡಿದ್ದರು. ಅದಾದ ನಂತರದಲ್ಲಿ ಅವರು ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದರು.