ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಲ್ಕನೇ ದಿನಕ್ಕೆ ದೊಡ್ಡ ಜಗಳ ಆಗಿದೆ. ವಿಷಯ ಸಣ್ಣದೇ ಆಗಿರಲಿ, ಎಲ್ಲರೂ ಜಗಳ ಆಡುತ್ತಿದ್ದಾರೆ. ಈ ದಿನ ಯಾಕೆ, ಯಾರೆಲ್ಲ ಜಗಳ ಆಡಿಕೊಂಡರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಲ್ಕನೇ ದಿನ, ಸ್ಪರ್ಧಿಗಳು ವಿಷಯ ಏನೇ ಇದ್ದರೂ ಕೂಡ ಜಗಳ ಆಡೋಕೆ ರೆಡಿಯಾಗಿದ್ದರು. ನಮ್ಮ ಧ್ವನಿ ಕೇಳಿಸಿಯೇ ಇಲ್ಲ, ನಾವು ಕಾಣಿಸಬೇಕು ಎಂದು ಕೆಲವರು ದನಿ ಏರಿಸಿ ಮಾತನಾಡಿದ್ದು ಕಾಣಿಸ್ತಿತ್ತು. ಸುಖಾ ಸುಮ್ಮನೇ ಅಭಿಷೇಕ್ ಶ್ರೀಕಾಂತ್, ಡಾಗ್ ಸತೀಶ್ ಕೂಗಾಡಿದರು. ಹಾಗಾದರೆ ಯಾವೆಲ್ಲ ವಿಷಯಕ್ಕೆ ಜಗಳ ಆಯ್ತು?
ಅಡುಗೆ ಮನೆ ವಿಚಾರಕ್ಕೆ ಜಗಳ
ಊಟ-ತಿಂಡಿ ಮಾಡಿದ್ದು, ಕಾಫಿ ಕುಡಿದ ಟೀ ಕಪ್, ಪ್ಲೇಟ್‌ನ್ನು ಬಳಸಿರುವವರು ತೊಳೆಯುತ್ತಿಲ್ಲ. ಹಾಗೆಯೇ ಇಟ್ಟಿದ್ದಾರೆ. ಯಾರು ಯಾರು ಎಲ್ಲೆಲ್ಲಿ ಕಪ್ ಇಟ್ಟಿದ್ದೀರೋ ಅದನ್ನು ತೊಳೆದಿಡಿ ಅಂತ ಅಭಿಷೇಕ್ ಶ್ರೀಕಾಂತ್, ಧ್ರುವಂತ್ ಅವರು ಕಿರುಚಿ ಹೇಳಿದ್ದಾರೆ. ಒಂಟಿಗಳು ಅರಸರು, ಜಂಟಿಗಳು ಗುಲಾಮರು. ಒಂಟಿಗಳು ಹೇಳಿದ ಕೆಲಸವನ್ನು ಜಂಟಿಗಳು ಕೇಳಬೇಕು.
“ನೀವ್ಯಾಕೆ ಬಡ್ಕೋತಿದೀರಾ? ಸುಮ್ಮನೆ ಬಡ್ಕೋಬೇಡಿ, ಬಡ್ಕೊಂಡರೆ ಪರಿಹಾರ ಆಗೋದಿಲ್ಲ. ಎತ್ಕೊಂಡು ಹೋಗಿ ತೊಳೆಯಬೇಕಿತ್ತು. ಯಾರದ್ದೇ ಆಗಲಿ, ಆ ಕಪ್ ತೊಳೆದರೆ ಯಾರ ಮನೆ ಗಂಟೂ ಹೋಗಲ್ಲ” ಎಂದು ಡಾಗ್ ಸತೀಶ್ ಅವರು ಕೂಗಾಡಿದ್ದಾರೆ.
ಅಶ್ವಿನಿ ಗೌಡ-ಕಾವ್ಯ ಶೈವ ಜಗಳ
“ಇಲ್ಲಿ ಎಲ್ಲರೂ ನಿಯಮವನ್ನು ಪಾಲಿಸಬೇಕು. ಜಂಟಿಗಳು ಮಾಡಿದ ತಪ್ಪಿಗೆ ನಮಗೆ ಮೂರು ದಿನದಿಂದ ಸರಿಯಾಗಿ ಊಟ ಇಲ್ಲ. ಇಲ್ಲಿ ಎಲ್ಲರೂ ಒಂಟಿಯಾಗಿ ಬಂದಿರೋದು. ಎಲ್ಲರೂ ಇಗೋ ಬಿಡಿ” ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ಆಗ ಕಾವ್ಯ ಶೈವ ಅವರನ್ನು ಮಾತನ್ನು ಕೇಳಿಸಿಕೊಳ್ಳದೆ, ಬೇರೆ ಕಡೆಗೆ ನೋಡಿದ್ದಾರೆ. ಆಗ ಅಶ್ವಿನಿ ಗೌಡಗೆ ಸಿಟ್ಟು ತರಿಸಿದೆ. ಇದೇ ವಿಚಾರಕ್ಕೆ ಜಗಳ ಆಗಿದೆ. “ನಾನು ಆ ಕಡೆ ಈ ಕಡೆ ನೋಡಿದರೂ ಕೂಡ ನಾನು ಕೇಳಿಸಿಕೊಳ್ಳುತಿದ್ದೇನೆ” ಎಂದು ಅಶ್ವಿನಿಗೆ ಕಾವ್ಯ ಉತ್ತರ ಕೊಟ್ಟಿದ್ದಾರೆ. ಆಮೇಲೆ ಕಾವ್ಯಾ ಶೈವ ಸಹಾಯಕ್ಕೆ ಗಿಲ್ಲಿ ನಟ ಬಂದಿದ್ದರು. ಮತ್ತೆ ಒಂದಿಷ್ಟು ಜಗಳ ಆಗಿದೆ. “ನಾಳೆಯಿಂದ ಯಾವುದೇ ಸೇವಕರು ತಟ್ಟೆ, ಲೋಟ ತಗೊಂಡರೆ ಅದನ್ನು ತೊಳೆಯಬೇಕು, ನಾನು ಯಾರಿಗೂ ಕೇರ್ ಮಾಡೋದಿಲ್ಲ. ನಿಯಮ ಮುರಿದರೆ ಕಠಿಣ ಶಿಕ್ಷೆ ಕೊಡುವೆ” ಎಂದು ಅಶ್ವಿನಿ ಗೌಡ ಅವರು ಎಲ್ಲರಿಗೂ ಹೇಳಿದ್ದಾರೆ.
“ಇಲ್ಲಿ ನಾಲ್ಕು ಜನರು ಕೆಲಸ ಮಾಡುತ್ತಿದ್ದಾರೆ, ಉಳಿದವರು ಏನೂ ಮಾಡುತ್ತಿಲ್ಲ” ಎಂದು ಧ್ರುವಂತ್ ಕೂಗಾಡಿದ್ದಾರೆ.
“ನಮ್ಮ ಮೇಲೆ ಅಶ್ವಿನಿ ಅವರಿಗೆ ಏನಾದರೂ ಹೇಳಬೇಕು. ನಾವು ಎಲ್ಲಿ ನೋಡಿದರೆ ಏನು? ಕೇಳಿಸಿಕೊಳ್ಳುತ್ತಿದ್ದೀವಿ, ಅಲ್ವಾ? ಅವರ ಮುಖ ನೋಡಿಕೊಂಡು ಇರೋಕೆ ಅವರ ಮುಖದಲ್ಲಿ ಕೋತಿ ಕುಣಿತಿದ್ಯಾ? ನಮ್ಮಿಬ್ಬರನ್ನು, ಬೇರೆ ಜೋಡಿಗಳನ್ನು ನೋಡೋದು ಬೇರೆ ಬೇರೆ ಥರ ಇದೆ. ಇದು ನೋಡುವರಿಗೆ ಗೊತ್ತಾಗುತ್ತದೆ” ಎಂದು ಕಾವ್ಯ ಶೈವ-ಗಿಲ್ಲಿ ನಟ ಇಬ್ಬರೇ ಸಪರೇಟ್ ಆಗಿ ಮಾತನಾಡಿಕೊಂಡಿದ್ದಾರೆ.
“ಕಾವ್ಯಾ ಮುಖ ಕಿವುಚಿಕೊಂಡು ಮಾತಾಡಿರೋದು ನನಗೆ ಸಿಟ್ಟು ತರಿಸಿದೆ. ಗಿಲ್ಲಿ ಉಲ್ಟಾ ಹೊಡೆದ. ಆಗ ನೀವೆಲ್ಲ ಮಾತನಾಡಿದರೆ ಸರಿಯಾಗುತ್ತದೆ, ಆಗ ಗಿಲ್ಲಿ ಬುದ್ಧಿ ಕಲಿಯುತ್ತಾನೆ” ಎಂದು ಅಶ್ವಿನಿ ಗೌಡ ಅವರು ಬೆಡ್ ರೂಮ್ ಏರಿಯಾದಲ್ಲಿ ಮಾತನಾಡಿದ್ದಾರೆ.
ಮಲ್ಲಮ್ಮ, ಧನುಷ್ ಗೌಡ, ಸುಧಿ, ಚಂದ್ರಪ್ರಭ, ಸತೀಶ್ ಅವರಲ್ಲಿ ಒಬ್ಬರು ಫೈನಲಿಸ್ಟ್ ಆಗಿ ಆಯ್ಕೆಯಾಗಲು ಒಂದು ಟಾಸ್ಕ್ ನೀಡಲಾಗಿತ್ತು. ಟಾಸ್ಕ್‌ನ್ನು ಸರಿಯಾಗಿ ಅರ್ಥೈಸಿಕೊಂಡು ಆಡಬೇಕಿತ್ತು. ಇದರ ಜವಾಬ್ದಾರಿಯನ್ನು ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ ಗೌಡ ವಹಿಸಿಕೊಂಡಿದ್ದರು. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಧನುಷ್ ಗೌಡ ಸರಿಯಾಗಿ ಅರ್ಥ ಮಾಡಿಕೊಂಡು ಆಟ ಆಡಿದ್ದರು, ಆದರೆ ಬೇರೆಯವರು ತಪ್ಪು ನಿಯಮ ಪಾಲಿಸಿ ಗೆದ್ದಿದ್ದರು. ಆಟ ಹೀಗೆ ಕಂಟಿನ್ಯೂ ಆದರೆ ನನಗೆ ಮೋಸ ಆಗುವುದು ಅಂತ ಧನುಷ್ ಗೌಡ ಹೇಳಿದರೆ, ಆಟ ಕಂಟಿನ್ಯೂ ಆಗಬೇಕು ಅಂತ ಸುಧಿ ಹೇಳಿದ್ದರು. ಈ ವಿಚಾರವಾಗಿ ಅಶ್ವಿನಿ ಗೌಡ, ಧನುಷ್ ಗೌಡ, ಕಾಕ್ರೋಚ್ ಸುಧಿ, ಕಾವ್ಯಾ ಶೈವ ಅವರು ಜಗಳ ಆಡಿಕೊಂಡಿದ್ದಾರೆ. ಇಲ್ಲಿ ಒಂಟಿಗಳೇ ಒಗ್ಗಟ್ಟು ಮುರಿದುಕೊಂಡು ಜಗಳ ಆಡಿದ್ದಾರೆ.
